ರೋಟರಿ ಸಂಸ್ಥೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಆದ್ಯತೆ
ಕೋಲಾg,ಆ,೧೧- ರೋಟರಿ ಸಂಸ್ಥೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದೆ. ಪ್ರತಿ ವಷವೂ ರೋಟರಿ ಸಂಸ್ತೆವತಿಯಿಂದ ಹಲವು ಕನ್ನಡ ಸರ್ಕಾರಿ ಶಾಲೆಗಳಿಗೆ ಅನುದಾನಿತ ಶಾಲೆಗಳಿಗೆ ಶಿಕ್ಷಣಕ್ಕೆ ಅನುಕೂಲವಾಗುವಂತೆ ಹಲವು ಪ್ರಾಜೆಕ್ಟ್ ಗಳನ್ನು ಹಮ್ಮಿಕೊಂಡು ಬರುತ್ತಿz., ಈ ಸತ್ಕಾರ್ಯಕ್ಕೆ ಸಹಕರಿಸಿದ ಎಲ್ಲಾ ದಾನಿಗಳಿಗೆ ಧನ್ಯವಾದಗಳು ಅರ್ಪಿಸುತ್ತೇವೆ. ಇನ್ನು ಮುಂದಿನ ದಿನಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹಾಗೂ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ರೋಟರಿ ಜಿಲ್ಲೆ ೩೧೯೧ನ ಜಿಲ್ಲಾ ಕಾರ್ಯದರ್ಶಿ ರೋ. ಎಸ್.ವಿ .ಸುಧಾಕರ್ ತಿಳಸಿದರು.
ಶುಕ್ರವಾರ ಕೋಲಾರ ನಗರದ ಎನ್.ಆರ್ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ರೋಟರಿ ಕ್ಲಬ್ ಕೋಲಾರ ವತಿಯಿಂದ ನೋಟ್ ಪುಸ್ತಕಗಳು ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಅವರು ಮತಾನಾಡಿದರು.
ಕೋಲಾರ ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷರಾದ ರೋ ಬಿ. ಎಸ್ .ಗೋವಿಂದರಾಜು ಅವರು ಮಾತನಾಡುತ್ತ ರೋಟರಿ ಸಂಸ್ಥೆ ಯು ಆರೋಗ್ಯಕ್ಕೂ ಹೆಚ್ಚು ಒತ್ತನ್ನು ನೀಡಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡು ಬರುತ್ತಿದೆ , ಇದೆ ತಿಂಗಳು ೧೪ ನೇ ತಾರೀಖು ವಿಶೇಷ ಚೇತನ ಮಕ್ಕಳಿಗೆ ಕೋಲಾರ ನಗರದಲ್ಲಿ ಫಿಸಿಯೋ ಥೆರಪಿ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷರಾದ ರೋ.ವಿ.ಪಿ. ಸೋಮಶೇಖರ್ ಮಾತನಾಡುತ್ತ ಪೋಲಿಯೋ ನಿರ್ಮೂಲನೆಗಾಗಿ ಕಳೆದ ಹಲವು ವಷಗಳಿಂದ ನಿರಾಂತರವಾಗಿ ಕೆಲಸ ಮಾಡುತ್ತಾ ಒಂದೊಂದು ಪೋಲಿಯೋ ಹನಿ ಲಸಿಕೆಗೆ ತಗುಲುವ ವೆಚ್ಚವನ್ನು ಭರಿಸುತ್ತಿದೆ. ಸಾಮಾನ್ಯ ಶಾಲೆಯನ್ನು ಹ್ಯಾಪಿ ಸ್ಕೂಲ್ ಆಗಿ ಪರಿವರ್ತಿಸಿ ಶಿಕ್ಷಕರುಗಳಿಗೆ ತರಬೇತಿಯನ್ನು ನೀಡುವುದರ ಮೂಲಕ ಅಗತ್ಯ ಸಲಕರಣೆಗಳನ್ನು ಪೂರೈಸುತ್ತಿದೆ ಎಂದರು ,
ಕಾರ್ಯಕ್ರಮದಲ್ಲಿ ಎನ್ ಆರ್ ಶಾಲೆಯ ಮುಖ್ಯ ಶಿಕ್ಷಕರು ಹಾಗು ಸಿಬ್ಬಂದಿ ವರ್ಗ ಮಕ್ಕಳು ಭಾಗವಹಿಸಿದ್ದರು.