ನಾಗರ ಪಂಚಮಿ ಹಬ್ಬ, ಜನಮನ ಸೆಳೆದ ಬಂಡಿ ಎಳೆಯುವ ಸ್ಪರ್ಧೆ
ಚಿತ್ತಾಪುರ:ಆ.11:ಪಟ್ಟಣದ ಬಾಹರಪೇಟ್‍ನಲ್ಲಿ ನಾಗರ ಪಂಚಮಿ ನಿಮಿತ್ತ ಬಂಡಿ ಎಳೆಯುವ ಸ್ಪರ್ಧೇಯಲ್ಲಿ ಯುವಕರು ಒಬ್ಬೊಬ್ಬರು ಪ್ರತ್ಯೇಕವಾಗಿ ಬಂಡಿ ಎಳೆಯುವ ಮೂಲಕ ಸಾರ್ವಜನಿಕರಿಗೆ ಜನಮನ ಸೆಳೆದರು.
ಶುಕ್ರವಾರ ಸಂಜೆ ಬಾಹರಪೇಟ್‍ನ ಹನುಮಾನ ದೇವಸ್ಥಾನದಿಂದ ವಿಠಲ ಮಂದಿರ ಹತ್ತಿರವಿರುವ ಹನುಮಾನ ದೇವಸ್ಥಾನದವರೆಗೆ ಸುಮಾರು 2 ಕೀಮಿ ರಸ್ತೆವರೆಗೆ ಒಬ್ಬರೇ ಬಂಡಿ ಎಳೆಯುವ ಜಿದ್ದಾಜಿದ್ದಿನ ಸ್ಪರ್ಧೇಯಲ್ಲಿ ಬಂಡಿ ಎಳೆದು ಗೆದ್ದು ಬೀಗಿ ಬಹುಮಾನ ಪಡೆದು ಸಂಭ್ರಮಿಸಿದರು.
ದೇಶಿಯ ಆಟವಾಗಿರುವ ಬಂಡಿಯನ್ನು ಮರೆಪ್ಪ, ಮಂಜುನಾಥ, ಸಾಗರ ಎಂಬುವರು ಒಬ್ಬೊಬ್ಬರು ಪ್ರತ್ಯೇಕವಾಗಿ ಬಂಡಿ ಎಳೆದು ಜನರಿಗೆ ಮನರಂಸಜಿಸಿದರು. ಮೂವರು ಪ್ರಥಮ ಸ್ಥಾನ ಗಳಿಸಿದರು. ಯುವಕರ ಆಟ ಯುವಕರಲ್ಲಿ ಹರ್ಷ ಉಂಟು ಮಾಡಿತ್ತು. ಯುವಕರು, ಮಕ್ಕಳು ಈ ಬಾರಿ ಸ್ಪರ್ಧೆಗಳು ಹೆಚ್ಚಾಗಿ ಭಾಗವಹಿಸುವುದರಿಂದ ನಾಗರ ಪಂಚಮಿ ಹಬ್ಬಕ್ಕೆ ಮೆರಗು ಬಂದಿತ್ತು.
ನಿಂಬೆ ಹಣ್ಣು, ತೆಂಗಿನ ಕಾಯಿ ಎಸೆತ, ಕಣ್ಣಿಗೆ ಬಟ್ಟೆ ಕಟ್ಟುವ ಆಟ, ಗುಂಡು ಕಲ್ಲು ಎತ್ತುವ ಆಟ, ಮಹಿಳೆಯರು ಮನೆಯಲ್ಲಿ ಕಟ್ಟಿಗೆ, ಮರಗಳಿಗೆ ಜೋಕಾಲಿ ಕಟ್ಟಿ ಆಡಿ ಸಂಭ್ರಮಿಸಿದರೆ, ಯುವಕರು ಹೊರಗಡೆ ಮರಗಳಿಗೆ ಜೋಕಾಲಿ ಕಟ್ಟಿ ಆಡಿ ಸಂಭ್ರಮಿಸಿದರು. ಅದರಲ್ಲೂ ಹಣದ ಜಿದ್ದು ಕಟ್ಟಿ ಸ್ಪರ್ಧೆಗಳು ಏರ್ಪಟಿದ್ದವು.