ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ತನ್ನ ಛಾಪು ಮೂಡಿಸಿದ ಶರಣಬಸವ ವಿಶ್ವವಿದ್ಯಾಲಯ
ಕಲಬುರಗಿ;ಆ.11: ಶರಣಬಸವ ವಿಶ್ವವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‍ಸಿಎಸ್‍ಟಿ) ಆಗಸ್ಟ್ 09 ಮತ್ತು 10 ರಂದು ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ, ರಾಜ್ಯ ಮಟ್ಟದ 47ನೇ ಸರಣಿ ವಿದ್ಯಾರ್ಥಿ ಯೋಜನಾ ಕಾರ್ಯಕ್ರಮದಲ್ಲಿ (ಎಸ್‍ಪಿಪಿ) ದಾಖಲೆಯ ಎರಡು ಅತ್ಯುತ್ತಮ ಯೋಜನಾ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ವಿಶ್ವವಿದ್ಯಾಲಯಕ್ಕೆ ಹಾಗೂ ಇಡೀ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಹೆಮ್ಮೆ ತಂದಿದ್ದಾರೆ.
ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿಯ ವೈಶಿಷ್ಟ್ಯವೆಂದರೆ ವಿ.ವಿ.ಯ ಒ.Sಛಿ ಪ್ರಾಣಿಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಅತ್ಯುತ್ತಮ ಯೋಜನೆಯೊಂದನ್ನು ಭಾರತೀಯ ವಿಜ್ಞಾನ ಸಂಸ್ಥೆಯ (IISಛಿ) ವಿಜ್ಞಾನಿಗಳು ಪ್ರಶಂಸಿದ್ದು, ತೀರ್ಪುಗಾರÀ ಸದಸ್ಯರು ಮತ್ತು IISಛಿ ವಿಜ್ಞಾನಿಗಳು ಮನ್ನಿಸಿದ್ದಾರೆ. ಈ ಯೋಜನೆಯನ್ನು ರೂಪಿಸಿದ ನಾಲ್ವರು ವಿದ್ಯಾರ್ಥಿಗಳು ಮತ್ತು ಅವರ ಮಾರ್ಗದರ್ಶಕರಾದ ಪೆÇ್ರ. ವಿಶ್ವಜಿತ್ ಬಿ ದಾರೆಕರ್ ಹಾಗೂ ಪೆÇ್ರ. ಬಸವರಾಜೇಶ್ವರಿ ಇಂದೂರ್ ಅವರು ಈ ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ದು, ಬೆಂಗಳೂರಿನ ಐಐಎಸ್‍ಸಿಯ ಸಹಯೋಗದೊಂದಿಗೆ ನ್ಯೂರೋ ಸಿಸ್ಟಮ್ ಮತ್ತು ನಡವಳಿಕೆಯ ಅಂಶಗಳಲ್ಲಿ ಫಿಪೆÇ್ರನಿಲ್ ಬಳಕೆಯ ಪರಿಣಾಮವನ್ನು ಸಂಶೋಧಿಸಲು ಜೀನೋಮಿಕ್ ಅಧ್ಯಯನ ನಡೆಸಲಾಗುವುದು.
ಪ್ರಾಣಿಗಳ ಮೇಲೆ ಹರಡುವ ಕೀಟ ನಿಯಂತ್ರಣಕ್ಕಾಗಿ, ಕೃಷಿ ಕ್ಷೇತ್ರಗಳಲ್ಲಿ ಹಾಗೂ ಮನೆಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಫಿಪೆÇ್ರನಿಲ್ ರಾಸಾಯನಿಕದ ದುಷ್ಪರಿಣಾಮಗಳ ಬಗ್ಗೆ ಮಂಡಿಸಿದ ಸಂಶೋಧನಾ ಯೋಜನೆಗಾಗಿ ಎಂಎಸ್ಸಿ (ಪ್ರಾಣಿಶಾಸ್ತ್ರ) ವಿಭಾಗದ ವಿದ್ಯಾರ್ಥಿಗಳಾದ ಹಧಿಕಾ ಸುಮೇರಾ, ತನುಜಾ ಹಿರೋಳ್ಳಿ, ನವೀನ್ ಕುಮಾರ್ ಸಿಂದಗಿ ಮತ್ತು ಸಮೀರ್ ಪರಪರೋಶ್ ಅವರ ನಾಲ್ಕು ಸದಸ್ಯರ ವಿದ್ಯಾರ್ಥಿ ತಂಡವು ಅತ್ಯುತ್ತಮ ಯೋಜನಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಎಂ.ಟೆಕ್ (ಡಿಜಿಟಲ್ ಕಮ್ಯುನಿಕೇಷನ್ ಮತ್ತು ನೆಟ್‍ವರ್ಕ್) 3 ನೇ ಸೆಮಿಸ್ಟರ್ ವಿದ್ಯಾರ್ಥಿನಿ ಪ್ರತೀಕ್ಷಾ ಮಾನೆ ಅವರು ಅತ್ಯುತ್ತಮ ಪ್ರಶಸ್ತಿಯನ್ನು ಗೆದ್ದ ಎರಡನೇ ಯೋಜನೆಯಾಗಿದ್ದು, ಅವರು ಈ ಯೋಜನೆಯಲ್ಲಿ ಸ್ವಯಂಚಾಲಿತ ಮಂಜು ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ನಿರ್ಮಿಸಿದ್ದಾರೆ, ಇದು ನೀರಿನ ಬಳಕೆಯನ್ನು ಕಡಿಮೆ ಮಾಡುತ್ತದೆ. ವಿದ್ಯಾರ್ಥಿಯು ರೂಪಿಸಿದ ತಂತ್ರಜ್ಞಾನವು ಲಭ್ಯವಿರುವ ದ್ರವ ಮತ್ತು ಪೇಸ್ಟ್ ಆಧಾರಿತ ಸ್ಯಾನಿಟೈಸರ್ ಅನ್ನು ಬಳಸಿ ಕೈಗಳನ್ನು ಸ್ಯಾನಿಟೈಜ್ ಮಾಡಲು ಸ್ವಲ್ಪ ನೀರನ್ನು ತುಂಬಿಸುವ ಮೂಲಕ ಅದನ್ನು ಮಂಜಾಗಿ ಪರಿವರ್ತಿಸುತ್ತದೆ. ಈ ಯೋಜನೆಯು ವ್ಯಾಪಕ ಬಳಕೆಗಾಗಿ ಅದರ ಸರಳ ತಂತ್ರಜ್ಞಾನಕ್ಕಾಗಿ ವಿವಿಧ ಪ್ರಮುಖ ಸಂಸ್ಥೆಗಳಿಂದ ಹಾಗೂ ಪರಿಣಿತರಿಂದ ಪ್ರಶಂಸೆಯನ್ನು ಪಡೆಯಿತು. 1000 ರೂಪಾಯಿ ವೆಚ್ಚದಲ್ಲಿ ತಯಾರಿಸಲಾದ ಈ ಸ್ವಯಂಚಾಲಿತ ಹ್ಯಾಂಡ್ ಸ್ಯಾನಿಟೈಸರ್‍ಗಳನ್ನು ಸಿನಿಮಾ ಹಾಲ್‍ಗಳು, ಫಂಕ್ಷನ್ ಹಾಲ್‍ಗಳು ಮತ್ತು ಹೆಚ್ಚಿನ ಸಂಖ್ಯೆಯ ಜನರನ್ನು ಆಕರ್ಷಿಸುವ ಸ್ಥಳಗಳಲ್ಲಿ ಅಳವಡಿಸಬಹುದಾಗಿದೆ. ಸೌರ ಫಲಕಗಳನ್ನು ಬಳಸುವ ಅದೇ ಸ್ಯಾನಿಟೈಸರ್‍ನ ಬೆಲೆ ಸ್ವಲ್ಪ ಹೆಚ್ಚಾಗಿರಲಿದೆ.
ವಿದ್ಯಾರ್ಥಿ ಪ್ರತಿಕ್ಷಾ ಮಾನೆ ಅವರಿಗೆ ಇದು ಎರಡನೇ ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿಯಾಗಿದ್ದು, 2021-22 ರಲ್ಲಿ ಬೆಳಗಾವಿಯಲ್ಲಿ ಕೆಎಸ್‍ಸಿಎಸ್‍ಟಿ ಆಯೋಜಿಸಿದ್ದ 45ನೇ ಸರಣಿ ಎಸ್‍ಪಿಪಿಯಲ್ಲಿ ಇತರ ಮೂವರು ವಿದ್ಯಾರ್ಥಿಗಳಾದ ಶ್ರೇಯಾ ರಾವೂರ್, ಪ್ರಿಯಾಂಕಾ ಮತ್ತು ಸವಿತಾ ಅವರೊಂದಿಗೆ “ಡಿಸೈನಿಂಗ್ ಆ್ಯಂಡ್ ಸ್ಟಿಮ್ಯುಲೇಶನ್ ಆಫ್ 5ಜಿ ಮಲ್ಟಿಬ್ಯಾಂಡ್ ಅಂಟೆನಾ ವಿತ್ ಫೇಸ್ ಶಿಪ್ ಆಪರೇಷನ್” ಮಾಡಿದ ಯೋಜನೆಯಲ್ಲಿ ಪ್ರಶಸ್ತಿಯನ್ನು ಅವರು ತಮ್ಮದಾಗಿಸಿಕೊಂಡಿದ್ದರು. 45ನೇ ಸರಣಿಯಲ್ಲಿ ಅತ್ಯುತ್ತಮ ಯೋಜನೆ ಪ್ರಶಸ್ತಿ ಪಡೆದ ಈ ಯೋಜನೆಗೆ ಪೆÇ್ರ. ಲಕ್ಷ್ಮೀ ಪಾಟೀಲ್ ಮತ್ತು ಪೆÇ್ರ. ಶೋಭನಾ ಮಾರ್ಗದರ್ಶಕರಾಗಿದ್ದರು. ರಾಜ್ಯ ಮಟ್ಟದ 47ನೇ ಸರಣಿಯಲ್ಲಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಪೆÇ್ರ ವನಿತಾ ಕಾಬಾ ಮತ್ತು ಪೆÇ್ರ. ಲಕ್ಷ್ಮಿ ಪಾಟೀಲ್ ಮಾರ್ಗದರ್ಶಕ-ಶಿಕ್ಷಕರಾಗಿದ್ದಾರೆ.
ಕಳೆದ ವರ್ಷ ಭಾರತವು ನಿμÉೀಧಿಸಿದ ಕೀಟನಾಶಕಗಳಲ್ಲಿನ ಫಿಪೆÇ್ರನಿಲ್ ರಾಸಾಯನಿಕದ ದುಷ್ಪರಿಣಾಮಗಳನ್ನು ಗುರುತಿಸಲು ಹಾಗೂ ಪ್ರಾಣಿಗಳಲ್ಲಿ ಬಳಸುವ ಸಾಂಪ್ರದಾಯಿಕ ಸಂಶೋಧನಾ ವಿಧಾನಗಳ ನಾವೀನ್ಯತೆ ಮತ್ತು ಬಳಕೆಗಾಗಿ ಒ.Sಛಿ. ಪ್ರಾಣಿಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ವ್ಯಾಪಕ ಮೆಚ್ಚುಗೆಯನ್ನು ಗಳಿಸಿದ್ದಾರೆ. ಆದಾಗ್ಯೂ, ಈ ನಿμÉೀಧಿತ ರಾಸಾಯನಿಕವನ್ನು ಇನ್ನೂ ಇತರ ರಾಸಾಯನಿಕ ಗೊಬ್ಬರಗಳೊಂದಿಗೆ ಕೃಷಿ ಕ್ಷೇತ್ರಗಳಲ್ಲಿ ಮತ್ತು ಸಾಕುಪ್ರಾಣಿಗಳ ಮೇಲೆರಗುವ ಚರ್ಮ ಸಮಸ್ಯೆಗಳಿಂದ ಹೊರಬರಲು ನಾನಾ ರೂಪಗಳಲ್ಲಿ ಬಳಸಲಾಗುತ್ತಿದೆ.
ಫಿಪೆÇ್ರನಿಲ್ ರಾಸಾಯನಿಕದ ವ್ಯಾಪಕ ಬಳಕೆಯು ವೀರ್ಯಾಣುಗಳ ಸಂಖ್ಯೆಯಲ್ಲಿನ ಕಡಿತ, ದುರ್ಬಲ ವೀರ್ಯ, ಅಂಡಾಶಯದಲ್ಲಿನ ಜೀವಕೋಶದ ಹಾನಿ ಮತ್ತು ಚರ್ಮ ರೋಗಗಳು ಸೇರಿದಂತೆ ಇತರ ಸಮಸ್ಯೆಗಳು ಪ್ರಾಣಿಗಳ ಸಂತಾನೋತ್ಪತ್ತಿಯ ಆರೋಗ್ಯದ ಮೇಲೆ ಪ್ರಭಾವ ಬೀರಿದೆ ಎಂದು ಪ್ರಯೋಗಾಲಯದ ಫಲಿತಾಂಶಗಳು ಬಹಿರಂಗಪಡಿಸಿವೆ. ರಾಸಾಯನಿಕವನ್ನು ನಿರ್ವಹಿಸಿದ ಇಲಿಗಳು ಮಾನಸಿಕ ಅಸಮತೋಲನದೊಂದಿಗೆ ಮೊದಲ ಹತ್ತು ನಿಮಿಷಗಳ ಕಾಲ ವಿಚಿತ್ರವಾಗಿ ವರ್ತಿಸಿದವು ಮತ್ತು ನಂತರ ಹೈಪೆÇೀ ಆಕ್ಟಿವ್ ಆಗಿದ್ದವು ಎನ್ನುವ ವಿಷಯ ತಿಳಿದು ಬಂದಿದೆ.
ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ, ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪಾ ಅಪ್ಪಾಜಿ, ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ, ಕುಲಸಚಿವ ಪೆÇ್ರ. ಎಸ್. ಜಿ. ಡೊಳ್ಳೇಗೌಡರ್, ಡೀನ್ ಡಾ. ಲಕ್ಷ್ಮೀ ಪಾಟೀಲ್ ಮಾಕಾ ಮತ್ತು ಇತರ ಅಧಿಕಾರಿಗಳು ಈ ಗಮನಾರ್ಹ ಸಾಧನೆಗಾಗಿ ವಿದ್ಯಾರ್ಥಿಗಳಿಗೆ ಮತ್ತು ಅವರ ಮಾರ್ಗದರ್ಶಕ ಶಿಕ್ಷಕರಿಗೆ ಅಭಿನಂದಿಸಿದ್ದಾರೆ.