ಮಾತಿಗಿಂತ ಸಮಾಜಮುಖಿ ಕಾರ್ಯ, ಸಾಧನೆ ದೊಡ್ಡದು
ಕಲಬುರಗಿ:ಆ.11: ದೊಡ್ಡ ಮಾತುಗಳನ್ನು ಆಡುವುದು ಸಾಧನೆಯಲ್ಲ. ಸಮಾಜಪರ ಕಾಳಜಿ ಹೊಂದಿ ಸೇವೆ ಸಲ್ಲಿಸುವುದು ಅಗತ್ಯ. ಮಾನವೀಯತೆಯ ಅಳವಡಿಕೆ, ಸದಾ ಪ್ರಜ್ಞಾಪೂರ್ವಕ ವರ್ತನೆ, ಸುಖ-ದುಖಃಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ, ಗುರು-ಹಿರಿಯರನ್ನು ಗೌರವಿಸುವ, ಪರಸ್ಪರ ಪ್ರೀತಿ,ಸ್ನೇಹ,ಸಹಬಾಳ್ವೆಯಿಂದ ಜೀವನ ಸಾಗಿಸುವುದು, ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುವ ಮೂಲಕ ಸಾಧನೆ ಮಾಡುವುದು ದೊಡ್ಡದಾಗಿದೆ ಎಂದು ಬಾಗೆಪಲ್ಲಿಯ ಧರ್ಮಗುರು ಬಿ.ಎಡ್ ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಸಿ.ಕೊರಳ್ಳಿ ಹೇಳಿದರು.
ಗುವಿವಿದಿಂದ ಪಿ.ಎಚ್‍ಡಿ ಡಾಕ್ಟರೇಟ್ ಪದವಿ ಪಡೆದಿರುವುದರ ಪ್ರಯುಕ್ತ ಸ್ನೇಹಿತರ ಬಳಗದ ವತಿಯಿಂದ ನಗರದ ಆಳಂದ ರಸ್ತೆಯ ಪಿಎಫ್ ಕಚೇರಿ ಎದುರುಗಡೆಯಿರುವ ಗುಡ್ಡಡಗಿ ಫಂಕ್ಷನ್ ಹಾಲ್‍ನಲ್ಲಿ ಶನಿವಾರ ಸಂಜೆ ಜರುಗಿದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ವಕ್ತಾರ ವೈಜನಾಥ ಝಳಕಿ, ಕೆಎಸ್‍ಓಯು ಪ್ರಾದೇಶಿಕ ನಿರ್ದೇಶಕ ಡಾ.ಸಂಗಮೇಶ ಹಿರೇಮಠ, ಉಪನ್ಯಾಸಕ ಎಚ್.ಬಿ.ಪಾಟೀಲ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಪ್ರಭುಲಿಂಗ ಮುಲಗೆ, ಗ್ರಂಥಪಾಲಕ ಡಾ.ದಾನೇಶ್ ವಗ್ಗಿ, ಸುಲೆಪೇಟದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಬಸವರಾಜ ಬಾಗಾ, ಶ್ರೀಮಾನ ಧರ್ಮಸಿಂಗ ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಡಾ.ಬಸವರಾಜ ವಾಡಿ, ತಾಜ್ ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಡಾ.ಲಕ್ಷ್ಮೀಪುತ್ರ ನೆಲ್ಲೂರ, ರೇಶ್ಮಿ ಕಾಲೇಜಿನ ನ್ಯಾಕ್ ನಿದೇರ್ಶಕ ಡಾ.ಓಂಪ್ರಕಾಶ ಹಿರೇಮಠ ಮಾತನಾಡಿ, ಬಸವರಾಜ ಸಿ.ಕೊರಳ್ಳಿ ಅವರು ಜಿಲ್ಲೆಯ ವಿವಿಧ ಡಿ.ಎಡ್, ಬಿ.ಎಡ್ ಮತ್ತು ಎಂ.ಎಡ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನೂರಾರು ವಿದ್ಯಾರ್ಥಿಗಳ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಸುಜಾತಾ ಬಿ.ಕೊರಳ್ಳಿ ಅವರು ನ್ಯಾಯಾಧೀಶೆಯಾಗಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳಾದ ಶ್ರೇಯಾ ಮತ್ತು ಶೃದ್ಧಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ರ್ಯಾಂಕ್ ಪಡೆಯುವ ಮೂಲಕ ಕಲಬುರಗಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಕೊರಳ್ಳಿ ಕುಟುಂಬದ ಸಾಧನೆ, ಸಮಾಜಮುಖಿ ಕೊಡುಗೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಉಡುಪಿಯ ಜಿಲ್ಲಾ ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶೆ ಸುಜಾತಾ ಬಿ.ಕೊರಳ್ಳಿ, ಪ್ರಮುಖರಾದ ಸಿದ್ದಮ್ಮ ಸಿ.ಕೊರಳ್ಳಿ, ವಿಮಲಾಬಾಯಿ ಝಳಕಿ, ಶಿವರಾಜ ವಾರದ, ಶಿವಯೋಗೆಪ್ಪಾ ಎಸ್.ಬಿರಾದಾರ, ವಿಶ್ವನಾಥ ಬಕರೆ, ಪ್ರೊ.ರಮೇಶ ಯಾಳಗಿ, ಚಿತ್ರಶೇಖರ, ಅಪ್ಪಾಸಾಬ ತೀರ್ಥೆ, ಶಿವರಾಜ ಗೋಳಾ, ಮೆಹಬೂಬ್, ಅಮರನಾಥ ಎಸ್.ಝಳಕಿ ಚೈತ್ರಾ, ಶ್ರೇಯಾ, ಶೃದ್ಧಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.