ಸರಿಯಾಗಿ ಕೆಲಸಮಾಡಿದ್ರೆ ಪುರಸ್ಕಾರ ಇಲ್ಲಾ ಅಂದ್ರೆ ಶಿಸ್ತು ಕ್ರಮ
ತಾಳಿಕೋಟೆ:ಆ.11: ಸಮಯಕ್ಕೆ ಸರಿಯಾಗಿ ಬಾರದ ವೈಧ್ಯ ಸಿಬ್ಬಂದಿಗಳ ಬಗ್ಗೆ ಜನರು ಮೇಲಿಂದ ಮೇಲೆ ದೂರು ನೀಡುತ್ತಾ ಬಂದಿದ್ದಾರೆ ಆಸ್ಪತ್ರೆಯ ವೈಧ್ಯರು ಹೆಡ್‍ಕ್ವಾಟರ್ಸನಲ್ಲಿ ಮನೆ ಮಾಡಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬಂದು ಜನರಿಗೆ ಸೇವೆ ನೀಡಬೇಕು ಇಲ್ಲಾ ಅಂದರೆ ಸಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯ ಮೂರ್ತಿ ಬಿ.ಎಸ್.ಪಾಟೀಲ(ಪಡೇಕನೂರ) ಅವರು ವೈಧ್ಯ ಸಿಬ್ಬಂದಿಗಳಿಗೆ ಕಡಕ್ ಮಾರ್ನಿಂಗ್ ನೀಡಿದರು.
ಶನಿವಾರರಂದು ಕೊಣ್ಣೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೆಟ್ಟಿ ನೀಡಿದ ಲೋಕಾಯುಕ್ತ ನ್ಯಾಯ ಮೂರ್ತಿ ಬಿ.ಎಸ್.ಪಾಟೀಲ ಅವರು ಆಸ್ಪತ್ರೆಗಳಲ್ಲಿಯ ವೈಧ್ಯ ಸಿಬ್ಬಂದಿಗಳ ಸಲ್ಲಿಸಿದ ಸೇವಾ ಕಡತ್‍ಗಳನ್ನು ಪರಿಶೀಲನೆ ನಡೆಸಿದರು, ಕೊಣ್ಣೂರ ಗ್ರಾಮ ದೊಡ್ಡ ಗ್ರಾಮವಾಗಿದೆ ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ವೈಧ್ಯರು ಬರಲ್ಲಾ, ಸಿಬ್ಬಂದಿಗಳು ಬರಲ್ಲಾ ರಾತ್ರಿ ಹೊತ್ತು ಎಮರ್ಜೆನ್ಸಿ ಇದ್ದರೆ ತಾಳಿಕೋಟೆಗೆ ಇಲ್ಲಾ ವಿಜಪುರಕ್ಕೆ ಹೋಗಬೇಕೆಂಬ ದೂರುಗಳೇ ಸಾಕಷ್ಟು ಬರುತ್ತಿವೆ ಇಷ್ಟೇಲ್ಲಾ ವೈಧ್ಯ ಸಿಬ್ಬಂದಿಗಳು ಇದ್ದುಕೊಂಡು ಏನು ಮಾಡುತ್ತಿದ್ದೀರಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬರಲು ಆಗೋದಿಲ್ವಾ ಎಂದು ವೈಧ್ಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಅವರು ಇಲ್ಲಿ ಸೇವೆಯಲ್ಲಿರುವ ವೈಧ್ಯ ಸಿಬ್ಬಂದಿಗಳು ಎಲ್ಲರೂ ಬೇರೆ ಊರಿನಿಂದ ಬರುತ್ತಾರೆ ಸಮಯಕ್ಕೆ ಸರಿಯಾಗಿ ಬರೊದಿಲ್ಲಾ ಎಂದು ಜನ ಹೇಳುತ್ತಿದ್ದಾರೆ ಇನ್ನೂ ಮುಂದೆ ವೈಧ್ಯ ಸಿಬ್ಬಂದಿಗಳು ಯಾರೂ ಬೇರೆ ಊರಿಂದ ಬರಕೂಡದು ಹೆಡ್‍ಕ್ವಾಟರ್ಸ ಕೊಣ್ಣೂರ ಗ್ರಾಮದಲ್ಲಿಯೇ ಮನೆ ಮಾಡಿಕೊಂಡು ಇರಬೇಕು ಎಂದು ಏಚ್ಚರಿಸಿದ ಅವರು ಈಗಾಗಲೇ ವಿವಿಧಡೆ ಡೆಂಗ್ಯೂ, ಕಾಲರಾ ಇನ್ನಿತರರೋಗಗಳು ಬರುತ್ತಿವೆ ಗ್ರಾಮದಲ್ಲಿ ಸ್ವಚ್ಚತೆ ಕಾಪಾಡಬೇಕು ವೈಧ್ಯ ಸಿಬ್ಬಂದಿಗಳು ಎಂದರೆ ಕೇವಲ ಆಸ್ಪತ್ರೆಯಲ್ಲಿ ಕುಳಿತು ಗುಳಗಿ ಕೊಡುವದಲ್ಲಾ ಊರಿನಲ್ಲಿ ಹೋಗಬೇಕು ಚರಂಡಿ ಇನ್ನಿತರ ಕಡೆಗಳಲ್ಲಿ ಕೊಳಚೆ ನೀರಾಗಲಿ ಸ್ವಚ್ಚತೆ ಇಲ್ಲದಿದ್ದರೆ ಪೋಟೋ ಸಮೇತ ಪಿಡಿಓ ಅವರಿಗೆ ಸ್ವಚ್ಚತೆ ಕೈಗೊಳ್ಳಲು ತಿಳಿಸಬೇಕು ಇದರ ವರಧಿಯನ್ನು ಪ್ರತಿ ತಿಂಗಳು ತಯಾರಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸಬೇಕೆಂದು ಸೂಚಿಸಿದ ಅವರು ವೈಧ್ಯ ಸಿಬ್ಬಂದಿಗಳು ಕಳೆದ ಎರಡ್ಮೂರು ತಿಂಗಳಿಂದ ಸೇವೆ ಸಲ್ಲಿಸಿದ್ದರ ಬಗ್ಗೆ ಡಾಟಾವನ್ನು ನಮ್ಮ ಇಲಾಖೆಗೆ ಸಲ್ಲಿಸಬೇಕೆಂದು ತಾಲೂಕಾ ಆಡಳಿತ ವೈಧ್ಯಾಧಿಕಾರಿ ಡಾ.ಸತೀಶ ತಿವಾರಿ ಅವರಿಗೆ ಸೂಚಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಇನ್ನುಮುಂದೆ ಸರಿಯಾಗಿ ಡಿವ್ಹಟಿ ಮಾಡದಿದ್ದರೆ ಕಾಯಂ ಮನೆಯಲ್ಲಿಯೇ ಕುಳಿತುಕೊಳ್ಳಬೇಕಾಗುತ್ತದೆ ಬೇರೆ ವೈಧ್ಯ ಸಿಬ್ಬಂದಿಗಳು ಇಲ್ಲಿಗೆ ಬರಲಿದ್ದಾರೆ ಇದನ್ನು ಗಮನದಲ್ಲಿಟ್ಟುಕೊಂಡು ಸೇವೆಗೆ ಬನ್ನಿ ಎಂದು ಕಡಕ್ಕಾಗಿ ವೈಧ್ಯ ಸಿಬ್ಬಂದಿಗಳಿಗೆ ಏಚ್ಚರಿಸಿದರು.
ಪ್ರಾಥಮಿಕ ಆರೋಗ್ಯ ಕೇದ್ರದ ಮೂಲಭೂತ ಸೌಕರ್ಯಗಳನ್ನು ಹಾಗೂ ಔಷಧ ಸಂಗ್ರಹಣೆಯ ಉಗ್ರಾಣ ಕೊಣೆಯನ್ನು ಪರಿಶೀಲನೆ ನಡೆಸಿದರಲ್ಲದೇ ಕೊಣ್ಣೂರ ಗ್ರಾಮದ ಮೂಲಭೂತ ಸೌಕರ್ಯಗಳಾದ ರಸ್ತೆ , ಚರಂಡಿ, ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಗ್ರಾಮಸ್ಥರಿಂದ ಬಂದ ದೂರಗಳನ್ನು ಪಡೆದು, ತಾ.ಪಂ ಇಓ ವೆಂಕಟೇಶ ವಂದಾಲ ಮತ್ತು ಪಿಡಿಓ ಶ್ರೀಮತಿಸಾವಿತ್ರಿ ಬಿರಾದರ ಅವರಿಗೆ ಸೂಕ್ತ ಕ್ರಮವಹಿಸಲು ಸೂಚಿಸಿದರು.
ಇದೇ ಸಮಯದಲ್ಲಿ ಗ್ರಾಮಸ್ಥರರು ಕೊಣ್ಣೂರ ಗ್ರಾಮದಲ್ಲಿ ಯಾವುದೇ ವೈನ್‍ಶಾಫ್‍ಗಳು ಇಲ್ಲದಿದ್ದರೂ ಕೂಡಾ ಎಗ್ಗಿಲ್ಲದೇ ಪಾನ್ ಬೀಡಾ ಚಹಾದ ಅಂಗಡಿಗಳಲ್ಲಿ ಸರಾಯಿ ಮಾರಾಟ ಮಾಡುತ್ತಿದ್ದಾರೆ ಇದರಿಂದ ಹಿರಿಯರು ಸೇರಿ ಯುವಕರೂ ಸಹ ಇದಕ್ಕೆ ದಾಸರಾಗುತ್ತಿದ್ದಾರೆ ಇದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.
ಇದೇ ಸಮಯದಲ್ಲಿ ಉತ್ತರಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಸರಾಯಿ, ರಸ್ತೆ, ಚರಂಡಿ ಸೇರಿದಂತೆ ಎಲ್ಲ ರೀತಿಯ ಅಗತ್ಯ ಕ್ರಮದ ಬಗ್ಗೆ ಚರ್ಚಿಸಲು ನಾಳೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆದಿದ್ದೇನೆ ಇವೇಲ್ಲವೂ ಆದಷ್ಟು ಬೇಗನೇ ಬಂದ್ ಆಗಲಿವೆ ಎಂದು ತಿಳಿಸಿದರು.
ನಂತರ ಕೊಣ್ಣೂರ ಗ್ರಾಮದಿಂದ ವಡವಡಗಿ ಕ್ರಾಸ್ ರವರಿಗೆ ನೂತನವಾಗಿ ನಿರ್ಮಿಸಲಾದ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿ ಉತ್ತಮವಾಗಿ ರಸ್ತೆ ಕಾಮಗಾರಿ ಮಾಡಿದ್ದಿರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಸಾಸನೂರ ಗ್ರಾಮದ ಶ್ರೀ ಮಡಿವಾಳೇಶ್ವರ ಹೀರೆಮಠದಲ್ಲಿ ಏರ್ಪಡಿಸಲಾದ ಲಿಂ.ಶ್ರೀ.ಮ.ನಿ.ಪ್ರ.ಗುರುಸಿದ್ದರಾಜ ಯೋಗಿಂದ್ರ ಮಹಾಸ್ವಾಮಿಗಳವರ 111ನೇ ಜಯಂತ್ಯೋತ್ಸವ ಕಾರ್ಯಕ್ರಮದ ನಿಮಿತ್ಯ ಶ್ರೀಮಠಕ್ಕೆ ಬೆಟ್ಟಿ ನೀಡಿ ಶ್ರೀಗಳಿಂದ ಆಶಿರ್ವಾದ ಪಡೆದುಕೊಂಡರು.
ನಂತರ ಚಬನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಬೆಟ್ಟಿ ನೀಡಿ ಅಲ್ಲಿಯ ವ್ಯವಸ್ಥೆಯನ್ನು ಪರಿಶೀಲಿಸಿದರಲ್ಲದೇ ನಂತರ ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಪರಿಶೀಲಿಸಲು ಶಾಲಾ ಮಕ್ಕಳಿಗೆ 2ನಿಮಷಗಳ ಕಾಲ ಪ್ರಶ್ನೇಗಳನ್ನು ಕೇಳಿದರಲ್ಲದೇ ಶಿಕ್ಷಣವೆಂಬುದು ಅತ್ಯಮುಲ್ಯವಾದುದ್ದಾಗಿದೆ ಎಲ್ಲ ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಲಕ್ಷಕೊಡಿ ಎಂದು ಕಿವಿಮಾತನ್ನು ಹೇಳಿದರು.
ನಂತರ ಲೋಕಾಯುಕ್ತ ನ್ಯಾಯ ಮೂರ್ತಿ ಬಿ.ಎಸ್.ಪಾಟೀಲ ಅವರನ್ನು ಚಬನೂರ ಗ್ರಾಮದ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಅದ್ದೂರಿಯಾಗಿ ಗ್ರಾಮದೊಳಗಡೆ ಸ್ವಾಗತಿಸಿಕೊಂಡರು. ಇದೇ ಸಮಯದಲ್ಲಿ ಶ್ರೀ ಅಮೋಘಸಿದ್ದೇಶ್ವರ ದೇವಸ್ಥಾನಕ್ಕೆ ಬೆಟ್ಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಮಯದಲ್ಲಿ ಗ್ರಾಮದ ವತಿಯಿಂದ ಗ್ರಾಮಸ್ಥರರು ಲೋ.ನ್ಯಾ.ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಲೋಕಾಯುಕ್ತ ಅಧಿಕ್ಷಕ ಟಿ.ಮಲ್ಲೇಶ್, ಲೋ.ಡಿವಾಯ್‍ಎಸ್‍ಪಿ ಸುರೇಶ ರೆಡ್ಡಿ, ಇನಸ್ಪೇಕ್ಟರ್‍ಗಳಾದ ಆನಂದ ಟಕ್ಕಣ್ಣವರ, ಆನಂದ ಡೋಣಿ, ಮಾನ್ಯ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ, ಕೆಬಿಜೆಎನ್‍ಎಲ್ ಸಹಾಯಕ ಇಂಜನಿಯರ್ ವಿಶ್ವನಾಥ ಬಿರಾದಾರ, ಕಾರ್ಯನಿರ್ವಾಹಕ ಅಧಿಕಾರಿಗಳಾದ ವೆಂಕಟೇಶ ವಂದಾಲ, ತಾ.ಪಂ, ಸಹಾಯಕ ನಿರ್ದೇಶಕರಾದ (ಗ್ರಾಉ) ಸುಜಾತಾ ಯಡ್ರಾಮಿ, ಪಿಡಿಓ ಶ್ರೀಮತಿ ಸಾವಿತ್ರಿ ಬಿರಾದಾರ, ಶ್ರೀಮತಿ ರಾಜೇಶ್ವರಿ ಬಿರಾದಾರ, ಕೊಣ್ಣೂರ ಆಸ್ಪತ್ರೆಯ ವೈಧ್ಯರಾದ ಡಾ.ಶ್ರೀಶೈಲ ಹುಕ್ಕೇರಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.