ರಸ್ತೆಗೆ ಚಾಚಿದ ಜಾಲಿಗಿಡಗಳು : ಸಂಚಾರಕ್ಕೆ ತೊಂದರೆ
ಅರಕೇರಾ:ಆ.೧೧-
ಜಾಗಿರಜಾಡಲದಿನ್ನಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮರಾಠ ಗ್ರಾಮಕ್ಕೆ ಶ್ರೀ ರಾಮೇಶ್ವರ ದೇವಸ್ಥಾನ ಹಾಗೂ ಶ್ರೀ ವೀರಭದ್ರ ಸ್ವಾಮೀಜಿಗಳ ನೀಲಂಭಿಕಾ ಬಸವ ಯೋಗಾಶ್ರಮಕ್ಕೆ ಹೋಗುವ ರಸ್ತೆಯು ಇದೇ ರಸ್ತೆಯಪ್ರಮುಖ ರಸ್ತೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವುದಲ್ಲದೇ,ತೆರಳಲು ಈ ರಸ್ತೆ ಪ್ರಮುಖವಾಗಿದೆ. ಅಲ್ಲದೇ ಹೋಗುವ ರಸ್ತೆ ಮತ್ತು ಅಕ್ಕ-ಪಕ್ಕ ದೊಡ್ಡ ದೊಡ್ಡ ಜಾಲಿ ಮರಗಳು ಬೆಳೆದು ನಿಂತಿದ್ದು, ರೈತರು ಸಂಚರಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜಾಗಿರಜಾಡಲದಿನ್ನಿ ಗ್ರಾಮದಿಂದ ಆರಂಭವಾದ ಈ ರಸ್ತೆ ಶ್ರೀ ರಾಮೇಶ್ವರ ದೇವಾಲಯಕ್ಕೆ ಶ್ರಾವಣ ಮಾಸದ ಅಂಗವಾಗಿ ದೇವಸ್ಥಾನಕ್ಕೆ ಭಕ್ತರು ಪೂಜೆ ಕಾರ್ಯಗಳಿಗೆ ತೆರಳಬೇಕಾದರೆ ಕಾರು ಜೀಪುಗಳ ಮೂಲಕ ತೆರಳಬೇಕಾದರೆ ರಸ್ತೆಯಲ್ಲಿ ಜಾಲಿಗಿಡಮರಗಳು ಬೆಳೆದಿರುವದರಿಂದ ಬಹಳಷ್ಟು ತೊಂದರೆಯಾಗಿದೇ.
ಸಂಪೂರ್ಣ . ರಸ್ತೆಯುದ್ದಕ್ಕೂ ಆಳೆತ್ತರ ಬೆಳೆದು ನಿಂತ ಜಾಲಿ ಮರಗಳಿವೆ. ೧೫ ಅಡಿ ಅಗಲವಿರುವ ಈ ರಸ್ತೆ ಜಾಲಿಮರಗಳು ಆವರಿಸಿಕೊಂಡಿದ್ದು, ಕೇವಲ ೮ಅಡಿಯಷ್ಟಾಗಿದೆ. ಆದ್ದರಿಂದ ಕಾಲ್ನಡಿಗೆಯಲ್ಲಿ ಮನುಷ್ಯರು ಹೋಗುವುದೇ ಕಷ್ಟವಾಗಿದೆ. ಇನ್ನು ರೈತರ ಎತ್ತಿನ ಬಂಡಿಗಳು ಹೋಗುವುದು ಹೇಗೆ? ಈ ಭಾಗದ ರೈತರಿಗೆ ಈ ರಸ್ತೆ ಬಿಟ್ಟು ಅನ್ಯ ಮಾರ್ಗವೇ ಇಲ್ಲದಂತಾಗಿದೆ. ಇದನ್ನು ಪರಿಹರಿಸುವವರಾರು ಎಂದು ರೈತರು ಪ್ರಶ್ನಿಸುತ್ತಾರೆ.ಗ್ರಾಮಪಂಚಾಯತಿ ಆಡಳಿತ ಮಂಡಳಿಯ ಅಧ್ಯಕ್ಷರು ಉಪಾಧ್ಯಕ್ಷರು ಅಭಿವೃದ್ಧಿ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಜಂಗಲ್ ಕಟಿಂಗ ಮಾಡಿಸಿ ಭಕ್ತ ಸಮೂಹಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.