ಉಪನ್ಯಾಸ ಕಾರ್ಯಕ್ರಮ
ಲಕ್ಷೇಶ್ವರ,ಆ.11:ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ನಿನ್ನೆ ಅವಿಭಜಿತ ಧಾರವಾಡ ಜಿಲ್ಲಾ ಮಟ್ಟದ ಸ್ವಾತಂತ್ರ ಹೋರಾಟಗಾರರು ಕುರಿತು 77 ಸ್ವಾತಂತ್ರೋತ್ಸವದ ಅಂಗವಾಗಿ ಸ್ವಾತಂತ್ರ ಹೋರಾಟಗಾರರ ಕುರಿತು ಉಪನ್ಯಾಸ ಕಾರ್ಯಕ್ರಮ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪದವಿ ಪೂರ್ವ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಕೆಎಲ್‍ಇ ಸಂಸ್ಥೆಯ ಸ್ಥಾನಿಕ ಅಧ್ಯಕ್ಷ ಎಬಿ ಉಪ್ಪಿನವರು ಈ ದೇಶದ ಸ್ವಾತಂತ್ರ ಅನೇಕ ದೇಶಪ್ರೇಮಿಗಳ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದಿಂದ ದೊರಕಿದೆ ಈ ಭಾಗದಲ್ಲಿ ಹಳ್ಳಿಕೇರಿ ಗುದ್ಲೆಪ್ಪನವರು ಬ್ರಿಟಿಷರ ವಿರುದ್ಧ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದರು ಇಂತಹ ಮಹನೀಯರ ತ್ಯಾಗ ಬಲಿದಾನಗಳು ನಮಗೆ ಆದರ್ಶವಾಗಬೇಕು . ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಜೀವನ ಚರಿತ್ರೆಯ ಹಾಗೂ ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಹೊಸ ರಿತ್ತಿ ಹಳ್ಳಿಕೇರಿ ಗುದ್ಲಪ್ಪ ಕಾಲೇಜಿನ ಉಪನ್ಯಾಸಕಿ ಕುಮಾರಿ ಡಿಎಸ್ ಸೊಣಗಾರ ಆಗಮಿಸಿದ್ದರು ಅತಿಥಿಗಳಾಗಿ ಬಿಬಿ ಬೂದಿಹಾಳ ಬಿ ಎಂ ಕಜ್ಜಿ ಬಿ ವೈ ಸೈಬಣ್ಣವರ ಪ್ರಾಚಾರ್ಯ ರಮೇಶ ಅತ್ತಿಗೇರಿ ಉಪಸ್ಥಿತರಿದ್ದರು ಹರ್ಲಾಪುರದ ಜಾನಪದ ಕಲಾವಿದರ ತಂಡ ಸ್ವಾತಂತ್ರ ಹೋರಾಟಗಾರ ಕುರಿತು ದೇಶ ಪ್ರೇಮದ ಜಾನಪದ ಗೀತೆಗಳನ್ನು ಹಾಡಿದರು.