ಜಿಲ್ಲಾಧಿಕಾರಿಗಳಿಂದ ನಗರದ ವಿವಿಧ ಸ್ಮಾರಕಗಳ ವೀಕ್ಷಣೆ
ಸಂಜೆವಾಣಿ ವಾರ್ತೆ,
ವಿಜಯಪುರ.ಆ.೧೧: ನಗರದಲ್ಲಿರುವ ಐತಿಹಾಸಿಕ ವಿವಿಧ ಸ್ಮಾರಕಗಳಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಭೇಟಿ ನೀಡಿ, ವೀಕ್ಷಣೆ ನಡೆಸಿದರು.
ಐತಿಹಾಸಿಕ ಸ್ಮಾರಕಗಳಾದ ಸುರಂಗ ಬಾವಡಿ, ಖಾನ್ ಸರೋವರ, ೬೦ ಖಬರ ಬಾವಡಿ, ಇಬ್ರಾಹಿಂ ಸರೋವರ, ರಾಮಲಿಂಗ ಕೆರೆ ಮತ್ತು ಹಾಥಿ ಬಾವಡಿ ಸ್ಥಳಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಮಾರಕಗಳ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸ್ಮಾರಕಗಳ ಸ್ವಚ್ಛತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಅಗತ್ಯ ಸಲಹೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.