ಆಲ್‍ಫಾರುಕ್ ಉರ್ದು ಶಾಲಾ ಮಕ್ಕಳ ಕ್ರೀಡಾ ಸಾಧನೆ
ಆಳಂದ:ಆ.11: ಪಟ್ಟಣದ ಆಲ್‍ಫಾರುಕ್ ಉರ್ದು ಹಿರಿಯ ಪ್ರಾಮಿಕ ಶಾಲಾ ಮಕ್ಕಳು ಆಳಂದ ಹೋಬಳಿ ಮಟ್ಟದ ಕ್ರೀಡಾ ಕೂಟದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾಗಿ ತಾಲೂಕು ಕ್ರೀಡಾ ಕೂಟಕ್ಕೆ ಆಯ್ಕೆಯಾಗಿ ಸಂಭ್ರಮಿಸಿದರು.
ಪ್ರಾಥಮಿಕ ವಿಭಾಗದ ಮಕ್ಕಳು ರಿಲೆಯಲ್ಲಿ ಪ್ರಥಮ, ವಾಲಿಬಾಲದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿ ಯಾಸ್ಮಿನ, ನಜೀರ್, ಶಾದಾಬಾ, ಫಸಲ್, ಖ್ವಾಜಾ ಅವರುಗಳು ಪ್ರಥಮ, ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿನಿಯರಾದ ಸದಪ್ ಗುಂಡು ಎಸೆತದಲ್ಲಿ ಮತ್ತು ಚಕ್ರ ಎಸೆತದಲ್ಲಿ ಅಲಿಯಾ ವಿದ್ಯಾರ್ಥಿನಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಶಾಲೆಯ ದೈಹಿಕ ಶಿಕ್ಷಣದ ಶಿಕ್ಷಕ ಮಹಿಬೂಬಸಾಬ ಮುಜಾವರ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಸಂಸ್ಥೆಯ ಅಧ್ಯಕ್ಷ ಆರೀಪ್ ಅಲಿ ಲೆಂಗಡೆ, ಕಾರ್ಯದರ್ಶಿ ಆಯೂಬಅಲಿ ಜರ್ದಿ, ಮುಖ್ಯ ಶಿಕ್ಷಕ ಬಂದೇನವಾಜ್ ಕೂಡಗಿ ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಹರ್ಷವ್ಯಕ್ತಪಡಿಸಿದ್ದಾರೆ.