ಮನಸ್ಸುಗಳ ವಾಸ್ತು ಸರಿಯಿದ್ದರೇ ಕೋಣೆಗಳಿಗೆ ಯಾವ ವಾಸ್ತುಗಳ ಅಗತ್ಯವಿಲ್ಲ
ಚಿತ್ತಾಪುರ:ಆ.11:ಮನುಷ್ಯನಲ್ಲಿನ ಮನಸ್ಸುಗಳ ವಾಸ್ತು ಸರಿಯಾಗಿದ್ದು ಶುದ್ದಿಯಿಂದ ಇದ್ದರೇ ಮಾತ್ರ ಕೋಣೆಗಳು, ಕಟ್ಟಡಗಳಿಗೆ ಯಾವುದೇ ವಾಸ್ತುಗಳ ಅಗತ್ಯವಿಲ್ಲ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ನುಡಿದರು.
ಪಟ್ಟಣದ ಶಿವಶಂಕರ ಮಠದ ಅಕ್ಕಮಹಾದೇವಿ ಮಂದಿರಲದಲ್ಲಿ ನಿರ್ಮಾಣಗೊಂಡ ನೂತನ ಕೋಣೆಗಳಿಗೆ ಶನಿವಾರ ಉದ್ಘಾಟಿಸಿ, ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮನುಷ್ಯನಲ್ಲಿ ಉತ್ತಮ ಸಂಸ್ಕಾರ, ಮನಸ್ಸು ಶುದ್ಧಿಯಿದ್ದಾಗ ಮನೆಗಳು, ಕಟ್ಟಡಗಳು, ಕೋಣೆಗಳು ಸಮೃದ್ಧವಾಗಿ ಇರುತ್ತವೆ ಎಂದರು.
ಪ್ರತಿಯೊಬ್ಬರು ಸಮೃದ್ಧಿಯ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು. ವೀರಶೈವರು ಸಮಾಜ ಮುಖಿಯಾಗಿ ಕೆಲಸಗಳು ಮಾಡಬೇಕು. ತಾಲೂಕಿನಲ್ಲಿ ನೂತನ ಹೈಟೆಕ್ ಕಲ್ಯಾಣ ಮಂಟಪ ನಿರ್ಮಾಣ ಮಾಡಬೇಕು. ಸಮಾಜದ ಏಳ್ಗೆಗೆಗಾಗಿ ತಾಲೂಕು ವೀರಶೈವ ಸಮಾಜದ ಮೇಲೆ ದೊಡ್ಡ ಜವಾಬ್ದಾರಿ ಇದೆ. ಸಮಾಜಕ್ಕಾಗಿ ಅಲ್ಪ ಸಮಯ ಪ್ರತಿಯೊಬ್ಬರು ಮೀಸಲಿಟ್ಟು ಸಮಾಜ ಇನ್ನೂ ಹೆಚ್ಚು ಉನ್ನತ ಸ್ಥಾನಕ್ಕೆ ತಲುಪುವಂತೆ ಶ್ರಮಿಸಬೇಕೆಂದು ಹೇಳದರು.
ಹಲಕರ್ಟಿಯ ಶ್ರೀ ರಾಜಶೇಖರ್ ಶಿವಾಚಾರ್ಯರು. ಅಕ್ಕನ ಬಳಗದ ಅಧ್ಯಕ್ಷೆ ವೆಂಕಟಮ್ಮ ಪಾಲಪ್ ಮಾತನಾಡಿದರು.
ಮಂಜುನಾಥ್ ಶಾಸ್ತ್ರೀ, ಕರಬಸಯ್ಯ ಶಾಸ್ತ್ರೀ ಮಂತ್ರ ಪಠಣ ಮಾಡಿದರು.
ಬೆನಕನಳ್ಳಿ ಶ್ರೀ ಕೇದಾರಲಿಂಗಯ್ಯ ಶಿವಾಚಾರ್ಯರು, ಪ್ರಮುಖರಾದ ಬಸವರಾಜ ಹೂಗಾರ, ಆನಂದ ಪಾಟೀಲ್ ನರಬೋಳಿ, ಬಸವರಾಜ ಸಂಕನೂರ, ಬಸವರಾಜ ಪಾಟೀಲ್ ಬಾಗೋಡಿ, ರವೀಂದ್ರರೆಡ್ಡಿ ಅನಪುರ, ಅಂಬಾದಾಸ ತುರೆ, ಮಂಜುನಾಥ ಪೆÇೀಲಿಸ್ ಪಾಟೀಲ್, ಸೋಮಶೇಖರ ಅಜಲಾಪುರ, ಸರಸ್ವತಿ ರೇಶ್ಮಿ, ಉಮಾದೇವಿ ಕೊಲ್ಲೂರ, ಸಂಗೀತಾ ಕೊಲ್ಲೂರ, ನಿರ್ಮಲಾ ಭಂಗಿ, ಮಂಜುಳಾ ಹೂಗಾರ, ಹೀರಾಬಾಯಿ ಹತ್ತಿ, ಲಕ್ಷ್ಮೀಬಾಯಿ ಹತ್ತಿ, ರಾಜೇಶ್ವರಿ ಗುಂಡಗುರ್ತಿ, ಶರಣಮ್ಮ ಪಾಟೀಲ್, ಅನುಸೂಯ ಹೂಗಾರ, ಮಹಾದೇವಿ, ಉಮಾದೇವಿ ಧರಪುರ, ಪದ್ಮಾವತಿ ಪೆÇೀತರೆಡ್ಡಿ, ಈಶ್ವರಮ್ಮ ಹಡಪದ, ಅಕ್ಕಮ್ಮ ದೇಸಾಯಿ, ಮಂಜುಳಾ ಮಾರಡಗಿ, ಬಸಮ್ಮ ದಿಗ್ಗಾಂವ, ವಿಜಯಲಕ್ಷ್ಮೀ ಸಾಲಿಮಠ ಸೇರಿದಂತೆ ಇತರರಿದ್ದರು.
ಅಂಬರೇಶ ಸುಲೇಗಾಂವ ನಿರೂಪಣೆ ಮಾಡಿದರು. ಶಿವಲೀಲಾ ಮಠಪತಿ ಸ್ವಾಗತಿಸಿದರು. ಲಕ್ಷ್ಮೀ ಮಟ್ಟಿ ವಂದಿಸಿದರು.