ವೈದ್ಯಕೀಯ ಶಾಸ್ತ್ರದಲ್ಲಿ ಲೇಸರ್ ಮಹತ್ವದ ಉಪನ್ಯಾಸ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಅ,11- ನಗರದ ಖಾಸಗಿ ಹೊಟೇಲನಲ್ಲಿ ಭಾರತೀಯ ದಂತ ವೈದ್ಯಕೀಯ ಸಂಘದಿಂದ 7ನೇ  ದಂತ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಇಂದು  ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರಿನ ಆಕ್ಸ್ಫರ್ಡ್ ಡೆಂಟಲ್ ಕಾಲೇಜಿನ  ಡಾಕ್ಟರ ಮಹಾಂತೇಶ್  ಅವರು “ದಂತ ವೈದ್ಯಕೀಯ ಶಾಸ್ತ್ರದಲ್ಲಿ ಲೇಸರ್ ಮಹತ್ವ”ಎಂಬ ವಿಷಯ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ, ಡಾ.ಶೇಷಗಿರಿರಾವ್,  ಡಾಕ್ಟರ್ ದಿವಾಕರ್  ಎಸ್,  ಡಾಕ್ಟರ್ ಉಮಾಶಂಕರ್,  ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ  ಅಧ್ಯಕ್ಷ ಡಾ. ಡಿ ಮಧುಸೂದನ್ ರೆಡ್ಡಿ,  ಕಾರ್ಯದರ್ಶಿ ಡಾಕ್ಟರ್ ಶ್ರೀಧರ್ ರೆಡ್ಡಿ ಹಾಗೂ  ರಾಜ್ಯ ಪ್ರತಿನಿಧಿ  ಡಾಕ್ಟರ್ ಮಂಜುನಾಥ್ ಆರ್.ಕೆ  ಹಾಗು ಸಂಘದ ಸದಸ್ಯರುಗಳು ಪಾಲ್ಗೊಂಡಿದ್ದರು