ಓದುವ ಹವ್ಯಾಸದಿಂದ ವ್ಯಕ್ತಿತ್ವ ವಿಕಸನ
ಉಜಿರೆ: ಆಟ-ಪಾಠಗಳು ಜೊತೆಯಾಗಿದ್ದಾಗ ಶಿಕ್ಷಣ ಅರ್ಥಪೂರ್ಣವಾಗಿದ್ದು ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಪುಸ್ತಕದಜೊತೆಇದ್ದಾಗ ಮಸ್ತಕದ ವಿಕಾಸವೂ ಆಗುವುದರಿಂದ ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮೀಜಿ ಹೇಳಿದರು.
ಅವರು ಶನಿವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಶಾಂತಿವನಟ್ರಸ್ಟ್ ನಿಂದ ಪ್ರಕಟಿಸಿದ “ಜ್ಞಾನದರ್ಶಿನಿ ಮತ್ತುಜ್ಞಾನವರ್ಷಿಣಿ” ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಪುಸ್ತಕಗಳನ್ನು ಓದುವುದರಿಂದಜ್ಞಾನವೃದ್ಧಿಯೊಂದಿಗೆ ಮಸ್ತಕದ ವಿಕಾಸವೂ ಆಗುತ್ತದೆ.ಕಾಲಹರಣ ಮಾಡುವ ಮೊಬೈಲ್ ಫೋನ್ ಬಳಕೆಯ ಚಟವನ್ನುಕಡಿಮೆ ಮಾಡಿ, ದೃಢಸಂಕಲ್ಪದೊಂದಿಗೆ ನಿರ್ಧಿಷ್ಟಗುರಿಯನ್ನುಇಟ್ಟುಕೊಂಡುಉನ್ನತ ಸಾಧನೆ ಮಾಡಬೇಕು.ಸಾಧನೆ ಸಾಧಕರ ಸೊತ್ತು, ಅಲ್ಲದೆ ಸೋಮಾರಿಗಳ ಸೊತ್ತುಅಲ್ಲ. ಪಠ್ಯದಜೊತೆಗೆ ನಿತ್ಯವೂಇತರ ಪುಸ್ತಕಗಳನ್ನೂ ಓದಬೇಕು.ಸರ್ಕಾರ ಮಾಡಬೇಕಾದ ಕೆಲಸವನ್ನು ಧರ್ಮಸ್ಥಳದ ವತಿಯಿಂದ ಮಾಡುತ್ತಿದ್ದು, ಪುಸ್ತಕ ಪ್ರಕಾಶನರಾಜ್ಯಕ್ಕೆ ಮಾದರಿಕಾರ್ಯಕ್ರಮವಾಗಿದೆಎಂದು ಸ್ವಾಮೀಜಿ ಹೆಗ್ಗಡೆಯವರನ್ನು ಅಭಿನಂದಿಸಿದರು.
ಚಲನಚಿತ್ರ ಸಂಗೀತ ನಿರ್ದೇಶಕಅರ್ಜುನ್‌ಜನ್ಯ ಶುಭಾಶಂಸನೆ ಮಾಡಿಕಲೆಯನ್ನು ತಪಸ್ಸಿನಂತೆ ಏಕಾಗ್ರತೆ ಮತ್ತು ಸತತ ಪ್ರಯತ್ನದಿಂದಅಭ್ಯಾಸ ಮಾಡಿದರೆಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆಎಂದು ಹೇಳಿದರು.
ದಕ್ಷಿಣಕನ್ನಡಜಿಲ್ಲಾಡಿ.ಡಿ.ಪಿ.ಐ. ವೆಂಕಟೇಶ ಸುಬ್ರಾಯ ಪಟಗಾರ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಂಡು ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರಾಗಬೇಕುಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಮಾನವೀಯತೆಇಲ್ಲದಜನ್ಮ ವ್ಯರ್ಥ.ಗುರು-ಹಿರಿಯರನ್ನುಗೌರವಿಸುವುದು, ಸಮಾನ ಮನಸ್ಕರಲ್ಲಿ ಸ್ನೇಹಿತರಂತೆ ಪ್ರೀತಿ-ವಿಶ್ವಾಸದಿಂದ ವ್ಯವಹರಿಸುವುದು ಹಾಗೂ ಕಿರಿಯರಲ್ಲಿ ಪ್ರೀತಿ, ಕರುಣೆ ಅನುಕಂಪ ತೋರಿಸುವುದುಇತ್ಯಾದಿ ಮಾನವೀಯ ಮೌಲ್ಯಗಳಿಂದ ಜೀವನ ಪಾವನವಾಗುತ್ತದೆ.ಆದುದರಿಂದಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಜೊತೆಗೆಉತ್ತಮ ಸಂಸ್ಕಾರ, ಶಿಸ್ತು ಮತ್ತು ಮಾನವೀಯ ಮೌಲ್ಯಗಳನ್ನೂ ಕಲಿಸಿಕೊಡಲಾಗುತ್ತದೆ ಎಂದರು.
ಡಿ. ಹರ್ಷೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್ ಮತ್ತು ಪೂರನ್‌ವರ್ಮ ಉಪಸ್ಥಿತರಿದ್ದರು.
ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಯೋಗ ನಿರ್ದೇಶಕ ಶಶಿಕಾಂತ್ ಜೈನ್,ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯನ್ನು ಈ ವರ್ಷಉತ್ತರಕನ್ನಡಜಿಲ್ಲೆಯಯಲ್ಲಾಪುರಕ್ಕೂ ವಿಸ್ತರಿಸಲಾಗುವುದುಎಂದು ಪ್ರಕಟಿಸಿದರು.
ಅಂಚೆ-ಕುಂಚ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.