ಲಕ್ಷ್ಮೀದೇವಿ ಶಾಸ್ತ್ರಿ ದರ್ಶನ ಕೃತಿ ಲೋಕಾರ್ಪಣೆ
ರಾಯಚೂರು,ಆ.೧೧- ನಗರದ ಕನ್ನಡ ಭವನದಲ್ಲಿ ಜಿಲ್ಲಾ, ತಾಲ್ಲೂಕು ಕನ್ನಡ ಸಾಹಿತ್ಯ ವತಿಯಿಂದ ಹಿರಿಯ ಸಾಹಿತಿ ಲಕ್ಷ್ಮೀದೇವಿ ಶಾಸ್ತ್ರಿರವರ ಚಾಗಿ ಹಿರೇಮಠದ ಚನ್ನಬಸವ ಶಾಸ್ತ್ರಿಗಳ ದರ್ಶನ ಕೃತಿಯನ್ನು ಕಿಲ್ಲೇ ಬೃಹ್ಮಮಠ ಸ್ವಾಮೀಜಿ ಶಾಂತ ಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ವಹಿಸಿ ಲೋಕಾರ್ಪಣೆ ಮಾಡಿದರು.
ಕೃತಿ ಪರಿಚಯವನ್ನು ಹಿರಿಯ ಸಾಹಿತಿ ಅಯ್ಯಪ್ಪ ಹುಡಾ ಅವರು ಮಾಡಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೆಂಕಟೇಶ್ ಬೇವಿನಬೆಂಚಿ ಅವರು ವಹಿಸಿದ್ದರು. ಕಲಬುರ್ಗಿಯ ಗುರಪ್ಪಾ ನಾಗಪ್ಪ ಪಾಟೀಲ್ ಹಿರೇನಂದೂರು ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಇನ್ಪೋಸಿಸ್ ಅಭಿಯಂತರ ವಿಶ್ವನಾಥ ಶಾಸ್ತ್ರಿ, ಪ್ರತಿಭಾ ಪಾಟೀಲ್, ರಾವುತರಾವ್ ಬರೂರು, ಲಕ್ಷ್ಮೀದೇವಿ ಶಾಸ್ತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.