ನೀರಿನ ಮಹತ್ವ ಕುರಿತು ಜಾಗೃತಿ ಅಗತ್ಯ
ಕಲಬುರಗಿ,ಆ.11-ವಾಟರ್ ಏಡ್ ಸಂಸ್ಥೆಯ ಅಮೃತ ವಷಿ9ಣಿ ಯೋಜನೆ ಅಡಿಯಲ್ಲಿ ಆಳಂದ ತಾಲೂಕಿನ ಕೇರಿ ಅಂಬಲಗಾ ಗ್ರಾಮ ಪಂಚಾಯತ್‍ಯಲ್ಲಿ ಜಲ ಸಂರಕ್ಷಣೆ ಕುರಿತು ಮುಂಚೂಣಿ ಸಿಬ್ಬಂದಿಗಳಿಗೆ ಸಾಮಥ್ರ್ಯ ಅಭಿವೃದ್ದಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಅಮೃತ ವಷಿ9ಣಿ ಯೋಜನೆ ಜಿಲ್ಲಾ ಸಂಯೋಜಕ ಅಭಯರಾಜ ಗಣೇಶ್ ಅವರು ಜ್ಯೋತಿ ಬೇಳಗಿಸುವ ಮೂಲಕ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಳೆಯ ಕೊರತೆಯಿಂದ ಕಲಬುರ್ಗಿ ಜಿಲ್ಲೆಯಾದ್ಯಂತ ಈ ವರ್ಷ ಬರಗಾಲ ಉಂಟಾಗಿದ್ದು ನೀರಿನ ಮಹತ್ವ ಮತ್ತು ಇದರ ಉಳಿಯುವಿಕೆ ಸಮುದಾಯಕ್ಕೆ ಅರಿವಿನ ಅಗತ್ಯವಿದೆ.ಸಮುದಾಯವು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಭೂಮಿಗೆ ನೀರು ಇಂಗಿಸುವ ಕಾಮಗಾರಿಗಳಾದ ಇಂಜೆಕ್ಷನ್ ಬೋರ್ ವೆಲ್, ಮಳೆ ನೀರು ಕೊಯ್ಲು, ಇಂಗುಗುಂಡಿ, ಕೆರೆ ನಿರ್ಮಾಣ ಕಾಮಗಾರಿ ಕೆಲಸ ಆಗಬೇಕಾಗಿದೆ ಎಂದರು. ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ವಿಜಯ ಸನ್ನದಿ ಮಾತನಾಡಿ, ವಾಟರ್ ಏಡ್ ಸಂಸ್ಥೆಯು ಮಾಡುತ್ತಿರುವ ಚೆಕ್ ಡ್ಯಾಂ ಪುನರ್ ನಿರ್ಮಾಣ, ಇಂಗು ಗುಂಡಿ ಅನೇಕ ಕಾಮಗಾರಿಗಳು ಸಂಸ್ಥೆಯ ವತಿಯಿಂದ ಮಾಡುತ್ತಿರುವುದು ತುಂಬಾ ಒಳ್ಳೆಯ ಕೆಲಸವಾಗಿದೆ ಎಂದರು.
ಹಿರಿಯ ಪಶುವೈದ್ಯ ಪರೀಕ್ಷಕ ಸಿದ್ದಪ್ಪ ಮಾಹಾಗಾಂವ ಮಾತನಾಡಿ, ನಾವು ನೀರಿನ ಮಹತ್ವದ ಕುರಿತು ಜಾಗೃತಿಯನ್ನು ಮೂಡಿಸುವುದು ಬಹಳ ಮುಖ್ಯವಾಗಿದೆ. ಈಗಿನ ಪರಿಸ್ಥಿತಿ ನೋಡಿದರೆ ಬೇಸಿಗೆಯಲ್ಲಿ ನೀರು ಸಿಗುತ್ತಿಲ್ಲ ಹೀಗೆ ಇದ್ದರೆ ಮುಂದೆ ಮಳೆಗಾಲದ ಸಮಯದಲ್ಲಿ ನೀರು ಸಿಗುವುದಿಲ್ಲ ಆಗ ಪಶು, ಪಕ್ಷಿಗಳು ಮತ್ತು ಜನರ ಗತಿ ಬಹಳ ಚಿಂತಾಜನಕ ಸ್ಥಿತಿಗೆ ಬರಬಹುದು ಕಾರಣ ಇಂದಿನಿಂದಲೇ ನೀರಿನ ರಕ್ಷಣಾ ಕೆಲಸ ಆಗಬೇಕಾಗಿದೆ ಎಂದರು.
ಸಂಸ್ಥೆಯ ಇಂಜಿನಿಯರ್ ನಾಗರೇಡಿ ಪಾಟಿಲ್ ಮಾತನಾಡಿ, ನೀರು ಮಿತವಾಗಿ ಬಳಸಬೇಕು. ಮಳೆ ನೀರು ಭೂಮಿಗೆ ಇಂಗಿಸುವ ಕೆಲಸ ಆಗಬೇಕಾಗಿದೆ ಎಂದರು. ತರಬೇತಿಯಲ್ಲಿ ಭೀಮರಾವ್ ಭಾರತಿ, ವಾಟರ್ ಏಡ್ ಸಂಸ್ಥೆಯ ಸಿಬ್ಬಂದಿ ಮಲ್ಲಿಕಾರ್ಜುನ, ಗ್ರಾಮ ಪಂಚಾಯತ್ ಸದಸ್ಯ ಮಾರುತಿ, ಸಿಬ್ಬಂದಿ, ಕಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವಿಶ್ವರಾಜ, ಅನೀಲ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತ ರು, ಗ್ರಾಮ ಪಂಚಾಯತ್ ಪಂಪ್ ಆಪರೇಟರ್‍ಗಳು ಭಾಗವಹಿಸಿದ್ದರು..