ಜುಮನಾಳ ಗ್ರಾಮದಲ್ಲಿ ಬಸವ ಪಂಚಮಿ ಆಚರಣೆ
ವಿಜಯಪುರ,ಆ.11:ತಾಲೂಕಿನ ಜುಮನಾಳ ಗ್ರಾಮದಲ್ಲಿ ಬಸವ ಪಂಚಮಿಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದ ನಿಮಿತ್ಯ ವಿದ್ಯಾರ್ಥಿಗಳಿಗೆ ನಂಬಿಕೆಗಳು ಹಾಗೂ ಮೂಢನಂಬಿಕೆಗಳ ಕುರಿತು ಚರ್ಚಾ ಕೂಟ ಹಾಗೂ ಭಾಷಣ ಸ್ಪರ್ಧೆಯನ್ನು ಏರ್ಪಡಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ಪ್ರಗತಿಪರ ಚಿಂತಕ ರಮೇಶ ಹಾದಿಮನಿ, ಹೊಸಮನಿ ಹಾಗೂ ಗ್ರಾಮದ ಹಿರಿಯರಾದ ಖಜಾಸಾಬ ಮಿರ್ದೆ ಅವರು ಇದ್ದರು.
ಈ ಕಾರ್ಯಕ್ರಮವನ್ನು ಗ್ರಾಮದ ಪ್ರಗತಿಪರ ವಿಚಾರವುಳ್ಳ ಯುವಕರು ಆಯೋಜಿಸಿದ್ದರು.