ಓಮಿನಿ-ಆಲ್ಟೊ ಕಾರು ಮುಖಾಮುಖಿ ಡಿಕ್ಕಿ; ಓರ್ವ ಗಂಭೀರ, ಮೂವರಿಗೆ ಗಾಯ
ಕಾರ್ಕಳ-ಓಮಿನಿ ಮತ್ತು ಆಲ್ಟೊ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಗಂಭೀರಗೊಂಡು, ಮೂವರು ಗಾಯಗೊಂಡ ಘಟನೆ ಸಾಣೂರು ಕೋಳಿ ಫಾರಂ ಸಮೀಪ ನಡೆದಿದೆ.ಅವಘಡದಲ್ಲಿ ಓಮಿನಿ ಕಾರಿನಲ್ಲಿದ್ದ ಆಫ್ರಿದ್, ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾಗೂ ಅನ್ವಿಸ್, ಅಶ್ವಿನ್ ಮತ್ತು ಅಗ್ಮ ಗಾಯಗೊಂಡಿದ್ದಾರೆ. ಇವರೆಲ್ಲರೂ ಮೂಡಬಿದಿರೆಯವರೆಂದು ತಿಳಿದುಬಂದಿದೆ.ಮೂಡುಬಿದಿರೆಯಿಂದ ಕಾರ್ಕಳದ ರೆಸಾಟ್೯ ಕಡೆಗೆ ಬರುತ್ತಿದ್ದ ಓಮಿನಿ ಕಾರು ಹಾಗೂ ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಹೋಗುತ್ತಿದ್ದ ಆಲ್ಟೋ ಕಾರು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಕಾರಿನಲ್ಲಿ ಸಿಲುಕಿದ್ದ ಆಫ್ರಿದ್ ನನ್ನು ಕ್ರೇನ್ ಮೂಲಕ ಹೊರತೆಗೆಯಲಾಯಿತು. ಸುಮಾರು ಮುಕ್ಕಲು ಗಂಟೆಗಳ ಕಾರ್ಯಾಚರಣೆ ಬಳಿಕ ಕ್ರೇನ್ ಬಳಸಿ ಆತನನ್ನು ಹೊರತೆಗೆಯಲಾಯಿತು. ಇದೀಗ ಆತನ ಸ್ಥಿತಿ ಗಂಭೀರವಾಗಿದ್ದು, ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆ ನಡೆದ ೧೦ ನಿಮಿಷಗಳೊಳಗಾಗಿ ೧೦೮ ಅಂಬುಲೆನ್ಸ್ ಘಟನಾ ಸ್ಥಳಕ್ಕೆ ಆಗಮಿಸಿದೆಯಾದರೂ, ಗಾಯಾಳು ವಾಹನದೊಳಗೆ ಸಿಲುಕಿಕೊಂಡಿರುವುದರಿಂದ ಆಸ್ಪತ್ರೆಗೆ ಕರೆದೊಯ್ಯಲು ತಡವಾಗಿತ್ತು ಎನ್ನಲಾಗಿದೆ.