ದೇಶ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ
ರಾಯಚೂರು,ಆ .೧೧ – ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮನೆ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಸ್ಮಿತಾ ಅಕ್ಕ ಹೇಳಿದರು.
ಅವರಿಂದು ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು,
ಆಗಸ್ಟ್ ೧೫ ರ ವರೆಗೆ ಪ್ರತಿಯೊಬ್ಬರು ತಮ್ಮ ಮನೆ ಗಳಲ್ಲಿ ತ್ರಿವರ್ಣ ಧ್ವಜವನ್ನು ಗೌರವ ಪೂರಕವಾಗಿ ಹಾರಿಸಿ
ಸ್ವಾತಂತ್ರ?ಯ ಹೋರಾಟ, ತ್ಯಾಗ, ಬಲಿದ ಮಾಡಿದವರನ್ನು ಸ್ಮರಿಸಬೇಕು ಎಂದರು.
ರಾಷ್ಟ್ರಧ್ವಜವನ್ನು ಪ್ರದರ್ಶಿಸಿದಾಗ, ಅದು ಗೌರವದ ಸ್ಥಾನವನ್ನು ಪಡೆದುಕೊಳ್ಳಬೇಕು ಮತ್ತು ಸ್ಪಷ್ಟವಾಗಿ ಇಡಬೇಕು. ಹಾನಿಗೊಳಗಾದ ಅಥವಾ ಕಳಚಿದ ರಾಷ್ಟ್ರಧ್ವಜವನ್ನು ಪ್ರದರ್ಶಿಸಬಾರದು ಎಂದ ಅವರು, ಧ್ವಜದೊಂದಿಗಿನ ನಮ್ಮ ಸಂಬಂಧವು ಯಾವಾಗಲೂ ವೈಯಕ್ತಿಕಕ್ಕಿಂತ ಹೆಚ್ಚು ಔಪಚಾರಿಕ ಮತ್ತು ಸಾಂಸ್ಥಿಕವಾಗಿದೆ. ಸ್ವಾತಂತ್ರ್ಯದ ೭೫ ನೇ ವರ್ಷದಲ್ಲಿ ಒಂದು ರಾಷ್ಟ್ರವಾಗಿ ಸಾಮೂಹಿಕವಾಗಿ ಧ್ವಜವನ್ನು ಮನೆಗೆ ತರುವುದು ಹೀಗೆ ತಿರಂಗದೊಂದಿಗಿನ ವೈಯಕ್ತಿಕ ಸಂಪರ್ಕದ ಕ್ರಿಯೆಯ ಸಾಂಕೇತಿಕವಾಗಿ ಮಾತ್ರವಲ್ಲದೆ ರಾಷ್ಟ್ರ ನಿರ್ಮಾಣದ ನಮ್ಮ ಬದ್ಧತೆಯ ಸಾಕಾರವಾಗಿದೆ. ಈ ಉಪಕ್ರಮದ ಹಿಂದಿನ ಕಲ್ಪನೆಯು ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ಪ್ರಚೋದಿಸುವುದು ಮತ್ತು ಭಾರತೀಯ ರಾಷ್ಟ್ರಧ್ವಜದ ಬಗ್ಗೆ ಜಾಗೃತಿಯನ್ನು ಉತ್ತೇಜಿಸುವುದು ಎಂದರು.
ಈ ಸಂದರ್ಭದಲ್ಲಿ ಡಾ. ನಾಗರಾಜ ಮಸ್ಕಿ, ದಂಡಪ್ಪ ಬಿರಾದರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.