ರೇವಣಸಿದ್ದಯ್ಯ ಮಠಪತಿಗೆ ಗೌರವ ಡಾಕ್ಟರೇಟ ಪ್ರಧಾನ
ಸಂಜೆವಾಣಿ ವಾರ್ತೆ
ಹುಮನಾಬಾದ್:ಅ.೧: ನಾನು ನನ್ನದು ಎನ್ನುವ ಈ ಕಾಲದಲ್ಲಿ. ಸಂಗೀತ ಕಾರ್ಯಕ್ರಮ ನೀಡಿ ಬಂದ ಹಣ. ಸಮಾಜ ಸೇವೆಗಾಗಿ ಮುಡಿಪಿಟ್ಟು. ರೋಗಿಗಳಿಗೆ. ಬಡವರಿಗೆ. ಅನಾಥಾಶ್ರಮಕೆ. ವೃದ್ಧಾಶ್ರಮಕ್ಕೆ. ಹೀಗೆ ಅನೇಕ ಸಮಾಜಮುಖಿ ಕೆಲಸ ಮಾಡುತ್ತಿರುವಂತಹ. ಸಾಕ್ಷಿ ಮತ್ತು ರೇವಣಸಿದ್ದಯ್ಯ ಹಿರೇಮಠ ದಂಪತಿಗಳ ಕಾರ್ಯವನ್ನು ಕಂಡು. ರೇವಣಸಿದ್ದಯ್ಯ ಹಿರೇಮಠ ಇವರಿಗೆ ಮ್ಯಾಜಿಕ ಬುಕ್ ಆಫ್ ರಿಕಾರ್ಡ ಹರಿಯಾಣ ಯುನಿವರ್ಸಿಟಿ ದೆಹಲಿಯಿಂದ ಈಚೆಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಯಿತು.
ಡಾ. ರೇವಣಸಿದ್ದಯ್ಯ ಹಿರೇಮಠ ಅವರು ಗೌರವ ಡಾಕ್ಟರೇಟ್ ಪಡೆದ ಪ್ರಯುಕ್ತ ಪುಜ್ಯ ಮಲ್ಲಯ್ಯಮುತ್ಯಾ ನಿರಗುಡಿ, ಹಿರೇಮಠ ಸಂಸ್ಥಾನದ ರೇಣುಕವೀರ ಗಂಗಾಧರ ಶಿವಾಚಾರ್ಯ ಸ್ವಾಮಿ ಅವರ ದಿವ್ಯ ಸಾನಿಧ್ಯದಲ್ಲಿ ಡಾ. ರೇವಣಸಿದ್ದಯ್ಯ ಮಠಪತಿ ಗೆಳೆಯರ ಬಳಗದಿಂದ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಶಾಸಕ ಡಾ. ಸಿದ್ದು ಪಾಟೀಲ, ಎಂಎಲ್ಸಿ ಚಂದ್ರಶೇಖರ್ ಪಾಟೀಲ್ ಮಾಜಿ ಶಾಸಕ ಸುಭಾಷ ಕಲ್ಲೂರು, ಸೇರಿದಂತೆ ಗಳೆಯರ ಬಳಗದಿಂದ ಡಾ.ರೇವಣಸಿದ್ದಯ್ಯ ಮಠಪತಿ ದಂಪತಿಗಳಿಗೆ ಸನ್ಮಾನಿಸಿ, ಶುಭಕೋರಿದರು.