ಕ್ರೀಡಾಸಾಮಗ್ರಿ ವಿತರಣೆ
ಅಣ್ಣಿಗೇರಿ,ಆ.11:ಚಂದ್ರಶೇಖರ್ ಆಜಾದ್ ಜನ್ಮ್ ದಿನಾಚರಣೆಯ ಅಂಗವಾಗಿ ಪಟ್ಟಣದ ಸರಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆಯಲ್ಲಿ ನೆಹರು ಯುವ ಕೇಂದ್ರ ಧಾರವಾಡ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಇವುಗಳ ಆಶ್ರಯದಲ್ಲಿ ನೇತಾಜಿ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಮಕ್ಕಳಿಗೆ ಕ್ರೀಡಾ ಸಾಮಗ್ರಿ ಮತ್ತು ನೋಟಬುಕ್ ವಿತರಣೆ ಕಾರ್ಯಕ್ರಮ ಉದ್ಘಾಟನೆಯನ್ನು ಪುರಸಭೆ ಸ್ಥಾಯಿ ಸಮೀತಿ ಅಧ್ಯಕ್ಷ ರೈಮಾನಸಾಬ ಹೊರಗಿನಮನಿ ನೆರವೇರಿಸಿದರು
ಕಾರ್ಯಕ್ರಮ ಉದ್ದೇಶಿಸಿ ಸಂಸ್ಥೆಯ ಅಧ್ಯಕ್ಷರಾದ ಬುಡ್ಡಾ ಬೆಟಗೇರಿ ಮಾತನಾಡಿದರು. ಭಾರತ ಸ್ವತಂತ್ರ ವಾಗಲು ದಿಟ್ಟ ಸ್ವಾಭಿಮಾನ ರೂವಾರಿ ತಿವಾರಿ ಚಂದ್ರ ಶೇಖರ್ ದಿಂದ ಆಜಾದ್ ಎಂದೇ ಗುರ್ತಿಸಲ್ಪಡುವ ಯುವ ಪೀಳಿಗೆಗೆ ಆದರ್ಶ ವ್ಯಕ್ತಿಯನ್ನು ಸ್ಮರಣಿ ಮಾಡುತ್ತಿರುವದು ವಿಶೇಷ ಹಾಗೂ ಇನ್ನು ಹೆಚ್ಚಿನ ರೀತಿ ಇಲಾಖೆ ಸಂಯೋಗ ದಲ್ಲಿ ಬಡಮಕ್ಕಳಿಗೆ ಸಹಾಯ ಸಹಕಾರ ನೀಡಲಾಗುವದು ಎಂದು ಹೇಳಿದರು,
ಪ್ರದಾನ ಗುರುಗಳಾದ ಎ ಆರ್ ಅಕ್ಕಿ ಕೆಐ ಅಣ್ಣಿಗೇರಿ, ಆರ್ ಜಿ ಸುಕನ್ಯಾ, ಚಾಂದುಸಾಬ ಹೂಲಿ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು.