ಬೆಂಗಳೂರಿನಿಂದ ಕ.ಕರ್ನಾಟಕಕ್ಕೆ ಹೆಚ್ಚುವರಿ ರೈಲು
ಬೆಂಗಳೂರು.(ರಾಯಚೂರು),ಆ.೧೧: ಆಗಸ್ಟ್ ತಿಂಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಜನದಟ್ಟಣೆ ಉಂಟಾಗುವುದರಿಂದ ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ವಿವಿಧ ಸ್ಥಳಗಳಿಗೆ ವಿಶೇಷ ರೈಲುಗಳನ್ನು ಓಡಿಸಲಾಗುವುದೆಂದು ರೈಲ್ವೆ ಇಲಾಖೆ ತಿಳಿಸಿರುವುದಾಗಿ ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ. ಬಾಬುರಾವ್ ತಿಳಿಸಿದ್ದಾರೆ.
ಆಗಸ್ಟ್ ತಿಂಗಳಲ್ಲಿಅನೇಕ ಹಬ್ಬಗಳು ಬರುವುದರಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವುದರಿಂದ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ. ಆ.೧೪ , ೧೬, ೧೭ ತಾರೀಕಿನಂದು ಬೆಂಗಳೂರಿನಿಂದ ಬೆಂಗಳೂರು(ಎಸ್‌ಎಂವಿಬಿ)-ಕಲಬುರಗಿ (ರೈಲು ಸಂಖ್ಯೆ ೦೬೫೩೩) ವಿಶೇಷ ರೈಲು ಸಂಚರಿಸಲಿದ್ದು ಅದೇರೀತಿಯಾಗಿ ಕಲಬುರಗಿಯಿಂದ ಕಲಬುರಗಿ-ಬೆಂಗಳೂರು (ಎಸ್‌ಎಂವಿಬಿ) (ರೈಲು ಸಂಖ್ಯೆ ೦೬೫೩೪) ವಿಶೇಷ ರೈಲು ಆ.೧೫,೧೭,೧೮ ರಂದು ಸಂಚರಿಸಲಿದೆ. ಪ್ರಯಾಣಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಡಾ. ಬಾಬುರಾವ್ ಕೋರಿದ್ದಾರೆ.
ಆ. ೧೩ ರಂದು ಹುಬ್ಬಳ್ಳಿ ಯಶವಂತಪುರ (ರೈಲು ಸಂಖ್ಯೆ ೦೭೩೧೩), ಆ.೧೪ ರಂದು ಯಶವಂತಪುರ- ಬೆಳಗಾವಿ(ರೈಲು ಸಂಖ್ಯೆ ೦೭೩೦೭), ಆ.೧೫ ರಂದು ಬೆಳಗಾವಿ ಯಶವಂತಪುರ (ರೈಲು ಸಂಖ್ಯೆ ೦೭೩೦೮), ಆ.೧೬ ರಂದು ಯಶವಂತಪುರ-ಬೆಳಗಾವಿ (ರೈಲು ಸಂಖ್ಯೆ ೦೭೩೯೧) ಆ.೧೮ ರಂದು ಬೆಳಗಾವಿ ಯಶವಂತಪುರ(ರೈಲು ಸಂಖ್ಯೆ ೦೭೩೯೨),ಆ.೧೪ ರಂದು ಬೆಂಗಳೂರು(ಎಸ್‌ಎಂ ವಿಬಿ)-ವಿಜಯಪುರ (ರೈಲು ಸಂಖ್ಯೆ ೦೬೨೩೧), ಹುಬ್ಬಳ್ಳಿ- ಬೆಂಗಳೂರು(ರೈಲು ಸಂಖ್ಯೆ ೦೭೩೧೪), ಆ.೧೫ರಂದು ವಿಜಯಪುರ- ಬೆಂಗಳೂರು(ಎಸ್‌ಎಂವಿಬಿ) (ರೈಲು ಸಂಖ್ಯೆ ೦೬೨೩೨) ಆ.೧೬ ರಂದು ಬೆಂಗಳೂರು(ಎಸ್‌ಎಂವಿಬಿ)-ಹುಬ್ಬಳ್ಳಿ (ರೈಲು ಸಂಖ್ಯೆ ೦೬೨೩೫), ಆ.೧೮ರಂದು ವಿಜಯಪುರ-ಬೆಂಗಳೂರು(ಎಸ್‌ಎಂವಿಬಿ) (ರೈಲು ಸಂಖ್ಯೆ ೦೬೨೩೬) ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದು ಆಗಸ್ಟ್ ತಿಂಗಳಲ್ಲಿ ಹೆಚ್ಚಿನ ಪ್ರಯಾಣಿಕರು ಸಂಚರಿಸುವುದರಿಂದ ತೊಂದರೆಯನ್ನು ಅನುಭವಿಸುವುದನ್ನು ತಪ್ಪಿಸಲು ವಿಶೇಷ ರೈಲುಗಳನ್ನು ಓಡಿಸುವಂತೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿತ್ತು. ಮನವಿಗೆ ಪೂರಕವಾಗಿ ಸ್ಪಂದಿಸಿ ವಿಶೇಷ ರೈಲುಗಳನ್ನು ಓಡಿಸುತ್ತಿರುವುದು ಸಾರ್ವನಿಕರ ಪರವಾಗಿ ಅವರಿಗೆ ಧನ್ಯವಾದಗಳು ಎಂದು ಪ್ರಕಣೆಯಲ್ಲಿ ತಿಳಿಸಿದ್ದಾರೆ.