ಜಾನಪದವು ಉತ್ತಮ ಕಲೆ: ಬಿ.ಎಂ.ಅಪ್ಪಾಜಪ್ಪ ಶ್ಲಾಘನೆ
ಸಂಜೆವಾಣಿ ವಾರ್ತೆ
ಮಂಡ್ಯ: ಆ.11: ಜಾನಪದ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುವ ಕಲೆಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ ಶ್ಲಾಘಿಸಿದರು.
ನಗರದ ಗಾಂಧಿ ಭವನದಲ್ಲಿ ಶ್ರೀ ಮಲೆಮಹದೇಶ್ವರ ಜಾನಪದ, ಸುಗಮ ಸಂಗೀತ ಅಕಾಡೆಮಿ ತಂಡ(ಹೆಮ್ಮಿಗೆ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತಾಲ್ಲೂಕು ಮಟ್ಟದ ಜಾನಪದ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾನಪದ ಜೀವನ ಶೈಲಿಯನ್ನು ಕಲಿಸುತ್ತದೆ. ಜಾನಪದ ಮಂಡ್ಯದ ತವರೂರಾಗಿದೆ, ಜಾನಪದಕ್ಕೆ ಪೆÇ್ರೀತ್ಸಾಹ ಉಳಿಯುತ್ತದೆ. ಸರ್ಕಾರವು ಕೂಡ ಕಲಾವಿದರಿಗೆ ಪೆÇ್ರೀತ್ಸಾಹಿಸುವ ಕೆಲಸ ಮಾಡಬೇಕು. ಆ ಮೂಲಕ ಕಲಾವಿದರ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಬಸವೇಶ್ವರ ಆಗ್ರೋ ರೈಸ್ ಇಂಡಸ್ಟ್ರೀಸ್ ಮಾಲೀಕ ಎಸ್.ಸಿ.ಬಸವರಾಜು ಸಂಪಹಳ್ಳಿ ಮಾತನಾಡಿ, ಧಾರಾವಾಹಿಗಳು ಮನೆ ಮತ್ತು ಕುಟುಂಬದಲ್ಲಿನ ಜಗಳವನ್ನೇ ತೋರಿಸುತ್ತಿವೆ, ಇದರಿಂದ ಮನೆಗಳಲ್ಲಿ ಶಾಂತಿ ನೆಮ್ಮದಿ ಹಾಳು ಮಾಡುವ ಲಕ್ಷಣಗಳನ್ನೇ ಇದರಲ್ಲಿ ಪ್ರದರ್ಶಿಸಲಾಗುತ್ತಿದೆ. ಇಲ್ಲಿ ಎಲ್ಲ ಧಾರಾವಾಹಿಗಳು ಕೂಡ ಆಗಿಲ್ಲ, ಕೆಲವು ಮಾತ್ರ ಮನೆಹಾಳು ಮಾಡುವ ಧಾರಾವಾಹಿಗಳೇ ಹೆಚ್ಚಿರುತ್ತದೆ ಎಂದು ಅಭಿಪ್ರಾಯ ಪಟ್ಟರು.
ಗ್ರಾಮೀಣ ಭಾಗಗಳಲ್ಲಿ ಜಾನಪದ ಹುಟ್ಟಿಕೊಂಡಿದೆ ಹೇಗೆಂದರೆ ನಾಟಿ ಮಾಡುವ ಸಮಯ, ರಾಗಿ ಬೀಸುವಾಗ, ಸೋಬಾನೆ ಪದಗಳನ್ನು ಜಾನಪದ ಶೈಲಿಯಲ್ಲಿ ಹಾಡುವ ಮೂಲಕ ಬಾಯಿಂದ ಬಾಯಿಗೆ ಬಂದು ಜನಪದವಾಗಿದೆ. ಇದರಲ್ಲಿ ಅನಕ್ಷರಸ್ಥರು ಹೆಚ್ಚಾಗಿ ಜಾನಪದ ಹಾಡುಗಳನ್ನು ಹಾಡುವುದು ಸಾಮಾನ್ಯವಾಗಿದೆ ಎಂದರು.
ಆಡಳಿತ ಪಶುಪಾಲನಾ ಸಹಾಯಕ ನಿರ್ದೇಶಕ ಡಾ.ಸುರೇಶ್ ಮಾತನಾಡಿ, ಜಾನಪದ ಹಾಡುಗಳು ನಶಿಸುತ್ತಿವೆ, ಅವುಗಳನ್ನು ಶಾಲಾ ಮತ್ತು ಕಾಲೇಜು ಹಂತದಲ್ಲಿ ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕು. ಇದು ನಮ್ಮ ನಾಡಿನ ಸಂಸ್ಕೃತಿಯು ಹೌದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸ್ಪರ್ಧಿಗಳು ಜಾನಪದ ಹಾಡು ಹಾಡಿ ರಂಜಿಸಿದರು. ಕಾರ್ಯಕ್ರಮದಲ್ಲಿ ಸೂನಹಗಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಶಿವಪ್ರಸಾದ್, ಜಾನಪದ ಕಲಾವಿದ ಒಕ್ಕೂಟದ ಮೈಸೂರು ವಿಭಾಗ ಅಧ್ಯಕ್ಷ ಆರ್.ಕೆ.ಸ್ವಾಮಿ, ಶ್ರೀ ಮಲೆಮಹದೇಶ್ವರ ಜಾನಪದ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷೆ ದೇವೀರಮ್ಮ, ಕಾರ್ಯದರ್ಶಿ ಎಚ್.ಎಂ.ಮಹದೇವು ಸೇರಿದಂತೆ ಹಲವರು ಭಾಗವಹಿಸಿದ್ದರು.