ಪಿಐ ಅವರಿಂದಲೇ ಮರಳು ಸಾಗಣಿಕೆ ಅಶೋಕ ಸದಲಗಿ ಅಮಾನತ್ ಮಾಡಿ: ಆದರ್ಶ ನಾಯಕ
ದೇವದುರ್ಗ:ಆ.೧೧-
ಪಟ್ಟಣದ ಪೊಲೀಸ್ ಠಾಣೆ ಪಕ್ಕದಲ್ಲಿ ಸಂಗ್ರಹಿಸಿದ ೪೧ ಮೆಟ್ರಕ್ ಟನ್ ಜಪ್ತಿ ಮರಳು ಬುಧವಾರ ರಾತ್ರೋರಾತ್ರಿ ಅನಧಿಕೃತ ಸಾಗಣೆ ಮಾಡಲಾಗಿದ್ದು, ಯಾವುದೇ ಪರವಾನಗೆ ಇಲ್ಲದೇ ಅನಧಿಕೃತ ಸಾಗಣೆ ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಆದರ್ಶ ನಾಯಕ ಆರೋಪಿಸಿದರು.
ರವಿವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು, ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಮರಳನ್ನು ಜಪ್ತಿ ಮಾಡಿ ಠಾಣೆ ಪಕ್ಕದಲ್ಲಿ ಇರುವ ಜಾಗದಲ್ಲಿ ಸಂಗ್ರಹ ಮಾಡಲಾಗಿತ್ತು. ಸಂಗ್ರಹಿಸಿ ಮರಳನ್ನು ರಾತ್ರೋ ರಾತ್ರಿ ಸಾಗಾಣಿಕೆ ಮಾಡಲಾಗಿದೆ. ಹಾಗಾಯೇ ರಾಯಚೂರು ಎಸ್ಪಿಗೆ ದೂರು ನೀಡಿದ್ದೇವೆ ಎಂದು ತಿಳಿಸಿದರು.
ರಾಯಚೂರು ಡಿವೈಎಸ್‌ಪಿ ಲಕ್ಷ್ಮೀ ನಾರಾಯಣ ನೇತೃತದಲ್ಲಿ ತನಿಖೆ ಕೈಗೊಳ್ಳಲಾಗಿದೆ. ಅಕ್ರಮ ಸೀಜ್ ಮರಳು ಸಾರ್ವಜನಿಕರು ಮನೆ ಕಟ್ಟಡಕ್ಕೆ ಅಥಾವ ಸರಕಾರಿ ಕಟ್ಟಡಗಳ ನಿರ್ಮಾಣಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆಯಬೇಕೆಂಬ ನಿಯಮವಿದೆ. ಒಂದೊಮ್ಮೆ ಸೀಜ್ ಮರಳು ರಾಯಲ್ಟಿ ಮೂಲಕ ಸಾಗಣೆ ಮಾಡುವುದಾದ್ದರೇ, ಪಿಡಬ್ಲ್ಯೂಡಿ ಇಲಾಖೆಯ ಇಂಜನಿಯರಗಳು ಸೀಜ್ ಮರಳು ಜಿಪಿಎಸ್ ಅಳವಡಿಸಿ ಮೇಜರಮೇಟ್ ಮಾಡಿ ವರದಿ ನೀಡಲಾಗುತ್ತದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸೀಜ್ ಮರಳು ಇಂತಿಷ್ಟು ಬೆಲೆ ನಿಗದಿ ಬಳಿಕ ಡಿಡಿ ಮೂಲಕ ಹಣ ಕಟ್ಟಿದ ನಂತರ ರಾಯಲ್ಟಿ ಮೂಲಕ ಮರಳು ಸಾಗಣೆ ಮಾಡುವ ಪದ್ದತಿ ಜಾರಿಯಲ್ಲಿದೆ. ಯಾವುದೇ ಅನುಮತಿ ಪಡೆಯದೇ ಪಿಐ ಅಶೋಕ ಸದಲಗಿ ಸೂಚನೆ ಹಿನ್ನೆಲೆ ೧೦ಕ್ಕೂ ಅಧಿಕ ಟಿಪ್ಪರ್‌ಗಳ ಮೂಲಕ ಅನಧಿತೃಕ ಮರುಳು ಸಾಗಣೆ ಮಾಡಿರುವುದು ಬಾರಿ ಚರ್ಚೆಗೆ ಗ್ರಾಸವಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲವಾದ್ದರಿಂದ ಸೀಜ್ ಮಾಡಲಾದ ಮರಳುನ್ನು ಸಾಗಣೆದ್ದು ದೂರು ಕುರಿತು ಶುಕ್ರವಾರ ಬೆಳ್ಳಂಬೆಳಿಗೆ ಹಿರಿಯ ಅಧಿಕಾರಿ ಪುಷ್ಪಾಲತಾ ಸೀಜ್ ಮರಳು ಸಂಗ್ರಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಒಬ್ಬರೂ ಮೊತ್ತೊಬ್ಬರ ಮೇಲೆ ಬೊಟ್ಟು ತೊರುತ್ತಿದ್ದರಿಂದ ಅಧಿಕಾಗಳ ವಿರದ್ಧ ಭಾರಿ ಅನುಮಾನಕ್ಕೆ ಎಡೆಮಾಡಿದೆ. ಅಕ್ರಮ ಸೀಜ್ ಮರಳು ಪೊಲೀಸ್ ಇಲಾಖೆಯ ಅಧಿಕಾರಿಗಳು ರಕ್ಷಣೆ ಮಾಡಬೇಕು. ಅದು ಬಿಟ್ಟು ಸಂಬಂಧಪಟ್ಟಂತಹ ಅಧಿಕಾರಿಗಳ ಅನುಮತಿ ಇಲ್ಲದೇ ರಾತ್ರೋರಾತ್ರಿ ಅನಧಿಕೃತ ಮರಳು ಸಾಗಣೆ ಮಾಡುವುದಕ್ಕೆ ಅನುಮತಿ ಕೊಟ್ಟರು ಯಾರು ಎಂಬ ಪ್ರಶ್ನೆ ಶುರುವಾಗಿದೆ. ಅಕ್ರಮ ಸೀಜ್ ಮರಳು ಸಾಗಣೆ ಅನುಮತಿ ಕೊಟ್ಟಿಲ್ಲಂತ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಸ್ಪಷ್ಟ ಹೇಳುತ್ತಿರುವ ಹಿನ್ನೆಲೆ ರಾಯಚೂರು ಡಿವೈಎಸ್‌ಪಿ ಲಕ್ಷ್ಮೀ ನಾರಾಯಣ ದಾಖಲಾತಿ ಪರಿಶೀಲನೆ ಮಾಡುತ್ತಿರುವುದು ನಿಜಕ್ಕೂ ಒಂದಡೆ ಅನುಮಾನಕ್ಕೆ ಕಾರಣವಾಗಿದೆ.ಕೊಡಲೆ ಅಕ್ರಮವಾಗಿ ಮರಳುನ್ನು ಸಗಾಣೆಕ್ಕೆ ಮಾಡಿದ ಅಧಿಕಾಗಳ ವಿರುದ್ಧ ಸೊಕ್ತ ರೀತಿಯಲ್ಲಿ ತನಿಖೆ ಕೈಗೊಂಡು ಸಂಬಂಧಿಸಿದ ಅಧಿಕಾರಗಳನ್ನು ಅಮಾನತುಗೊಳ್ಳಿಸಬೇಕು ಎಂದು ಎಚ್ಚರಿಸಿದರು. ಒಂದೊಮ್ಮೆ ನಿರ್ಲಕ್ಷ್ಯಗೊಳಿಸಿದರೆ ಮುಂದಿನ ದಿನಗಳಲ್ಲಿ ಸಂಬಂದಿಸಿ ಪೊಲೀಸ್ ಠಾಣೆ ಮುಂದೆ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಎಚ್ಚ್ಚರಿಸಿದರು. ಈಸಂದರ್ಭದಲ್ಲಿ ಲಕ್ಷೀಕಾಂತ ನಾಯಕ ಕೊಳ್ಳೂರು ಇದ್ದರು.