ವಿದ್ಯುತ್‌ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಪರಿಹಾರ ವಿತರಣೆ
ತಾಳಿಕೋಟೆ:ಆ.೧೧: ತಾಲೂಕಿನ ಪಡೇಕನೂರ ಗ್ರಾಮದ ಚೆನ್ನಪ್ಪಗೌಡ ಪಾಟೀಲ ಅವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಗಡಿನ ಶೆಡ್ಡಿನ ಮೇಲೆ ಮುಖ್ಯ ವಿದ್ಯುತ್ ತಂತಿ ಕತ್ತರಿಸಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದ ಭಾರತಿ ಮಾದರ ಹಾಗೂ ಮಗಳು ಭಾಗ್ಯಶ್ರೀ ಅವಳ ಕುಟುಂಭದವರಿಗೆ ಹೆಸ್ಕಾ ಇಲಾಖೆಯಿಂದ ಕೊಡಮಾಡಲಾದ ತಲಾ ೫ ಲಕ್ಷ ರೂ. ಚೆಕ್‌ನ್ನು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಶನಿವಾರರಂದು ವಿತರಿಸಿದರು.
ಭಾರತಿ ಮಾದರ ಅವರ ಪತಿಯಾದ ಪರಶುರಾಮ ಮಾದರ ಅವರಿಗೆ ತಲಾ ೫ ಲಕ್ಷ ರೂ.ದಂತೆ ೧೦ ಲಕ್ಷ ರೂ. ಚೆಕ್‌ನ್ನು ಹಸ್ತಾಂತರಿಸಿದ ಲೋಕಾಯುಕ್ತ ನ್ಯಾಯಮೂರ್ತಿಗಳು ನಿನಗೆ ಇನ್ನೂ ಎರಡು ಗಂಡು ಮಕ್ಕಳಿವೆ ಅವರಿಗೆ ಉತ್ತಮ ಶಿಕ್ಷಣದ ಅವಶ್ಯಕತೆ ಇದೆ ಮತ್ತು ಅವರ ಭವಿಷ್ಯ ರೂಪಿಸುವ ಜವಾಬಾರಿಯು ನಿನ್ನ ಮೇಲೆ ಇದೆ ಈ ಹಣವನ್ನು ಕೈಯಲ್ಲಿದ್ದರೆ ಖರ್ಚು ಆಗುತ್ತದೆ ಆ ಹಣವನ್ನು ಇಬ್ಬರ ಮಕ್ಕಳ ಹೆಸರಿನಲ್ಲಿ ಬ್ಯಾಂಕಿನಲ್ಲಿ ಡಿಫಾಸಿಟ್ ಮಾಡು ಮುಂದೆ ಮಕ್ಕಳು ದೊಡ್ಡವರಾದ ಮೇಲೆ ಅವರ ಭವಿಷ್ಯದ ಸಂದರ್ಬದಲ್ಲಿ ಅವಶ್ಯಕತೆ ಬಿದ್ದಾಗ ಬಳಕೆಗೆ ಬರುತ್ತದೆ ಎಂದು ತಿಳಿ ಹೇಳಿದ ಅವರು ಈ ವಿದ್ಯುತ್ ಅವಘಡದಿಂದ ಹೆಸ್ಕಾ ಇಲಾಖೆಯೂ ಕೂಡಾ ಶೋಚನೀಯ ವ್ಯಕ್ತಪಡಿಸಿದೆ ಇದಕ್ಕೆ ಪರಿಹಾರವಾಗಿ ನೀಡಿದ ಹಣವನ್ನು ಸದ್ಭಳಿಕೆಯಾಗಲಿ ಎಂದು ತಿಳಿ ಹೇಳಿದರು.
ಈ ಸಮಯದಲ್ಲಿ ಬ.ಬಾಗೇವಾಡಿ ಹೆಸ್ಕಾಂ ಕಾರ್ಯನಿರ್ವಾಹಕ ಇಂಜನಿಯರ್ ಸಿದ್ರಾಮ ಬಿರಾದಾರ, ವಿಜಯಪುರ ಲೋಕಾಯುಕ್ತ ಅಧಿಕ್ಷಕ ಟಿ.ಮಲ್ಲೇಶ್, ಲೋ.ಡಿವಾಯ್‌ಎಸ್‌ಪಿ ಸುರೇಶ ರೆಡ್ಡಿ, ಇನಸ್ಪೇಕ್ಟರ್‌ಗಳಾದ ಆನಂದ ಟಕ್ಕಣ್ಣವರ, ಆನಂದ ಡೋಣಿ, ಕೆಬಿಜೆಎನ್‌ಎಲ್ ಸಹಾಯಕ ಇಂಜನಿಯರ್ ವಿಶ್ವನಾಥ ಬಿರಾದಾರ, ಕಾರ್ಯನಿರ್ವಾಹಕ ಅಧಿಕಾರಿಗಳಾದ ವೆಂಕಟೇಶ ವಂದಾಲ, ತಾ.ಪಂ, ಇಓ ವೆಂಕಟೇಶ ವಂದಾಲ, ಸಹಾಯಕ ನಿರ್ದೇಶಕರಾದ (ಗ್ರಾಉ) ಸುಜಾತಾ ಯಡ್ರಾಮಿ, ಪಿಡಿಓ ಶ್ರೀಮತಿ ಸಾವಿತ್ರಿ ಬಿರಾದಾರ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.