ಮಮದಾಪುರದಲ್ಲಿ ಶ್ರೀ ಅಭಿನವ ಮುರುಘೇಂದ್ರ ಸ್ವಾಮಿಗಳ 42ನೇ ಜನ್ಮ ದಿನ
ವಿಜಯಪುರ,ಆ.11:ಬಸವತತ್ವಗಳ ಪ್ರಚಾರಕರು, ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದ ಐತಿಹಾಸಿಕ ವಿರಕ್ತ ಮಠದ ಪೂಜ್ಯ ಶ್ರೀ ಮ.ನಿ.ಪ್ರ.ಸ್ವ ಅಭಿನವ ಮುರುಘೇಂದ್ರ ಮಹಾಸ್ವಾಮೀಜಿಯವರ 42 ಜನ್ಮದಿನದ ಅಂಗವಾಗಿ ಮಮದಾಪುರ ಹಾಗೂ ಹಲಗಣಿ ಗ್ರಾಮದ ಯುವ ಚಿಂತನ ಬಳಗದಿಂದ ಪೂಜ್ಯ ಶ್ರೀ ಗಳಿಗೆ ಸನ್ಮಾನಿಸಿ, ವಿಶ್ರಾಂತ ಐಎಎಸ್ ಅಧಿಕಾರಿ ಡಾ.ಬಾಬುರಾವ್ ಮುಡಬಿ ಅವರು ಬರೆದ ಮಹಿಳಾ ಸಬಲೀಕರಣ ಅಂಬೇಡ್ಕರ್ ದೃಷ್ಠಕೋನ ಕೃತಿ ನೀಡಿ, ಪೂಜ್ಯ ಶ್ರೀ ಗಳಿಗೆ ಜನ್ಮದಿನದ ಶುಭಾಶಯಗಳು ಕೋರಲಾಯಿತು.
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳಲ್ಲಿ ತೊಡಗಿರುವ ನಿಮ್ಮ ಸೇವೆಯ ಭಾಗ್ಯ ಪಡೆಯುತ್ತಿರುವ ನಮ್ಮ ಜಿಲ್ಲೆ ಹಾಗೂ ಸುತ್ತಲಿನ ಗ್ರಾಮಗಳು ಧನ್ಯ ಎಂದು ಬಣ್ಣಿಸಲಾಯಿತು.
ಮುತ್ತೇಶ ಗಡ್ಡದಮಠ, ಶಬ್ಬಿರ ಕೀಜಿ, ಪ್ರಸಾದ ಪತ್ತಾರ, ಸುರೇಶ ಕರಿಕಲ್ಲ, ಸಿದ್ದು ಮಾದರ, ಅಮೀನ ಬಾಗವಾನ, ಹನಮಂತ ನಾಟೀಕಾರ, ಸಂತೋಶ ಗಲಗಲಿ, ಹಲಗಣಿ ಗ್ರಾಮದ ಯುವಕರಾದ ಪ್ರಶಾಂತ ಬಿರಾದಾರ, ಆಕಾಶ ಗುಣದಾಳ, ಬಂಗಾರೆಪ್ಪಗೌಡ ಬಿರಾದಾರ ಇತರರು ಉಪಸ್ಥಿತರಿದ್ದರು.