16 ರಂದು ಹುಣಸಿಹಡಗಿಲ್ ಗ್ರಾಮದಲ್ಲಿ ರಥೋತ್ಸವ
ಕಲಬುರಗಿ:ಆ,11: ತಾಲೂಕಿನ ಹುಣಸಿಹಡಗಿಲ್ ಗ್ರಾಮದಲ್ಲಿ ಮೂರು ದಿನಗಳ ಬಸವಲಿಂಗಪ್ಪಾ ಅಪ್ಪಾಜಿಯವರ 20 ನೇ ವರ್ಷದ ಜಾತ್ರಾ ಮಹೋತ್ಸವ ಆ. 15 ರಿಂದ ಪ್ರಾರಂಭವಾಗಲಿದೆ.ಆ. 16 ರಂದು ಸಂಜೆ 6 ಗಂಟೆಗೆ ವೀರಮಹಾಂತ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ಮತ್ತು ಗುಂಡುರಾವ ಅಪ್ಪಾಜಿಯವರ ಸಾನಿಧ್ಯದಲ್ಲಿ ಹಾಗೂ ಬಸವರಾಜಪ್ಪಾ ಅಪ್ಪಾಜಿಯವರ ನೇತೃತ್ವದಲ್ಲಿ ರಥೋತ್ಸವ ಜರುಗುವದು.
15 ರಂದು ಬೆಳಿಗ್ಗೆ 6 ಗಂಟೆಗೆ ಬಸವಲಿಂಗಪ್ಪಾ ಅಪ್ಪಾಜಿಯವರ ಕತರ್ುೃ ಗದ್ದುಗೆಗೆ ರುದ್ರಾಭಿಷೇಕ,ಸಹಸ್ರ ಬಿಲ್ವಾರ್ಚನೆ,ರಾತ್ರಿ 8 ಕ್ಕೆ ಉಚ್ಛಾಯಿ ಕಾರ್ಯಕ್ರಮ ನಂತರ ಸಂಗೀತ ಕಾರ್ಯಕ್ರಮ ನಡೆಯಲಿದೆ.
16 ರಂದು ಸಂಜೆ 4 ಗಂಟೆಗೆ ಮಲ್ಲಿಕಾರ್ಜುನ ಮೂಲಗೆ ಮನೆತನದಿಂದ ಕಳಸಾರೋಹಣ, ವೇಮೂ ವೀರಯ್ಯ ಹಿರೇಮಠ ಅವರ ಮಠದಿಂದ ನಂದಿಧ್ವಜ ಮೆರವಣಿಗೆ ,ಕೈಲಾಸ ಪೊಲೀಸ್ ಪಾಟೀಲ ಮತ್ತು ಶರಣಬಸಪ್ಪ ಮಾಲಿ ಪಾಟೀಲ ಮನೆತನದಿಂದ ಕುಂಬ ಮೆರವಣಿಗೆ ಹಾಗೂ ಪುರಂತರ ಸೇವೆ ಮಲ್ಲಿಕಾರ್ಜುನ ಸುತಾರ ಅವರಿಂದ, ಭಾಜಿ,ಭಜಂತ್ರಿ ವಾದ್ಯಮೇಳ ಹಾಗೂ ಪಲ್ಲಕ್ಕಿಯೊಂದಿಗೆ ಮತ್ತು ಓಂಕಾರ ಒಡೆಯರ ಸಮ್ಮುಖದಲ್ಲಿ ರಥೋತ್ಸವ ನಡೆಯಲಿದೆ.ರಾತ್ರಿ 8 ಗಂಟೆಗೆ ಮದ್ದು ಸುಡುವ ಕಾರ್ಯಕ್ರಮ ನಂತರ ಧಾರ್ಮಿಕ ಸಭೆ ನಡೆಯಲಿದೆ.17 ರಂದು ಮಧ್ಯಾಹ್ನ 2 ಗಂಟೆಗೆ ಜಂಗಿಪೈಲ್ವಾನರಿಂದ ಕುಸ್ತಿ ನಡೆಯುವವು ಎಂದು ಸಮಸ್ತ ಗ್ರಾಮಸ್ಥರು ಮತ್ತು ಸದ್ಭಕ್ತ ಮಂಡಳಿಯವರು ತಿಳಿಸಿದ್ದಾರೆ.