ಗ್ರಂಥದ ಮೆರವಣಿಗೆ
ಲಕ್ಷ್ಮೇಶ್ವರ,ಆ.11:ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ನಿನ್ನೆಯಿಂದ ಆರಂಭಗೊಂಡಿರುವ ಕವಿ ರಾಘವಾಂಕವಿ ರಚಿತ ಶ್ರೀ ಸೋಮನಾಥ ಚಾರಿತ್ರ ಗ್ರಂಥದ ಭವ್ಯವಾದ ಮೆರವಣಿಗೆ ಕೆಇಬಿಎ ಯ ಶ್ರೀ ಗಣಪತಿ ದೇವಸ್ಥಾನ ದಿಂದ ಸಕಲ ವಾದ್ಯ ವೈಭವಗಳೊಂದಿಗೆ ಅಲಂಕೃತಗೊಂಡ ಎತ್ತಿನ ಬಂಡಿಯಲ್ಲಿ ಗ್ರಂಥವನ್ನು ಇರಿಸಿ ನೂರಾರು ಸುಮಂಗಲೆಯರ ಪೂರ್ಣ ಕುಂಭ ದೊಂದಿಗೆ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು.
ಮೆರವಣಿಗೆಗೆ ಮಾಜಿ ಶಾಸಕ ಜಿಎಸ್ ಗಡ್ಡದೇವರ ಮಠ ಶಿರಹಟ್ಟಿ ಮಂಡಲದ ಬಿಜೆಪಿ ಅಧ್ಯಕ್ಷ ಸುನಿಲ್ ಮಹಾಂತ ಶೆಟ್ಟರ ಚಾಲನೆ ನೀಡಿದರು ಮೆರವಣಿಗೆಯಲ್ಲಿ ಪ್ರಮುಖರಾದ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳ ಚಂಬಣ್ಣ ಬಾಳಿಕಾಯಿ ಕುಬೇರಪ್ಪ ಮಹಾಂತ ಶೆಟ್ಟರ ಸುರೇಶ ರಾಚನಾಯಕರ ಬಸವೇಶ್ವರ ಮಹಾಂತಶೆಟರ ತಾಲೂಕ ಪಂಚಾಯಿತಿ ಮಾಜಿ ಸದಸ್ಯ ಚೆನ್ನಪ್ಪ ಜಗಲಿ ಬಸವರಾಜ್ ಬೆಂಡಿಗೇರಿ ಶಂಕ್ರಣ್ಣ ಬಾಳಿಕಾಯಿ ವಿರುಪಾಕ್ಷಪ್ಪ ಆದಿ ಪಿಬಿ ಕರಾಟೆ ಸಿದ್ದನಗೌಡ ಬಳ್ಳೊಳ್ಳಿ ಸಿಜಿ ಹಿರೇಮಠ ಪಿಬಿ ಕರಾಟೆ ಪುರಸಭೆ ಸದಸ್ಯ ಮಹೇಶ್ ಹೊಗೆ ಸೊಪ್ಪಿನ ಕಸಾಪ ಅಧ್ಯಕ್ಷ ಈಶ್ವರ್ ಮೆಡ್ಲೇರಿ ನಾಗರಾಜ್ ಕಳಸಾಪುರ ಎಸ್‍ಎಫ್ ಆದಿ ಗುರುರಾಜ್ ಕುಲಕರ್ಣಿ ವಿಜಯ್ ಮೆಕ್ಕಿ ಬಸಣ್ಣ ಪುಟಾಣಿ ಸೋಮಶೇಖರ್ ಕೆರಿಮನಿ ಬಸವರಾಜ ಮೆಣಸಿನಕಾಯಿ ರಾಜಶೇಖರ ಶಿಗ್ಲಿ ಮಠ ಶೇಖಣ್ಣ ಹುರಕಡ್ಲಿ ಎನ್ ಎಸ್ ಸಾತಪೂತೆ ಸೇರಿದಂತೆ ಅನೇಕರಿದ್ದರು.