ಎರಡನೇ ಸೋಮವಾರ ಗುಗ್ಗಳ ಬಸವಣ್ಣ ಪಲ್ಲಕ್ಕಿ ಉತ್ಸವ : ಡಾ. ಗುಂಡಣ್ಣ ಬಾಳಿ
ಚಿತ್ತಾಪೂರ:ಆ.೧೧:ರಾವೂರ ಗ್ರಾಮದ ಗುಗ್ಗಳ ಬಸವಣ್ಣ ದೇವಸ್ಥಾನದ ಪಲ್ಲಕ್ಕಿ ಉತ್ಸವವು ಎರಡನೇ ಸೋಮವಾರ ಅದ್ದೂರಿಯಾಗಿ ನಡೆಯಲಿದೆ ಎಂದು ದೇವಸ್ಥಾನದ ಮುಖ್ಯಸ್ಥರಾದ ಡಾ. ಗುಂಡಣ್ಣ ಬಾಳಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ೮ ಗಂಟೆಗೆ ದೇವಸ್ಥಾನದ ಬಸವಣ್ಣನ ಮೂರ್ತಿಗೆ ರುದ್ರಭಿಷೇಕ ನಡೆಯುವುದು , ಬೆಳಿಗ್ಗೆ ೧೧ ಗಂಟೆಗೆ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಿಂದ ವಾದ್ಯಮೇಳಗಳೊಂದಿಗೆ ಗ್ರಾಮಸ್ಥರು ಮತ್ತು ದೇವಸ್ಥಾನದ ಭಕ್ತರಿಂದ ಪಲ್ಲಕ್ಕಿ ಉತ್ಸವ ಗುಗ್ಗಳ ಬಸವಣ್ಣ ದೇವಸ್ಥಾನದವರೆಗೂ ನಡೆಯಲಿದೆ. ನಂತರ ರಾವೂರ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಸಾನಿದ್ಯದಲ್ಲಿ ಧರ್ಮಸಭೆ ನಡೆಯಲಿದೆ. ಬಂದ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲು ಕೋರಲಾಗುತ್ತದೆ ಎಂದು ಬಾಳಿ ತಿಳಿಸಿದ್ದಾರೆ.