ಇಂಜಿನಿಯರ್‌ಗಳ ನಿರ್ಲಕ್ಷವೇ ಗೇಟ್ ಮುರಿಯಲು ಕಾರಣ
ರಾಯಚೂರು,ಆ.೧೧: ಬೇಸಿಗೆ ಅವಧಿಯಲ್ಲಿ ಜಲಾಶಯದಲ್ಲಿ ಕಡಿಮೆ ಪ್ರಮಾಣ ನೀರು ಇರುವಾಗ ಪ್ರತಿ ಗೇಟ್‌ಗಳನ್ನು ಪರಿಶೀಲಿಸಬೇಕಾಗಿತ್ತು. ಗೇಟ್ ಗಳಿಗೆ ಗ್ರಿಸಿಂಗ್ ಮಾಡಬೇಕಿತ್ತು. ಈ ಜಲಾಶಯ ನಿವರ್ಹಣೆ ಇಂಜಿನಿಯರ್‌ಗಳ ಕೊರತೆಯಿದೆ.ಇಂಜಿನಿಯರ್‌ಗಳ ನಿರ್ಲಕ್ಷವೇ ಗೇಟ್ ಮುರಿಯಲು ಕಾರಣ ಎಂದು ಕರ್ನಾಟಕ ರಾಜ್ಯ ರೈತಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಹೇಳಿದರು.
ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಇಂಜಿನಿಯರ್‌ಗಳ ನಿವೃತ್ತಿ ಹಂಚಿನದಲ್ಲಿದ್ದಾರೆ. ಅವರಿಂದ ಸಮರ್ಪಕ ಕರ್ತವ್ಯ ನಿರ್ವಹಣೆ ಸಾಧ್ಯವಾಗಿಲ್ಲ. ಈ ಅನಾಹುತದಿಂದ ನೀರಾವರಿ ಬೆಳೆಗಳಿಗೆ ಬಹುತೇಕ ನೀರು ಕೊರತೆಯಾಗುವ ಸಾಧ್ಯತೆಯಿದೆ. ಜಲಾಶಯದ ನೀರಿನ ಮೂಲ ಪ್ರದೇಶಗಳಲ್ಲಿ ಬರುವ ದಿನಗಳಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆಯಿರುವುದರಿಂದ ಮತ್ತೊಮ್ಮೆ ಜಲಾಶಯ ಭರ್ತಿಯಾಗುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಎಡದಂಡೆ, ಬಲದಂಡೆ, ಕೆಳದಂಡೆ, ಮೇಲ್‌ದಂಡೆ ಸೇರಿದಂತೆ ಇತರೆ ಕಾಲುವೆಗಳ ವ್ಯಾಪ್ತಿಯಲ್ಲಿ ಒಟ್ಟು ೧೫ ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆಯುವ ಬೆಳೆಗಳಿಗೆ ತೊಂದರೆಯಾಗಿಲಿದೆ. ಈ ಬಾರಿ ಒಂದು ಬೆಳೆಗೆ ನೀರು ಕೊರತೆಯಾಗುವ ಸಾಧ್ಯತೆಯಿದೆ. ಬರುವ ಬೇಸಿಗೆ ಈ ಪ್ರದೇಶದಲ್ಲಿ ನೀರಿಗೆ ತೀವ್ರ ಸಂಕಷ್ಟ ಸೃಷ್ಟಿಯಾಗಿಲಿದೆ ಎಂದು ಅತಂಕ ವ್ಯಕ್ತಪಡಸಿದ್ದಾರೆ.