ಮುರಿದ ಹೋದ ಟಿಬಿ ಡ್ಯಾಂ ಗೇಟ್ಹರಿದು ಹೋಗಲಿದೆ ರೈತರ ಬದುಕು
ಎನ್.ವೀರಭದ್ರಗೌಡ
ಬಳ್ಳಾರಿ:ಅ,11- ತುಂಗಭದ್ರ ಡ್ಯಾಂನ‌ ಗೇಟ್  ನೀರಿನ‌ಒತ್ತಡಕ್ಕೆ ಮುರಿದು ನದಿ‌ಪಾಲಾಗಿರುವುದು  ಮುಂದಿನ‌ ದಿನಗಳಲ್ಲಿ‌ ಮಳೆಯಾಗದಿದ್ದರೆ . ಈ ವರ್ಷ ಈ ಜಲಾಶಯದ ನೀರಿನಿಂದ ಕೃಷಿ ಮಾಡುವ ರೈತರ ಬದುಕಿಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.
ಕರ್ನಾಟಕದ ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಅಲ್ಲದೆ  ಆಂದ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ  ರೈತರ‌12 ಲಕ್ಷ ಎಕರೆಗೂ ಹೆಚ್ಚು ಕೃಷಿ ಪ್ರದೇಶಕ್ಕೆ ನೀರು ಉಣಿಸುವ, ಸಾವಿರಾರು ಹಳ್ಳಿ‌, ಪಟ್ಟಣ ಮತ್ತು ನಗರಗಳ ಜನತೆಗೆ ಕುಡಿಯುವ ನೀರು ಹಾಗು ಅನೇಕ ಕೈಗಾರಿಕೆಗಳಿಗೂ  ಬಳಕೆಯ ನೀರಿನ ಮೂಲವಾಗಿದೆ ತುಂಗಭದ್ರ ಜಲಾಶಯ.
ಕಳೆದ ವರ್ಷ ಬರಗಲಾದ ಹಿನ್ನಲೆಯಲ್ಲಿ ಡ್ಯಾಂ ತುಂಬಿ ನದಿಗೆ ನೀರು ಹರಿಯಲಿಲ್ಲ. ಆದರೆ ಈ ವರ್ಷಮುಂಗಾರಿನಲ್ಲಿ ಉತ್ತಮ‌ ಮಳೆಯಾಗಿ  ಕಳೆದ ವರ್ಷಕ್ಕಿಂತ ಮೊದಲೇ ಡ್ಯಾಂ ಭರ್ತಿಯಾಗಿ  ಕಾಲುಚೆಗಳಿಗೆ ನೀರು ಬಿಟ್ಟು ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ.
ಕಳೆದ ವರ್ಷ ಬರಗಾಲದಿಂದ ಒಂದೇ ಬೆಳೆ ಪಡೆದಿದ್ದ ರೈತರು. ಈ ವರ್ಷ ಬೇಗನೇ ಕಾಲುವೆಗಳಿಗೆ ನೀರು ದೊರೆತಿದ್ದು. ಡ್ಯಾಂ ಭರ್ತಿಯಾಗಿ ಇನ್ನು ಒಳ ಹರಿವು ಇದ್ದುದರಿಂದ ಎರಡನೇ ಬೆಳೆಯನ್ನೂ ಬೆಳೆಯ ಬಲ್ಲ ದೆಂಬ ಆಶಾ ಭಾವನೆ ಹೊಂದಿದ್ದರು.
ಆದರೆ ನಿನ್ನೆ ರಾತ್ರಿ ಡ್ಯಾಂನ ಗೇಟ್ ಮುರಿದಿರುವುದು ರೈತರ ಆಸೆಗೆ ತಣ್ಣೀರೆರಚಿದೆ. ಅಷ್ಟೇ ಅಲ್ಲದೆ ಈ ಗ ನಾಟಿ‌ ಮಾಡಿರುವ ಬೆಲಕೆಯಾದರೂ ಸಂಪೂರ್ಣ ಬರಲು ಸಮಸ್ಯೆಯಾಗುವದೇ ಎಂಬ ಚಿಂತೆ ಮಾಡಬೇಕಿದೆ.
ಯಾಕೆಂದರೆ ಗೇಟ್ ಮುರಿದಿರುವುದರಿಂದ  ಅದನ್ನು ದುರಸ್ಥಿ ಮಾಡಲು ಈಗ ಡ್ಯಾಂನಲ್ಲಿ ಸಂಗ್ರಹವಾಗಿದ್ದ 105 ಟಿಎಂಸಿ ನೀರಿನಲ್ಲಿ 60 ಟಿಎಂಸಿ ಹೋಗಲಿದೆಯಂತೆ.  ಉಳಿಯುವುದು 40 ರಿಂದ 45 ಟಿಎಂಸಿ ಮಾತ್ರ.  ಜಲಾಶಯದ ಜಲಾನನ ಪ್ರದೇಶದಲ್ಲಿ ಈಗ ಮಳೆ ನಿಂತಿದೆ. ಒಳ ಹರಿವೂ ಕಡಿಮೆಯಾಗಿದೆ. ಇನ್ನು ಗೇಟ್ ದುರಸ್ತಿಯಾಗಲು ಎಷ್ಟು ದಿನಗಳು ಬೇಕು. ನಂತರವೇ ನೀರಿನ ಸಂಗ್ರಹ ಮಾಡಬೇಕಿದೆ. ಈ ಎಲ್ಲ ಸಮಸ್ಯೆಗಳಿಂದ  ತುಂಗಭದ್ರ ಭಾಗದ ರೈತ ಮತ್ತೆ ಸಂಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತಾ ಎಂಬ ಪ್ರಶ್ನೆ ಉದ್ಭವಾಗಿದೆ.
ಗೇಟ್ ದುರಸ್ಥಿ ನಂತರ ಡ್ಯಾಂನ ಜಲಾನಯನ‌ ಪ್ರದೇಶದಲ್ಲಿ ಹಿಂಗಾರಿ ಮಳೆಯಾದರೆ ಮಾತ್ರ ರೈತರ ಸಂಕಷ್ಟಕ್ಕೆ ಪರಿಹಾರ ದೊರೆಯಲಿದೆ.
ಬೆಂಕಿ‌ ಇಟ್ಟಂಗಾಗಿದೆ:
ಕಳೆದ ವರ್ಷ ಬರಗಾಲ ಅಂತ ಒಂದೇ ಬೆಳೆಗೆ ನೀರಾಯ್ತು. ಈ ವರ್ಷನಾದರೂ ಮಳೆ ಬಂದಿದೆ, ಡ್ಯಾಂ‌ತುಂಬಿದೆ ಎರೆಡನೆ ಬೆಳೆ ಬರುತ್ತೆ ಎಂದು‌ಕೊಂಡಿತ್ತು. ಡ್ಯಾಂನ ಗೇಟ್ ಮುರಿದು ಬಿದ್ದು. ನಮ್ಮ‌ ರೈತರರ ಬದುಕಿಗೆ ಬೆಂಕಿ‌ ಇಟ್ಟಂಗಾಗಿದೆ.
ದೊಡ್ಡಬಸಪ್ಪ, ಮೋಕಾ.
ದೇವರ ದಯೆ ಆಗಬೇಕು:
ಡ್ಯಾಂನ ಗೇಟ್ ಮುರಿದು ಹೋಗಿದೆ. ನೀರಿನ ಸಮಸ್ಯೆ ಬೆಳೆಗೆ ಆಗಬಹುದು. ಒಂದು ಕಡೆ ಮೆಣಸಿನಕಾಯಿಗೆ ಬೆಲೆ ಇಲ್ಲದೆ ಸಂಕಷ್ಟ. ಈ ಕಡೆ ಈ ವರ್ಷ ಮತ್ತೆ ನೀರಿನ‌ ಸಮಸ್ಯೆ ಆದ್ರೆ ರೈತರ ಬದುಕಗೆ ದೇವರ ದಯೆಬೇಕು.
ಮಾರೆಪ್ಪ, ಕೊಳಗಲ್ಲು.