ಗುಂಡಿ ಮುಚ್ಚಿ ಪ್ರಾಣಾಪಾಯದಿಂದ ದೂರ ಮಾಡಿ ದಲಿತ ಸೇನೆ ಆಗ್ರಹ
ಸೇಡಂ, ಅ,11: ತಾಲೂಕಿನ ಮಳಖೇಡ ಗ್ರಾಮದಲ್ಲಿರುವ ಅಂಬೇಡ್ಕರ್ ಭವನ ಎದುರುಗಡೆಯ ರಸ್ತೆಯ ಮಧ್ಯದಲ್ಲಿ ದೊಡ್ಡ ಗುಂಡಿ ಬಿದ್ದಿರುವ ಕಾರಣ ಇಂದು ತರಕಾರಿ ತುಂಬಿರುವ ಆಟೋ ತೆಗ್ಗಿನಲ್ಲಿ ಬಿದ್ದು ಪಲ್ಟಿಯಾಗಿದ್ದು ಯಾವುದೇ ಅನಾಹುತವಾಗಿಲ್ಲ ಆದರಿಂದ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರು ಅಭಿವೃದ್ಧಿ ತಕ್ಷಣ ಗುಂಡಿ ಮುಚ್ಚಿ ಪ್ರಾಣಾಪಾಯದಿಂದ ದೂರ ಮಾಡಿ ಎಂದು ದಲಿತ ಸೇನೆ ವಲಯ ಅಧ್ಯಕ್ಷ ಭಗವಾನ್ ಬೋಚಿನ್ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.