ನಾಳೆ ಪ್ರಾಥಮಿಕ ಶಿಕ್ಷಕರಿಂದ ಬೆಂಗಳೂರು ಚಲೋ
ಸಿಂಧನೂರು ಆ.೧೧-
ಪ್ರಾಥಮಿಕ ಶಾಲಾ ಶಿಕ್ಷಕರು ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ .ಎಂದಿನಂತೆ ಶಾಲೆಗಳು ನಡೆಯಲಿವೆ ಎಂದು ಶಿಕ್ಷಣ ಇಲಾಖೆ ಆದೇಶಿಸಿದೆ ನಮಗಾದ ಅನ್ಯಾಯ ಕುರಿತಾದ ಹೋರಾಟ ಇದಾಗಿದೆ .ನಮ್ಮ ಹಕ್ಕಿಗಾಗಿ ನಮ್ಮ ಹೋರಾಟ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸಿ ಸರ್ಕಾರದ ಕಣ್ಣು ತೆರೆಸೋಣ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ ಪತ್ರಿಕೆ ಹೇಳಿಕೆ ನೀಡುವ ಮೂಲಕ ಸಿಂಧನೂರು ತಾಲೂಕಿನ ಅನ್ಯಾಯಗೊಳಗಾದ ಶಿಕ್ಷಕರಿಗೆ ಮನವಿ ಮಾಡಿದರು.
೧ ರಿಂದ ೫ ನೇ ತರಗತಿ ಗಳಿಗೆ ಪಾಠ ಮಾಡುತ್ತಿರುವ ಶಿಕ್ಷಕರು ಪದವಿದರಾಗಿದ್ದಲ್ಲಿ ೬-೮ ತರಗತಿಗಳಿಗೆ ಬಡ್ತಿ ನೀಡಬೇಕು ಅದಕ್ಕೆ ಸಂಬಂಧಿಸಿದ ಸೂಕ್ತ ನಿಯಮ ತರಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಿದ್ದೆವೆ ಎಂದು ತಿಳಿಸಿದರು.