ಬೆಂಗಳೂರಿನಲ್ಲಿ ಗ್ರಂಥಪಾಲಕರ ಸಮಾವೇಶ:ಜಿಲ್ಲೆಯಿಂದ ಹೊರಟ ತಂಡಕ್ಕೆ ಜಿಲ್ಲಾ ಪಂಚಾಯತ್ ಸಿ.ಇ.ಓ ಅವರಿಂದ ಹಸಿರು ನಿಶಾನೆ
ಕಲಬುರಗಿ:ಆ.11: ಬೆಂಗಳೂರಿನಲ್ಲಿ ಸೋಮವಾರ ಸಂಜೆ ನಡೆಯಲಿರುವ ರಾಜ್ಯ ಮಟ್ಟದ ಅರಿವು ಕೇಂದ್ರ ಗ್ರಂಥಪಾಲಕರ ಸಮಾವೇಶಕ್ಕೆ ಭಾಗಿಯಾಗಲು ಹೊರಟ ಜಿಲ್ಲೆಯ ತಂಡಕ್ಕೆ ರವಿವಾರ ಸಂಜೆ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು ಜಿಲ್ಲಾ ಪಂಚಾಯತ್ ಕಚೇರಿ ಅವರಣದಲ್ಲಿ ಬಸ್ ಗೆ ಹಸಿರು ನಿಶಾನೆ ತೋರಿ ಶುಭ ಕೋರಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಸಮಾವೇಶಕ್ಕೆ ಭಾಗಿಯಾಗಲು ಜಿಲ್ಲೆಯಿಂದ 178 ಗ್ರಾಮ ಪಂಚಾಯತ್ ಅರಿವು ಕೇಂದ್ರಗಳ ಮೇಲ್ವಿಚಾರಕರು ಮತ್ತು 11 ಜನ ನೋಡಲ್ ಅಧಿಕಾರಿಗಳಾಗಿರುವ ಸಹಾಯಕ ನಿರ್ದೇಶಕರುಗಳು (ಪಂಚಾಯತ್ ರಾಜ್) ಸೇರಿ ಒಟ್ಟು 194 ಜನ ಬೆಂಗಳೂರಿಗೆ ತೆರಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಸಹಾಯಕ ಕಾರ್ಯದರ್ಶಿ ವೀರೇಂದ್ರ ಕುಮಾರ ಸೇರಿದಂತೆ ಮೊದಲಾದವರು ಇದ್ದರು.