ಮೂಲಭೂತ ಸೌಕರ್ಯ ಒದಗಿಸಲು 24X7 ರಾಜಶ್ರೀ ಸಿಮೆಂಟ್ ಸಿದ್ದ: ಕೆವಿವಿವೈಎಸ್ ನಾರಾಯಣ
ಸೇಡಂ, ಅ,11: ಕಂಪನಿ ಪ್ರಾರಂಭವಾಗಿದ್ದನಿಂದ ಇಲ್ಲಿವರೆಗೆ ಬಡ ಜನರಿಗೆ ಉಚಿತ ಆರೋಗ್ಯ ತಪಾಸಣೆ, ಉಚಿತ ಪಶು ಚಿ ತಪಾಸಣೆ,ಉಚಿತ ಕಣ್ಣಿನ ತಪಾಸಣೆ ಕನ್ನಡಕ ವಿತರಣೆ ಕಾರ್ಯಕ್ರಮ ಮತ್ತು ಸಾರ್ವಜನಿಕ ಶೌಚಾಲಯ, ಸರಕಾರಿ ಪ್ರೌಢ ಶಾಲೆಗಳಲ್ಲಿ ಶುದ್ಧ ನೀರಿನ ಘಟಕ, ಬಡ ಸಣ್ಣ ರೈತರಿಗೆ ತಾಡಪತ್ರಿ ವಿತರಣೆ, ಪರಿಸರ ಸಂರಕ್ಷಣೆ ಸಸಿಗಳ ವಿತರಣೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ಮಾಡುವ ಮೂಲಕ ಗ್ರಾಮಗಳ ಅಭಿವೃದ್ಧಿ ಮತ್ತು ಸಾಮಾಜಿಕ ಏಳಿಗೆಗಾಗಿ ಮೂಲಭೂತ ಸೌಕರ್ಯ ಒದಗಿಸಲು 24/7 ರಾಜಶ್ರೀ ಸಿಮೆಂಟ್ ಸಿದ್ದವಿದೆ ಎಂದು ಅಲ್ಟ್ರಾಟೆಕ್ ಸಿಮೆಂಟ್ ಕಂಪನಿ ಯುನಿಟ್ ರಾಜ ಶ್ರೀ ಸಿಮೆಂಟ್ ಕಂಪನಿಯ ಉಪಾಧ್ಯಕ್ಷರಾದ ಕೆವಿವಿವೈಎಸ್ ನಾರಾಯಣ ಇಲ್ಲಿ ಹೇಳಿದರು.
ರಾಜಶ್ರೀ ಸಿಮೆಂಟ್ ಕಂಪನಿಯ ವ್ಯಾಪ್ತಿಯಲ್ಲಿ ಬರುವ ದಿಗ್ಗವಾ ಗ್ರಾಮದ ಸರಕಾರಿ ಉರ್ದು ( ಎಚ್ ಪಿ.ಎಸ್) ಶಾಲೆಯ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳುವ ಬ್ರ್ಯಾಂಚ್ ವಿತರಿಸಿ ಅವರು ಮಾತನಾಡಿದರು. ಈ ವೇಳೆಯಲ್ಲಿ ರವಿಕುಮಾರ್, ಪಾಂಡುರಂಗ,ರಾವ್, ಚೇತನ್ ವಾಘಮೋರೆ,ಅಶ್ವಿನಿ,ಶರಣಪ್ಪ,ಕಾಶಿಬಾಯಿ,ಸೋಮಶೇಖರ್ ದೇಗಲ್ಮಡಿ, ಶಾಲೆಯ ಮುಖ್ಯ ಗುರುಗಳಾದ ಆಯಿಷಾ ಹರಳಯ್ಯ ಗ್ರಾಪಂ ಅಧ್ಯಕ್ಷರು ಹಾಗೂ ಎಸ್ ಡಿಎಂಸಿ ಅಧ್ಯಕ್ಷರು ಶಾಲಾ ಮಕ್ಕಳು ಇದ್ದರು.