ಆಟೋ ಚಾಲಕ ಆತ್ಮಹತ್ಯೆಗೆ ಶರಣು
ಮಂಗಳೂರು-ನಗರದ ಹೊರವಲಯದ ಎದುರು ಪದವಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಪತ್ತೆಯಾಗಿದೆ. ಮೂಡುಶೆಡ್ಡೆ ನಿವಾಸಿಯಾಗಿರುವ ಸಂತೋಷ್ ನೇಣಿಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಎದುರುಪದವಿನಲ್ಲಿ ಬಾಡಿಗೆ ನಿವಾಸದಲ್ಲಿ ಇದ್ದ ಸಂತೋಷ್.ಇಂದು ಸಂಜೆ ತಮ್ಮ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.ಆಟೋ ಚಾಲಕರಾಗಿ ದುಡಿಯುತ್ತಿದ್ದ ಅವರ ಆತ್ಯ ಹತ್ಯೆಗೆ ನಿಖರ ಕಾರಣ ಇನ್ನಷ್ಟೆ ತಿಳಿಯಬೇಕಾಗಿದೆ. ಸ್ಥಳಕ್ಕೆ ಕಾವೂರು ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.