ಚಿರತೆ ಸೇರೆಗೆ ಬೋನು ಅಳವಡಿಸಿದ ಅರಣ್ಯ ಇಲಾಖೆ
(ಸಂಜೆವಾಣಿ ಪ್ರತಿನಿಧಿಯಿಂದ)
ಮಾನವಿ, ಆ ೧೧, ಪಟ್ಟಣದ ಆದಪುರ ಪೇಟೆ ಸೇರಿದಂತೆ ಯರಮಲದೊಡ್ಡಿ ಹೋಗುವ ಮಾರ್ಗ ಪ್ರದೇಶದಲ್ಲಿ ಮೇಕೆ ಸೇರಿದಂತೆ ಚಿಗರೆಗಳ ಮೇಲೆ ದಾಳಿ ಮಾಡಿ ಜನರನ್ನು ಅನೇಕ ದಿನಗಳಿಂದ ಭಯಪಡಿಸುತ್ತಿದ್ದ. ಚಿರತೆಯನ್ನು ಹಿಡಿಯುವುದಕ್ಕೆ ಅರಣ್ಯ ಇಲಾಖೆಯಿಂದ ಬಾರಿ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು ಕಲ್ಲೂರು ಗುಡ್ಡದಲ್ಲಿ ಚಿರತೆಯನ್ನು ಸೇರೆಯಿಡಿಯುವುದಕ್ಕೆ ಅಳವಡಿಸಿದ ಬೋನನ್ನು ಶನಿವಾರ ಸಂಜೆ ಮಾನವಿ ಪಟ್ಟಣದ ಸುತ್ತಮುತ್ತಲಿನ ಜಮೀನುಗಳಲ್ಲಿ ಚಿರತೆಯ ಹೆಜ್ಜೆ ಗುರುತುಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಪತ್ತೆ ಮಾಡಿದ್ದು ನಾಗನಕೆರೆ ವ್ಯಾಪ್ತಿಯ ಗುಡ್ಡ ಪ್ರದೇಶದಲ್ಲಿ ಚಿರತೆ ನೀರು ಕುಡಿಯುವುದಕ್ಕೆ ಬರಬಹುದು ಎನ್ನುವ ವನ್ಯ ಜೀವಿ ತಜ್ಞ ನರೇಶ ಕೊಂಡಳ್ಳಿ ಮಾರ್ಗದರ್ಶನದಲ್ಲಿ ಡ್ರೋಣ್ ಗಳನ್ನು ಬಳಸಿ ಗುಡ್ಡದ ಗುಹೆಗಳಲ್ಲಿ ಇರುವ ಚಿರತೆ ಹಾಗೂ ಚಿರತೆಯ ಮರಿಗಳನ್ನು ಪತ್ತೆ ಹಚ್ಚುವ ಕಾರ್ಯುಚಾರಣೆಯನ್ನು ತೀವ್ರ ಗೊಳ್ಳಿಸಲಾಗಿದೆ.
ಪ್ರತಿ ರಾತ್ರಿ ನಾಗನಕೆರೆ ವ್ಯಾಪ್ತಿಯಲ್ಲಿನ ಪ್ರದೇಶದಲ್ಲಿನ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳನ್ನು ತಿನ್ನುವುದಕ್ಕೆ ಬರುವ ಚಿಗರೆಗಳು ಚಿರತೆಗೆ ಸುಲಭವಾಗಿ ಆಹಾರವಾಗಿ ದೊರೆಯುತ್ತವೆ ಹಾಗೂ ಪಟ್ಟಣದ ಮಲ್ಲಿಕಾರ್ಜುನ ಗುಡ್ಡ ವಿಶಾಲವಾದ ಗುಡ್ಡ ಪ್ರದೇಶವಾಗಿದ್ದು ಗುಡ್ಡವು ಗುಹೆಗಳಿಂದ ಕೂಡಿರುವುದರಿಂದ ಚಿರತತೆಗಳ ವಾಸಕ್ಕೆ ವಿಶಾಲವಾದ ಪ್ರದೇಶ ದೊರೆತಿದ್ದು ಬೆಳಗಿನ ಪೇಟೆ ಹಾಗೂ ಅದಪುರ ಪೇಟೆಗಳ ನಿವಾಸಿಗಳು ತಮ್ಮ ಕುರಿ ಮತ್ತು ಮೇಕೆಗಳನ್ನು ,ಹಸುಗಳನ್ನು ಗುಡ್ಡದ ಅಂಚಿನ ಖಾಲಿ ಜಾಗಗಳಲ್ಲಿ ರಾತ್ರಿ ವೇಳೆ ಬಿಡುವುದರಿಂದ ಚಿರತೆಗಳು ಬಹಳ ಸುಲಭವಾಗಿ ಮೇಕೆಗಳನ್ನು ಎಳೆದು ಹೊಯುತ್ತವೆ.ಕೇಲವು ದಿನಗಳ ಕೆಳಗೆ ಎರಡು ಮೇಕೆಗಳು ಚಿರತೆಗೆ ಬಲಿಯಾಗಿದ್ದು ಇಲ್ಲಿನ ನಿವಾಸಿಗಳು ಅರಣ್ಯ ಇಲಾಖೆಯ ಗಮನಕ್ಕೆ ತಂದಿರುವುದರಿಂದ ಅರಣ್ಯ ಇಲಾಖೆಯ ತಾಲೂಕು ವಲಯ ಅರಣ್ಯ ಅಧಿಕಾರಿ ಸುರೇಶ್ ಅಲಮೆಲ್ ನೇತೃತ್ವದಲ್ಲಿ ಅಧಿಕಾರಿಗಳು ಗಂಭಿರವಾಗಿ ಪರಿಗಣಿಸಿ ಚಿರತೆ ಹಿಡಿಯುವ ಕಾರ್ಯಚಾರಣೆಯನ್ನು ತೆಗೆದು ಕೊಂಡಿದ್ದಾರೆ.