ವಿಶ್ವ ಬುಡಕಟ್ಟು ದಿನಾಚರಣೆ ಆಚರಣೆ
ಕೊಲ್ಹಾರ:ಆ.11:ಮಾನವರೆಲ್ಲರೂ ಮೂಲದಲ್ಲಿ ಬುಡಕಟ್ಟು ಜನಾಂಗದವರು. ವಿಶಿಷ್ಟ ಸಂಸ್ಕøತಿಯ ಮೂಲಕ ಭಾರತದ ಆಚಾರ – ವಿಚಾರಗಳನ್ನು ಮೈಗೂಡಿಸಿಕೊಂಡು ಬದುಕು ನಡೆಸುವ ಬುಡಕಟ್ಟು ಜನಾಂಗವಾಗಿದೆ ಎಂದು ಸಾಹಿತಿ ಮೋಹನ ಕಟ್ಟಿಮನಿ ಅಭಿಪ್ರಾಯಪಟ್ಟರು.
ಪಟ್ಟಣದ ಸಂಗಮೇಶ್ವರ ಮಹಾವಿದ್ಯಾಲಯದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ಮತ್ತು ತಾಲೂಕು ಘಟಕ ಕೊಲ್ಹಾರ ವತಿಯಿಂದ ಏರ್ಪಡಿಸಿದ ” ವಿಶ್ವ ಬುಡಕಟ್ಟು ” ದಿನಾಚರಣೆಯಲ್ಲಿ ” ಬುಡಕಟ್ಟು ಕಲಾವಿದರ ಸ್ಥಿತಿ -ಗತಿ ” ಕುರಿತು ಉಪನ್ಯಾಸ ನೀಡುತ್ತಾ, ಬುಡಕಟ್ಟು ಜನರ ಬದುಕು ಸುಧಾರಣೆ ಆಗಬೇಕು. ಬುಡಕಟ್ಟು ಕಲಾವಿದರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದರು.
ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಪ್ರಾಚಾರ್ಯ ಡಾ ಎ ಡಿ ಚವ್ಹಾಣ, ಬುಡಕಟ್ಟು ಜನಾಂಗ ಉಡುಗೆ,ತೊಡುಗೆ, ಆಚಾರ, ವಿಚಾರ, ನಂಬಿಕೆ, ಸಂಪ್ರದಾಯಗಳಲ್ಲಿ ವಿಶಿಷ್ಟತೆ ಉಳಿಸಿಕೊಂಡು ಬಂದಿದೆ. ಲಿಪಿಯಿಲ್ಲದ ಭಾಷೆಯನ್ನು ಉಳಿಸಿ ಬೆಳೆಸುತ್ತ ಕಷ್ಟದಲ್ಲಿ ಬದುಕುತ್ತಿದ್ದಾರೆ. ಸರಕಾರ ಬುಡಕಟ್ಟು ಜನಾಂಗದವರಿಗೆ ವಿಶೇಷ ಸವಲತ್ತು ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರು) ಬುಡಕಟ್ಟು ಜನಾಂಗದ ಜಾನಪದ ಕಲಾವಿದರ ಕುರಿತು ಸಂಶೋಧನೆ ನಡೆಯಬೇಕು. ಬುಡಕಟ್ಟು ಕಲಾವಿದರು ಸರಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕಲಾವಿದರ ಅಂಕಿ ಸಂಖ್ಯೆ ಕುರಿತು ನಮ್ಮ ಪರಿಷತ್ತು ಸಮೀಕ್ಷೆ ನಡೆಸಲು ಮುಂದಾಗಿದೆ. ಬುಡಕಟ್ಟು ಕಲಾವಿದರಿಗೆ ಕಲಾವಿದರ ಗುರುತಿನ ಪತ್ರ ನಾವು ನೀಡಿದ್ದೇವೆ ಎಂದರು. ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ ಸಾಲಳ್ಳಿ ,ಕನ್ನಡ ಜಾನಪದ ಪರಿಷತ್ ಕೊಲ್ಹಾರ ತಾಲೂಕಾಧ್ಯಕ್ಷ ಮಲ್ಲಪ್ಪ ಗಣಿ ಮಾತನಾಡಿದರು.
ವೇದಿಕೆಯಲ್ಲಿ ಹೇಮ ವೇಮ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಲ್ಲಿಕಾರ್ಜುನ ಗಣಿ, ಪರಿಷತ್ ಕೂಡಗಿ ವಲಯ ಅಧ್ಯಕ್ಷ ದುಂಡಯ್ಯ ಮಠಪತಿ ಪರಿಷತ್ ಪದಾಧಕಾರಿಗಳಾದ ಮೌಲಾಸಾಹೇಬ ಜಾಹಾಗಿರದಾರ, ಭೀಮಶಿ ಬೀಳಗಿ, ಕಲಾವಿದರಾದ ಶ್ರೀಶೈಲ ಬಾಟಿ, ಪವಾಡೆಪ್ಪ ಗೊಳಸಂಗಿ, ಅಜೀಜಸಾಬ ಜಹಾಗಿರದಾರ ಉಪಸ್ಥಿತರಿದ್ದರು.
ಬುಡಕಟ್ಟು ( ಲಂಬಾಣಿ) ಕಲಾವಿದರಾದ ವಾಲುಬಾಯಿ ಲಮಾಣಿ ಮತ್ತು ಪ್ರೇಮಾಬಾಯಿ ಲಮಾಣಿಯವರನ್ನು ಸನ್ಮಾನಿಸಲಾಯಿತು.ಲಂಬಾಣಿ ಪದ, ರಿವಾಯತ ಪದ, ಹಂತಿ ಪದ ಪ್ರದರ್ಶನ ನೀಡಲಾಯಿತು. ಪೆÇ್ರ ಮಂಜುನಾಥ ಯಂಡಿಗೇರಿ ನಿರೂಪಿಸಿದರು. ಪೆÇ್ರ ಮಂಜುನಾಥ ಮಟ್ಯಾಳ ಸ್ವಾಗತಿಸಿದರು. ಪೆÇ್ರ ವಿಜಯಲಕ್ಷ್ಮಿ ಡಂಬಳ ವಂದಿಸಿದರು.