ನೂತನ ರಥಕ್ಕೆ ನಾಲ್ಕುವರೆ ಕೆ.ಜಿ ಬೆಳ್ಳಿಯನ್ನು ಕೊಡುಗೆ ನೀಡಿದ ಎ.ರಾಜಶೇಖರನಾಯಕ
ಅರಕೇರಾ:ಆ.೧೧-
ಅರಕೇರಾ ಪಟ್ಟಣದಲ್ಲಿನ ಅವರ ನಿವಾಸದಿಂದ ಶ್ರೀ ಸೂಗೂರೇಶ್ವರ ದೇವಸ್ಥಾನಕ್ಕೆ ಬಂದು ವಿಶೇಷಪೂಜೆ ಮತ್ತು ಕಾಯಿಕರ್ಪೂರ ಅರ್ಪಿಸಿದರು. ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಸೂಗೂರೇಶ್ವರ ದೇವಸ್ಥಾನದ ನೂತನ ರಥದ ಬೆಳ್ಳಿ ಛತ್ರಿ ಮಾಡುವ ಸಲುವಾಗಿ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕರವರು ನಾಲ್ಕುವರೆ ಕೆ.ಜಿ ಬೆಳ್ಳಿಯನ್ನು ಶನಿವಾರ ಸಮರ್ಪಣೆ ಮಾಡಿದರು.
ನಂತರ ಎ.ರಾಜಶೇಖರ ನಾಯಕ ಮಾತನಾಡಿ, ಗುಡಿ-ಗುಂಡಾರಗಳು ಅಭಿವೃದ್ಧಿ ಹೊಂದಬೇಕೆಂದರೆ ಎಲ್ಲರ ಸಹಕಾರ ಮುಖ್ಯ. ನಮ್ಮ ತಂದೆಯವರಾದ ಮಾಜಿ ಸಂಸದ ದಿ.ಎ.ವೆಂಕಟೇಶ ನಾಯಕ ಅವರು ದೇವಸ್ಥಾನ ಅಭಿವೃದ್ಧಿಗೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಗೋಪುರ ನಿರ್ಮಾಣ, ಕಲ್ಯಾಣ ಮಂಟಪ ನಿರ್ಮಾಣಕ್ಕೂ ಸಹಕರಿಸಲಾಗಿದೆ ಎಂದರು.
ಸಂದರ್ಭದಲ್ಲಿ ಚನ್ನವೀರಯ್ಯಸ್ವಾಮಿ ಹಿರೇಮಠ,ತಿಮ್ಮಪ್ಪನಾಯಕ ಪೋಲಿಸ್ ಪಾಟೀಲ್ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು.ಕಲ್ಪವೃಕ್ಷ ಬ್ಯಾಂಕಿನ ಅಧ್ಯಕ್ಷರಾದ ಬಸವರಾಜಪೂಜಾರಿ, ಗಂಗಯ್ಯಸ್ವಾಮಿ, ಚಂದ್ರಶೇಖರಶೆಟ್ಟಿ ,ಮಲ್ಲಿಕಾರ್ಜುನಸಾಹುಕಾರ ಗುಡಿ .ಜಿ.ಬೂದೇಪ್ಪಸಾಹುಕಾರ.ಕೆ.ನಾಗಪ್ಪಸಾಹುಕಾರ, ಸೂಗಪ್ಪಕುಂಬಾರ, ಬಸವರಾಜಪ್ಪಗುಡಿ, ರವಿಪತ್ತಾರ, ವೀರುಪಾಕ್ಷಿಸ್ವಾಮಿ. ಶ್ರೀನಿವಾಸ ಆಚಾರ್ಯ ಗುಂತಲ್ ಅಹ್ಮದಬಡಿಗೇರಾ, ರಾಜುಗುರಿಕಾರ ಸೇರರಿದಂತೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಚಿತ್ರಸುದ್ದಿ ಸಂಖ್ಯೆ ೧೦(೧) ಅರಕೇರಾ ಪಟ್ಟಣದ ಸೂಗೂರೇಶ್ವರ ದೇವಸ್ಥಾನದ ನೂತನ ರಥಕ್ಕೆ ನಾಲ್ಕುವರೆ ಕೆ.ಜಿ ಬೆಳ್ಳಿಯನ್ನು ಎ.ರಾಜಶೇಖರನಾಯಕ ಕೊಡುಗೆ ನೀಡುತ್ತಿರುವದು.