ರಾಜಶೇಖರ ನೀರಮಾನ್ವಿ ನಿಧನಕ್ಕೆ ಸಂತಾಪ
ಸಂಜೆವಾಣಿವಾರ್ತೆ
 ಬಳ್ಳಾರಿ, ಅ,11- ವೀರಶೈವ ಕಾಲೇಜಿನ ಭೂಗರ್ಭಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಡಾ.ರಾಜಶೇಖರ ನೀರಮಾನ್ವಿ, ನಿಧನಕ್ಕೆ ವೀರಶೈವ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಮಹಾವಿದ್ಯಾಲಯದ ಭೋದಕ/ ಭೋದಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಂತಾಪ ಸೂಚಕ ಸಭೆ ನಡೆಸಿ ಶ್ರೀಯುತರ ಆತ್ಮಕ್ಕೆ ಶಾಂತಿಯನ್ನು ಕೋರಿ, ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿ, ಸಂತಾಪ ಸೂಚಿಸಿದ್ದಾರೆ
ಮೃತರು ಕನ್ನಡದ ಖ್ಯಾತ ಕಥೆಗಾರರಾಗಿದ್ದು ಹಂಗಿನ ಅರಮನೆಯ ಹೊರಗೆ ಮತ್ತು “ ಕರ್ಪೂರದ ಕಾಯದಲ್ಲಿ “ ಎಂಬ ಎರಡು ಕಥಾ ಸಂಕಲನಗಳ ಮೂಲಕ ನಾಡಿನ ಗಮನವನ್ನು ಸೆಳೆದಿದ್ದರು. ಅವರ “ಹಂಗಿನ ಅರಮನೆಯ ಹೊರಗೆ” ಮೊದಲ ಕಥಾ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು.