ಉನ್ನತ ಶಿಕ್ಷಣ ಸಚಿವರ ಪ್ರವಾಸ
ಕಲಬುರಗಿ:ಆ.11: ರಾಜ್ಯದ ಉನ್ನತ ಶಿಕ್ಷಣ‌ ಸಚಿವ ಡಾ.‌ಎಂ.ಸಿ.ಸುಧಾಕರ್ ಅವರು ಬೆಂಗಳೂರಿನಿಂದ ವಿಮಾನದ ಮೂಲಕ ಆಗಸ್ಟ್ 12 ರಂದು ಬೆಳಿಗ್ಗೆ 9.30 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು.
ಅಂದು ಬೆಳಿಗ್ಗೆ 10.45 ಗಂಟೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರದಲ್ಲಿ ನಡೆಯಲಿರುವ ವಿ.ವಿ.ಯ 42ನೇ ವಾರ್ಷಿಕ ಘಟಿಕೋತ್ಸವದಲ್ಲಿ ಸಚಿವರು ಭಾಗಿಯಾಗುವರು.
ಸಂಜೆ 4.30 ರಿಂದ 6.30 ಗಂಟೆ ವರೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿ ಸಾಯಂಕಾಲ 6.50 ಗಂಟೆಗೆ ವಿಮಾನದ‌ ಮೂಲಕ ಮರಳಿ ಬೆಂಗಳೂರಿಗೆ ಪ್ರಯಾಣಿಸುವರು.