ಎಲ್ಲರಿಗೂ ಒಂದೇ ಸಮಾಜ ನಿರ್ಮಾಣವಾಗಬೇಕು:ನಟ ಚೇತನ್ ಅಹಿಂಸಾ
ಸಂಜೆವಾಣಿ ವಾರ್ತೆ
ಶ್ರೀರಂಗಪಟ್ಟಣ:ಆ.11: ನಾನು ಎಡ ಪಂಥೀಯ,ಬಲಪಂಥೀಯನಲ್ಲ. ಭಾರತೀಯ ಪಂಕ್ತಿಯಲ್ಲಿ ದೇಶ ಭಕ್ತನಾಗಿದ್ದೇನೆ ಎಂದು ಚಿತ್ರ ನಟ ಚೇತನ್ ಅಹಿಂಸಾ ಹೇಳಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪ್ರಜ್ಞಾವಂತ ವೇದಿಕೆಯ 2ನೇ ವರ್ಷದ ವಾರ್ಷಿಕ ಸಮಾರಂಭ ಸಮಾವೇಶದಲ್ಲಿ ಭಾಗವಹಿಸಿ ಅವರು ಪ್ರಧಾನ ಭಾಷಣ ಮಾಡಿದರು.
ನಮ್ಮ ದೇಶವೆಂದರೆ ಎಲ್ಲಾ ಭಾಷೆ ಗಡಿಗಳಿಗೂ ಮೀರಿದ್ದು,ಇಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಅವಶ್ಯಕತೆ ಯಿದ್ದು,ಸಮಾನ -ಸಮಾಜದ ನಿರ್ಮಾಣವಾಗಬೇಕಿದ್ದು ಇದರಲ್ಲಿ ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮೈಸೂರಿನ ಇತಿಹಾಸ ತಜ್ಞ ಪೆÇ್ರ.ನಂಜರಾಜ್ ಅರಸ್ ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ,ಮೈಸೂರಿನ ಜಿಲ್ಲಾಧಿಕಾರಿ ಮಣಿವಣ್ಣನ್ ಕಾಲಾವದಯಲ್ಲಿ ಜಸ್ಕೊ ಕಂಪನಿಯವರಿಗೆ ನೀರು ಸರಬರಾಜು ಖಾಸಗಿಕರಣವಾಗು ವುದನ್ನು ಪ್ರತಿಭಟನೆ ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿ,ಸ್ವಾರ್ಥವನ್ನು ಬದಿಗಿಟ್ಟು ಸಮೂಹದ ಒಳಿತಿಗಾಗಿ ಶ್ರಮಿಸಬೇಕೆಂದು ತಿಳಿಸಿದರು.
ಇದೇ ವೇಳೆ ಪ್ರಜ್ಞಾವಂತ ವೇದಿಕೆ ವತಿಯಿಂದ ನೀಡಲಾಗುವ ಪ್ರಜ್ಞಾವಂತ ಮತದಾರ ಪ್ರಶಸ್ತಿಯನ್ನು ಬಾಬುರಾಯನ ಕೊಪ್ಪಲು ಗ್ರಾಮದ ರೈತ ಬಿ.ಎಸ್.ರಮೇಶ್ ಹಾಗೂ ಕಡುತನಾಳು ಗ್ರಾಮದ ಸಾಮಾಜಿಕ ಕಾರ್ಯಕರ್ತ ಕೆ.ಎಸ್.ಜಯಶಂಕರ್ ಅವರಿಗೆ ನೀಡಿ ಗೌರವಿಸಲಾಯಿತು. ಜೊತೆಯಲಿ ಕಾರ್ಯಕ್ರಮದ ಆಯೋಜಕ ವಕೀಲ ಸಿ.ಎಸ್.ವೆಂಕಟೇಶ್, ಪುರಸಭಾ ಮಾಜಿ ಅಧ್ಯಕ್ಷೆ ಶೀಲಾ ನಂಜುಂಡಯ್ಯ,ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್, ಚಿಕ್ಕ ತಮ್ಮೇಗೌಡ, ಕೆ.ಶೆಟ್ಟಹಳ್ಳಿ ಅಪ್ಪಾಜಿ, ಡಿಎಸ್‍ಎಸ್ ಸಂಚಾಲಕ ರವಿಚಂದ್ರ, ರೈತ ಮುಖಂಡ ಪಾಂಡು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.