ಭಕ್ತಾದಿಗಳ ಇಷ್ಟಾರ್ಥ ಸಿದ್ದಿಗೆ ಸಾಕ್ಷಿಯಾದ ಚೌಡೇಶ್ವರಿ ದೇವಿ
ಬಂಗಾರಪೇಟೆ.ಆ.೧೧- ನಮ್ಮ ಸನಾತ ಹಿಂದೂ ಧರ್ಮದಲ್ಲಿ ಹಲವಾರು ಸಂಪ್ರದಾಯ, ಪದ್ಧತಿ ಮತ್ತು ರೂಢಿ ಆಚರಣೆಗಳು ನಮಗೆ ದೈವತ್ವದತ್ತ ಕೊಂಡೊಯ್ಯುತ್ತದೆ. ಅಂತಾ ಪವಿತ್ರ ಆಚರಣೆಗಳಲ್ಲಿ ಶ್ರವನಮಾಸದ ನಾಗರಪಂಚಮಿ ಬಹಳ ಮಹತ್ವದ್ದು ,ಇಂತಹ ಪವಿತ್ರ ಶುಕ್ರವಾರದ ದಿನದಂದು ತಾಲೂಕಿನ ಅಬ್ಬಿಗೀರಿ ಹೊಸಹಳ್ಳಿ ಗ್ರಾದದಲ್ಲಿ ಶಕ್ತಿ ದೇವಿ ಚೌಡೇಶ್ವರಿ ದೇವಸ್ಥಾನದ ವಿಮಾನ ಗೋಪುರ ಕಳಶ ಪ್ರತಿಷ್ಠಾಪನೆ ಮತ್ತು ಚಂಡಿಹೋಮ ನೆರವೇರಿಸಲಾಯಿತು.
ಇಷ್ಟಾರ್ಥಗಳ ಸಿದ್ದಿಗೆ ಚೌಡೇಶ್ವರಿ ದೇವಿ ಸಾಕ್ಷಿ :ಬಂಗಾರಪೇಟೆ ತಾಲೂಕಿನ ಹುಲಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬಗೀರಿ ಹೊಸಹಳ್ಳಿ ಗ್ರಾಮದಲ್ಲಿ ತಾಲೂಕಿನ ಗ್ರಾಮದಲ್ಲಿ ೪೦೦ ವರ್ಷಗಳ ಹಿಂದಿನ ಐತಿಹಾಸಿಕ ಪ್ರಸಿದ್ಧವಾದ ಚೌಡೇಶ್ವರಿ ದೇವಾಲಯ ನಿರ್ಮಾಣವಾಗಿತ್ತು. ಅಂತಹ ದೇವಾಲಯವು ದೈವಿಕ ಶಕ್ತಿಯನ್ನು ಹೊಂದಿದ್ದ ಕಾರಣ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳನ್ನು ದೇವರಿಗೆ ಒಪ್ಪಿಸುತ್ತಿದ್ದರು ತದನಂತರದ ದಿನಗಳಲ್ಲಿ ದೇವಿ ಸಂಕಲ್ಪದಿಂದ ಭಕ್ತಾದಿಗಳ ಇಷ್ಟಾರ್ಥಗಳು ಇಡೇರುತ್ತಿದ್ದವು ಆದಕಾರಣ ಇಂದು ಬೃಹದಾಕಾರವಾಗಿ ದೇವಾಲಯವು ಬೆಳೆದು ನಿಂತಿದೆ.
ದಕ್ಷಿಣಾಭಿಮುಖವಾಗಿ ನಿರ್ಮಿಸಿರುವ ದೇವಾಲಯದ ಮುಂಭಾಗದಲ್ಲಿ ಗರುಡಗಂಭವಿದ್ದು ಅದರ ಕೆಳಭಾದಲ್ಲಿ ಶಕ್ತಿ ದೇವಿಯ ಆಯುಧವಾದ ತ್ರಿಶೂಲ ನಿರ್ಮಿಸಲಾಗಿದೆ, ಇದರ ಮುಂಭಾಗದಲ್ಲಿ ನಿಂತು ಚೌಡೇಶ್ವರಿ ದೇವಿಯ ದರ್ಶನ ಭಾಗ್ಯವನ್ನು ಪಡೆಯುವುದರ ಮೂಲಕ ತಮ್ಮ ಕಷ್ಟ ಕಾರ್ಪಣ್ಯಗಳನ್ನು ದೇವರಿಗೆ ಸಮರ್ಪಿಸಿದರೆ ??? ಶೀಘ್ರದಲ್ಲಿ ನಿವಾರಣೆಯಾಗುತ್ತದೆ ಎಂಬ ಪ್ರತೀತಿ ಇದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕ ಚೌಡಪ್ಪ ಮಾತನಾಡಿ, ಚೌಡೇಶ್ವರಿ ದೇವಿ ಅನುಗ್ರಹದಿಂದ ನನ್ನ ಜನ್ಮವಾಗಿತ್ತು. ತದನಂತರ ತಾಯಿಯ ಅನುಗ್ರಹದಿಂದ ವಿಧ್ಯಾಭ್ಯಾಸ ಪಡೆದು ಉದ್ಯಮಿಯಾಗಿಯಾಗಿ ಯಶಸ್ಸಿನ ಹಾದಿಯಲ್ಲಿ ಸಾಗಿದ್ದೇನೆ, ಇದರೊಟ್ಟಿಗೆ ದೇವಿಯು ಬೇಡಿ ಬಂದವರಿಗೆ ಇಷ್ಟಾರ್ಥ ಸಿದ್ಧಿ ಕಲ್ಪಿಸುವುದರಿಂದ ಬೆಂಗಳೂರು ಒಳಗೊಂಡಂತೆ ಜಿಲ್ಲೆಯ ವಿವಿಧ ಮೂಲೆಗಳಿಂದ ಭಕ್ತರು ಬರುತ್ತಾರೆ ಆದ ಕಾರಣ ದೇವಸ್ಥಾನವನ್ನು ಜಿರ್ಣೋದ್ಧಾರ ಮಾಡಲಾಗಿದೆ ಎಂದರು. ಪ್ರತಿವರ್ಷ ಶ್ರಾವಣಮಾಸದಲ್ಲಿ ವಿಶೇಷವಾಗಿ ಗ್ರಾಮಸ್ಥರೆಲ್ಲಾ ಸೇರಿಕೊಂಡು ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದೇವೆ. ಹಾಗೂ ಇಂದಿನಿಂದ ೪೫ ದಿನಗಳ ಕಾಲ ವಿಶೇಷ ಪೊಜೆ ನೆರವೇರಲಿದೆ ಎಂದರು.
ನಂತರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಿಕ್ಕ ಹೊಸಹಳ್ಳಿ ಮಂಜುನಾಥ್ ಮಾತನಾಡಿ ನೆತ್ತಿ ಬೆಲೆ, ಪಡವನಹಳ್ಳಿ ಚಿಕ್ಕ ಹೊಸಹಳ್ಳಿ ತೊರಗನ ದೊಡ್ಡಿ ಗ್ರಾಮಗಳ ಆರಾದ್ಯ ದೇವಿ ಚೌಡೇಶ್ವರಿ ದೇವಿಯಾಗಿದ್ದು ಎಲ್ಲಾರ ಸಹಕಾರದೊಂದಿಗೆ ಚಿಕ್ಕದಾಗಿದ್ದ ದೇವಾಲಯವನ್ನು ದೊಡ್ಡದಾಗಿ ನಿರ್ಮಿಸಲಾಗಿದೆ ಪ್ರತಿ ವರ್ಷ ಫೆಬ್ರವರಿ ತಿಂಗಳಿನಲ್ಲಿ ಜಾತ್ರಾ ಮಹೋತ್ಸವ ಏರ್ಪಡಿಸಲಾಗುತ್ತಿದೆ, ಈ ಸಮಯದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ , ಈ ದಿನ ಚಂಡಿಹೋಮ ,ಕಳಶ ಪ್ರತಿಷ್ಠಾಪನೆ ಮಾಡಲಾಗಿದ್ದು ಸರ್ವ ಜನಾಂಗದ ಒಲತಿಗಾಗಿ ಪ್ರಾರ್ಥನೆ ಮಾಡಲಾಗಿದೆ ಎಂದರು.