ಸಾಸನೂರ ಗ್ರಾಮ ಸ್ವರ್ಗ ಸಮಾನ:ಶಿವಲಿಂಗಶ್ರೀ
ತಾಳಿಕೋಟೆ:ಆ.11: ಮಹಾನ ಸಾಹಿತಿಗಳಿಗೆ ರಾಜ್ಯದಲ್ಲಿ ಉನ್ನತ ಸೇವೆಗೈಯುವವರಿಗೆ ಜನ್ಮ ನೀಡಿದ ಗ್ರಾಮ ಸಾಸನೂರ ಗ್ರಾಮವಾಗಿದ್ದು ಈ ಗ್ರಾಮದ ಹೆಸರಿನಲ್ಲಿದ್ದ ಅನೇಕ ಜನರು ಉನ್ನತ ಸ್ಥಾನಮಾನದ ಮೆಟ್ಟಿಲೇರಿ ಈ ಗ್ರಾಮದ ವರ್ಚಸ್ಸು, ಘನತೆ, ಗೌರವ ಮುಂದೆ ತರುವಲ್ಲಿ ಯಶಸ್ವಿಯಾಗಿರುವುದು ಎಲ್ಲರಿಗೂ ಗೊತ್ತಿದ್ದ ವಿಷಯವಾಗಿದೆ ಎಂದು ಶಿರಸಿ ಬಣ್ಣದ ಮಠದ ಶ್ರೀ.ಮ.ನಿ.ಪ್ರ.ಶಿವಲಿಂಗ ಮಹಾಸ್ವಾಮಿಗಳು ನುಡಿದರು.
ಶನಿವಾರರಂದು ಸಾಸನೂರ ಗ್ರಾಮದಲ್ಲಿ ಶ್ರೀ ಮಡಿವಾಳೇಶ್ವರ ಹೀರೆಮಠದಲ್ಲಿ ಏರ್ಪಡಿಸಲಾದ ಲಿಂ.ಶ್ರೀ.ಮ.ನಿ.ಪ್ರ.ಗುರುಸಿದ್ದರಾಜ ಯೋಗಿಂದ್ರ ಮಹಾಸ್ವಾಮಿಗಳವರ 111ನೇ ಜಯಂತ್ಯೋತ್ಸವದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದ ಶ್ರೀಗಳು ಗುರುಸಿದ್ದರಾಜ ಶ್ರೀಗಳು ಸಾಸನೂರ ಗ್ರಾಮದವರಾಗಿದ್ದು ಸುಮಾರು ಇಂತಹ 8-10 ಶ್ರೀಗಳನ್ನು ಜನ್ಮ ನೀಡಿದ ಸಾಸನೂರ ಗ್ರಾಮ ಸ್ವರ್ಗ ಸಮಾನ ಆಗಲು ಕಾರಣವಾಗಿದೆ ಎಂದರು. ರಾಷ್ಟ್ರೀಯ ಜನನಾಯಕರಿಗೆ, ಧರ್ಮ ಶ್ರೇಷ್ಠರಿಗೆ ಅಲ್ಲದೇ ರಾಜಕೀಯ ಮಹಾನ ವ್ಯಕ್ತಿಗಳಿಗೆ ಜನ್ಮ ನೀಡಿದ ಈ ಗ್ರಾಮ ಅವಿಸ್ಮರಣಿಯದ್ದಾಗಿದೆ ಎಂದರು. ಇಲ್ಲಿ ಕುಸ್ತಿಪಟುಗಳು ಆಗಿ ಹೊಗಿದ್ದಾರೆ ಆಟ ಪಾಠ ಕೂಡ ಆಡುತ್ತಿದ್ದರು, ಗುಂಡು ಸಗ್ರಾಣಿ ಕಲ್ಲುಗಳನ್ನು ಎತ್ತುವಂತಹ ಕಾರ್ಯ ಈ ಹಿಂದೆ ನಡೆಯುತ್ತಿದ್ದರಿಂದಲೇ ಈ ಗ್ರಾಮಕ್ಕೆ ಸಾಹಸಮಯ ಗ್ರಾಮವೆಂದು ಕರೆಯಲಾಗುತಿತ್ತೆಂದರು. ಇಂತಹ ಗ್ರಾಮದಲ್ಲಿ ಸ್ವಾವಲಂಬಿಯಾಗಿ ಬದುಕಬೇಕು ಎಲ್ಲರು ಉದ್ಯೋಗವಂತರಾಗಿ ಬಾಳಿ ಬದುಕಬೇಕು ಎಂಬ ಆಸೆ ವ್ಯಕ್ತಪಡಿಸಿದ್ದ ನಾನು ಇಲ್ಲಿ ಗುರುಕುಲ ಸ್ಥಾಪನೆಗಾಗಿ ಸಜ್ಜಾಗಿದ್ದೆನೆಂದರು. ಇದರಿಂದ ಆಸರೆ ಇಲ್ಲದವರು ಮತ್ತು ಮಾನಸಿಕ ನೆಮ್ಮದಿ ಇಲ್ಲದವರಿಗೂ ಸಹ ಆಶ್ರಯವಾಗಬೇಕೆಂಬ ಗುರುಕುಲ ಸ್ಥಾಪನೆಗೆ ಸಜ್ಜಾಗಿದ್ದೇವೆ ಇದಕ್ಕೆ ಎಲ್ಲರ ಸಹಾಯ ಸಹಕಾರ ಬೇಕೆಂದರು. ಕೋಡುವ ಕೈಗಳು ಸಾಕಷ್ಟಿವೆ ಆದರೆ ಬೇಡುವ ಬಾಯಿಗೆ ನಿಯತ್ತೆಂಬುದಿರಬೇಕು ಇಂತಹ ಭಾವನೆ ನನ್ನಲಿದೆ ಮನುಕುಲವೇ ನನ್ನ ಕುಟುಂಬ ಇಡೀಜಗತ್ತೆ ನನ್ನ ಮನೆಯಾಗಿದೆ ಎಲ್ಲರೂ ನಮ್ಮವರೇ ಎಂದು ಹೇಳಿದ ಶ್ರೀಗಳು ಶ್ರೀ ಮಠಕ್ಕೆ ಶ್ರೀ ಮಲ್ಲಿಕಾರ್ಜುನ ಶ್ರೀಗಳನ್ನು ಉತ್ತರಾಧಿಕಾರಿ ಎಂದು ನೇಮಕ ಮಾಡಿದ್ದೆನೆ ಈ ಕುರಿತು ಕಾಗದ ಪತ್ರಗಳನ್ನು ಸಹ ಮಾಡಲಾಗಿದೆ ಎಂದು ಶ್ರೀಗಳು ಇಡೀ ತಮ್ಮ ಜೀವನದ ಇತಿಹಾಸವನ್ನು ಬಿಚ್ಚಿಟ್ಟರು.
ಇನ್ನೋರ್ವ ಮುಖ್ಯ ಅಥಿತಿಗಳಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದ ವಿಜಯಪುರ ಅನುಗ್ರಹ ಕಣ್ಣಿ ಆಸ್ಪತ್ರೆಯ ಖ್ಯಾತ ನೇತ್ರತಜ್ಞವೈಧ್ಯರಾದ ಡಾ.ಪ್ರಭುಗೌಡ ಲಿಂಗದಳ್ಳಿ(ಚಬನೂರ) ಅವರು ಮಾತನಾಡಿ ಭೂತಕಾಲದಿಂದ ಭವಿಷ್ಯತ್ತ್ ಕಾಲಕ್ಕೆ ಬಂದ ನಾವು ಈ ಹಿಂದೆ ಆಧ್ಯಾತ್ಮ ಸಂಸ್ಕಾರ ಎಂಬುದು ಹೆಚ್ಚಾಗಿತ್ತು ಈಗ ಸಂಸ್ಕಾರ ಕಡಿಮೆಯಾಗಿ ಆಧ್ಯಾತ್ಮದ ಒಲವು ಹೆಚ್ಚಾಗುತ್ತಲಿದೆ ಈ ಕಾರಣದಿಂದಲೇ ಶಿರಸಿ ಶ್ರೀಗಳು ಆಧ್ಯಾತ್ಮದ ವಿಚಾರ ಉಣಬಡಿಸಲು ಬಂದಿದ್ದಾರೆಂದರು. ಯಾವ ಚಟ ಮಾಡಬೇಕು ಯಾವುದು ಮಾಡಬಾರದು ಎಂಬುದನ್ನು ಹಿರಿಯರು ಈ ಹಿಂದೆ ಕಲಿಸುತ್ತಿದ್ದರು ಇದರಿಂದ ಆರೋಗ್ಯವೆಂಬುದು ಸಧೃಡವಾಗಿರುತ್ತಿತ್ತು ಈಗ ನಗರ ಪಟ್ಟಣಗಳಲ್ಲಿ ಆಸ್ಪತ್ರೆಗಳು ಹೆಚ್ಚಾಗುತ್ತಿರುವುದನ್ನು ನೋಡಿದರೆ ಆರೋಗ್ಯವೆಂಬುದು ಹದಗೆಡುತ್ತಿರುವ ಕಾರಣವಾಗಿದೆ ಎಂದು ಹೇಳಬಹುದಾಗಿದೆ ಎಂದರು. ಯುವಕರು ದಾರಿ ತಪ್ಪುತ್ತಿದ್ದಾರೆ ಸಂಸ್ಕಾರ ಕಡಿಮೆಯಾಗುತ್ತಲೇ ಇದೆ ಕುಡಿತ ಚಟ ಮನೆತನವನ್ನು ಹಾಳು ಗೆಡುವಂತಹದ್ದಾಗಿದೆ ಎಂಬುದನ್ನು ಅರಿತುಕೊಂಡು ನಡೆದರೆ ಜೀವನ ಸಾರ್ಥಕವಾಗಲಿದೆ ಎಂದು ಹೇಳಿದ ಡಾ.ಪ್ರಭುಗೌಡ ಅವರು ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕಾರದ ಜೊತೆಗೆ ಆಧ್ಯಾತ್ಮ ಅಳವಡಿಸಿಕೊಳ್ಳಿ ಎಂದು ಹೇಳುತ್ತಾ ಸಾಗಿದ ಶಿರಸಿ ಬಣ್ಣದ ಮಠದ ಶ್ರೀ ಶಿವಲಿಂಗ ಶ್ರೀಗಳ ಸೇವಾಕಾರ್ಯದಲ್ಲಿಯೂ ಸಹ ನಾವು ಭಾಗಿಯಾಗುತ್ತೆವೆಂದರು.
ಇನ್ನೋರ್ವ ಅಥಿತಿ ಕೆ.ಪಿ.ಸಿ.ಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ) ಅವರು ಮಾತನಾಡಿ ಹಿಂದಿನ ಕಾಲದಲ್ಲಿ ಬಾಲಕರು ಪಾಲಕ ಹಾಗೂ ಗುರುವಿನ ಬಗ್ಗೆ ಒಳ್ಳೆಯ ಆಸಕ್ತಿ ಹೊಂದಿ ಗೌರವಿಸುವ ಕಾರ್ಯ ನಡೆಯುತ್ತಿತ್ತು ಇಂತಹ ವಿಷಯಗಳ ಕುರಿತು ಅವಲೋಕಿಸಿದಾಗ ಹಿಂದಿನ ಇಂದಿನ ದಿನಮಾನಗಳಲ್ಲಿಯ ವಿಷಯ ಬಹಳೇ ಅಂತರವಾಗಿರುವುದು ಕಂಡು ಬರುತ್ತಿದೆ ಈ ಕಾರಣದಿಂದಲೇ ಈ ಭಾಗದಲ್ಲಿ ಗುರುಕುಲವನ್ನು ಸ್ಥಾಪನೆ ಮಾಡುವ ಕುರಿತು ಸಜ್ಜಾಗಿರುವ ಶ್ರೀ ಶಿವಲಿಂಗ ಮಹಾಸ್ವಾಮಿಗಳ ಸೇವಾಕಾರ್ಯ ಅತೀವ ಮಹತ್ವದ್ದಾಗಿದೆ ಎಂದರು. ಗುರುಕುಲವಾದರೆ ಸುತ್ತಮುತ್ತಲಿನ ಗ್ರಾಮಗಳಿಗೆ ಅನುಕೂಲವಾಗಲಿದೆ ಇಂತಹ ಕಾರ್ಯಕ್ಕೆ ತಮ್ಮದು ಸಹಕಾರವಿದೆ ಎಂದು ಬಿ.ಎಸ್.ಪಾಟೀಲರು ಹೇಳಿದರು.
ಮಾಜಿ ಶಾಸಕರಾದ ಶಿವಪುತ್ರಪ್ಪ ಎಮ್.ದೇಸಾಯಿ ಅವರು ಅಧ್ಯಕ್ಷತೆವಹಿಸಿದ್ದರು.
ಇನ್ನೊರ್ವ ಸಾನಿಧ್ಯವಹಿಸಿದ ಶ್ರೀ ಮಠದ ಉತ್ತರಾಧಿಕಾರಿಯಾಗಿ ನಾಮಕರಣಗೊಂಡ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಗುರುಸಿದ್ದರಾಜ ಯೋಗಿಂದ್ರಮಹಾಸ್ವಾಮಿಗಳವರ ಅನೇಕ ಪವಾಡಗಳ ಕುರಿತು ವಿವರಿಸಿ ಭಕ್ತೋಧ್ಧಾರ ಜನೋದ್ಧಾರ ಗೈದಿದ್ದಲ್ಲದೆ ಹಾನಗಲ್ಲ ಮಹಾಶಿವಯೋಗಿಗಳ ಕುರಿತು ಬಸವಣ್ಣನವರ ವಚನಗಳನ್ನು ಪ್ರಸ್ತಾಪಿಸಿ ಆಧ್ಯಾತ್ಮ ಅಂದರೇ ತನ್ನನ್ನು ತಾನು ತಿಳಿದುಕೊಳ್ಳುವುದ್ದಾಗಿದೆ ಎಂದು ಬಹು ಮಾರ್ಮಿಕವಾಗಿ ವಿವರಿಸಿದರು.
ಇದೆ ಸಮಯದಲ್ಲಿ ಶ್ರೀಗಳಿಗೆ ಅಥಿತಿ ಮಹೋದಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ರವಿಕುಮಾರ ಹಯ್ಯಾಳ, ಅಯ್ಯನಗೌಡ.ಸಿ.ಪಾಟೀಲ, ಶಿವಾನಂದ ದೇಸಾಯಿ, ಬಸವನಗೌಡ ಬಿಂಜಲಬಾವಿ, ಬಾಪುಗೌಡ ಪಾಟೀಲ, ಸೋಮನಗೌಡ ಯರಲಡ್ಡಿ, ಬಸವನಗೌಡ ಪಾಟೀಲ, ಸಂಗನಗೌಡ ಪಾಟೀಲ, ಗಬಸಾವಳಗಿ ಮೊದಲಾದವರು ಉಪಸ್ಥಿತರಿದ್ದರು.
ಮುತ್ತುಗೌಡ ಪಾಟೀಲ ಪ್ರಾರ್ಥಿಸಿದರು. ನಿಂಗಣ್ಣ ಹಯ್ಯಾಳ ಸ್ವಾಗತಿಸಿದರು, ಎಚ್.ಬಿ.ದೇವರೆಡ್ಡಿ ನಿರೂಪಿಸಿ ವಂದಿಸಿದರು.