ವೀರಣ್ಣ ಅಂಗಡಿ ಅಗಲಿಕೆಗೆ ಶ್ರೀ ರಂಭಾಪುರಿ ಜಗದ್ಗುರುಗಳ ಸಂತಾಪ
ಸಂಜೆವಾಣಿ ವಾರ್ತೆ
ಬಾಳೆಹೊನ್ನೂರು.ಆ.೧೧;ರಾಣೆಬೆನ್ನೂರಿನ ಗಣ್ಯ ವರ್ತಕರಾಗಿದ್ದ ವೀರಣ್ಣ ಅಂಗಡಿ ಅವರ ಅಗಲಿಕೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.ಸರಳತೆಯನ್ನು ಮೈಗೂಡಿಸಿಕೊಂಡು ಧರ್ಮ ನಿಷ್ಠರಾಗಿದ್ದ ವೀರಣ್ಣ ಅಂಗಡಿ ಅವರ ಹಿರಿತನದಲ್ಲಿ ರಾಣೆಬೆನ್ನೂರಿನಲ್ಲಿ ಶ್ರೀ ಜಗದ್ಗುರು ರಂಭಾಪುರಿ ಪೀಠದ ದಸರಾ ಧರ್ಮ ಸಮಾರಂಭ 2005ರಲ್ಲಿ ನಡೆದದ್ದು ತಮ್ಮ ಮನದಾಳದ ಲ್ಲಿದೆ. ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದ ಅವರು ಶ್ರೀ ರಂಭಾಪುರಿ ಪೀಠದ ಮೇಲೆ ಅಪಾರ ಅಭಿಮಾನ ಹೊಂದಿದ್ದರಲ್ಲದೇ ನಿರಂತರ ಸಂಪರ್ಕ ದಲ್ಲಿರುತ್ತಿದ್ದರು. ಅಂಗಡಿ ವೀರಣ್ಣನವರ ಅಗಲಿಕೆ ತಮಗೆ ನೋವನ್ನುಂಟು ಮಾಡಿದೆ. ದಯಾಘನನಾದ ಪರಮಾತ್ಮನು ಅಗಲಿದ ಅವರ ಪವಿತ್ರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಹಾಗೂ ಕುಟುಂಬದ ಸದಸ್ಯರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.