ಇಂಡಿಯ ನಿಂಬೆ ದೆಹಲಿಯಲ್ಲಿ ಪ್ರದರ್ಶನ
ಇಂಡಿ:ಆ.೧೧:ಇAಡಿಯ ನಿಂಬೆ ದೆಹಲಿಯಲ್ಲಿ ಮೂರು ದಿನಗಳ ಕಾಲ ಬಯೋಟೆಕ್ ಇಂಡಿಯಾ ಪ್ರದರ್ಶನ ಮೇಳದಲ್ಲಿ ಪ್ರದರ್ಶನ ಗೊಂಡಿದೆ.
ಭಾರತದ ಪ್ರಮುಖ ವ್ಯಾಪಾರ ಮೇಳವು ನ್ಯಾಚುರಲ್ ಎಕ್ಷಪೋ ಇಂಡಿಯಾ ಸಾವಯುವ ಮತ್ತು ನೈಸರ್ಗಿಕ ಉತ್ಪನ್ನಗಳ ಪ್ರದರ್ಶನದಲ್ಲಿ ಇಂಡಿ ನಿಂಬೆಯನ್ನು ತಡವಲಗಾ ಗ್ರಾಮದ ರೈತ ಭೀಮರಾಯ ಹಿರಾಪುರ ಸಾವಯುವ ನಿಂಬೆ ಬೆಳೆದು ಪ್ರದರ್ಶಿಸಿದ್ದಾರೆ.
ಇಂಡಿಯ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಸ್.ಪಾಟೀಲ ಮತ್ತು ರೈತ ಭೀಮರಾಯ ಹಿರಾಪುರ ಕರ್ನಾಟಕ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು.
ರೈತರು, ಎಫ್‌ಪಿಒಗಳು, ಉತ್ಪಾದಕರು, ತಯಾರಕರು, ಖರೀದಿದಾರರು,ಆಮದುದಾರರು,ರಫ್ತುದಾರರು ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.