ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಶಿವಮೊಗ್ಗ.ಆ.೧೧:* ರಾಷ್ಟ್ರಧ್ವಜವು ರಾಷ್ಟ್ರದ ಆತ್ಮವಾಗಿದೆ ! 15 ಅಗಸ್ಟ್ ಮತ್ತು 26 ಜನವರಿ ಯಂದು ಈ ರಾಷ್ಟ್ರಧ್ವಜವನ್ನು ಅಭಿಮಾನದೊಂದಿಗೆ ಪ್ರದರ್ಶಿಸಲಾಗುತ್ತದೆ; ಆದರೆ ಅದೇ ದಿನ, ಕಾಗದ/ಪ್ಲಾಸ್ಟಿಕ್‌ನ ಚಿಕ್ಕ ಚಿಕ್ಕ ರಾಷ್ಟ್ರಧ್ವಜಗಳು ರಸ್ತೆಗಳ ಮೇಲೆ. ಕಸದ ತೊಟ್ಟಿ ಮತ್ತು ಚರಂಡಿಗಳಲ್ಲಿ ಹರಿದ ಅವಸ್ಥೆಯಲ್ಲಿ ಬಿದ್ದಿರುವುದು ಕಂಡು ಬರುತ್ತದೆ. ಪ್ಲಾಸ್ಟಿಕ್ ಧ್ವಜಗಳು ಕೂಡಲೇ ನಾಶವಾಗುವುದಿಲ್ಲ. ಆದುದರಿಂದ ಅನೇಕ ದಿನಗಳವರೆಗೆ ಈ ರಾಷ್ಟ್ರಧ್ವಜಗಳ ಅನಾದರವಾಗುವುದನ್ನು ನೋಡಬೇಕಾಗುತ್ತದೆ. ರಾಷ್ಟ್ರಧ್ವಜದ ಈ ಅಪಮಾನವನ್ನು ತಡೆಗಟ್ಟಲು ಹಿಂದೂ ಜನಜಾಗೃತಿ ಸಮಿತಿಯ ಮೂಲಕ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು  ಸಲ್ಲಿಸಲಾಗಿತ್ತು. ಈ ನಿಟ್ಟಿನಲ್ಲಿ ಆಲಿಕೆಯನ್ನು ನೀಡುವಾಗ ನ್ಯಾಯಾಲಯವು ಪ್ಲಾಸ್ಟಿಕ್ ರಾಷ್ಟ್ರಧ್ವಜಗಳಿಂದಾಗುವ ಅಪಮಾನವನ್ನು ತಡೆಗಟ್ಟುವ ಆದೇಶವನ್ನು ಸರಕಾರಕ್ಕೆ ನೀಡಿತ್ತು. ಅದಕ್ಕನುಸಾರ ಕೇಂದ್ರೀಯ ಮತ್ತು ರಾಜ್ಯ ಗೃಹ ಇಲಾಖೆ ಮತ್ತು ಶಿಕ್ಷಣ ವಿಭಾಗವೂ ಇದಕ್ಕೆ ಸಂಬಂಧಿಸಿದಂತೆ ಸುತ್ತೋಲೆಯನ್ನು ಹೊರಡಿಸಿತ್ತು.ಅಂಗಡಿಗಳಲ್ಲಿ ಮತ್ತು ಇ-ಕಾಮರ್ಸ್ ಜಾಲತಾಣದಲ್ಲಿ ತ್ರಿವರ್ಣಗಳ ಬಣ್ಣದ ಮಾಸ್ಕ್ ಗಳ ಮಾರಾಟ ನಡೆದಿದೆ. ತ್ರಿವರ್ಣಗಳ ಮಾಸ್ಕ್‌ ಗಳನ್ನು ಬಳಸುವುದರಿಂದ ರಾಷ್ಟ್ರಧ್ವಜದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ. ‘ತ್ರಿವರ್ಣ ಮಾಸ್ಕ್’ ದೇಶಪ್ರೇಮದ ಪ್ರದರ್ಶನದ ಮಾಧ್ಯಮವಲ್ಲ, ಆದರೆಧ್ವಜಸಂಹಿತೆಗನುಸಾರ ‘ರಾಷ್ಟ್ರಧ್ವಜದ ಈ ರೀತಿಯ ಬಳಕೆ ಧ್ವಜದ ಅಪಮಾನವೇ ಆಗಿದೆ. ಇದು ರಾಷ್ಟ್ರದ ಗೌರವದ ಅಪಮಾನ ನಿವಾರಣೆ ಅಧಿನಿಯಮ 1971 ರ ಉಲ್ಲಂಘನೆಯಾಗಿದೆ. ಆದುದರಿಂದ ‘ತ್ರಿವರ್ಣ ಮಾಸ್ಟ್’ ಖರೀದಿಸದಂತೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಬೇಕು.ದೇಶದ ಸ್ವಾತಂತ್ರ ಸಮರದಲ್ಲಿ ಸಮಾವೇಶಗೊಂಡ ದೇಶಭಕ್ತರು ಆಂಗ್ಲರ ದೌರ್ಜನ್ಯಗಳ ಸಮಯದಲ್ಲಿ ಕೈಯಲ್ಲಿ ತೆಗೆದುಕೊಂಡ ರಾಷ್ಟ್ರ ಧ್ವಜಗಳು ಭೂಮಿಯ ಮೇಲೆ ಬೀಳಬಾರದೆಂದು ಅನೇಕ ಲಾಠಿಗಳ ಹೊಡೆತಗಳನ್ನು ತಿಂದರು. ದೌರ್ಜನ್ಯವನ್ನು ಸಹಿಸಿದರು. ರಾಷ್ಟ್ರಧ್ವಜದ ಅನಾದರವನ್ನು ತಡೆಗಟ್ಟಲು ಕ್ರಾಂತಿಕಾರಿಗಳು ತಮ್ಮ ಪ್ರಾಣಗಳನ್ನೂ ಅರ್ಪಿಸಿದ್ದಾರೆ. ಹೀಗಿದ್ದರೂ ಚಿಕ್ಕ ಮಕ್ಕಳಿಗೆ ಆಡಲು, ವಾಹನಗಳ ಮೇಲೆ ಅಂಟಿಸುವ ಉದ್ದೇಶದಿಂದ ತೆಗೆದುಕೊಳ್ಳಲಾದ ಕಾಗದ ಮತ್ತು ಪ್ಲಾಸ್ಟಿಕ್ ಧ್ವಜಗಳು ರಸ್ತೆಗಳಲ್ಲಿ ಮತ್ತು ಕಸದ ತೊಟ್ಟಿಗಳಲ್ಲಿ ನೋಡಲು ಸಿಗುತ್ತವೆ ಮತ್ತು ಅವು ಕಾಲುಗಳಲ್ಲಿ  ತುಳಿಯಲ್ಪಡುತ್ತವೆ. ಆದುದರಿಂದ ರಾಷ್ಟ್ರಧ್ವಜಕ್ಕೆ ಬಲಿದಾನ ನೀಡುವ ಕ್ರಾಂತಿಕಾರರ ಇದು ಒಂದು ರೀತಿಯಲ್ಲಿ ಕ್ರೂರ ತಿರಸ್ಕಾರವೇ ಆಗಿದೆ. ಕೆಲವು ಜನರು ತ್ರಿವರ್ಣಗಳ ರೀತಿಯಲ್ಲಿ ತಮ್ಮ ಮುಖವನ್ನು ಬಣ್ಣದಿಂದ ಬಳಿದುಕೊಳ್ಳುತ್ತಾರೆ ಮತ್ತು ರಾಷ್ಟ್ರಧ್ವಜದ ಬಣ್ಣಗಳ ಬಟ್ಟೆಗಳನ್ನು ಧರಿಸಿ ತಿರುಗಾಡುತ್ತಾರೆ. ಇದರಿಂದಲೂ ರಾಷ್ಟ್ರಧ್ವಜದ ಅಪಮಾನವಾಗುತ್ತದೆ. ಆದುದರಿಂದ ರಾಷ್ಟ್ರಧ್ವಜದ ಅಪಮಾನ ಅಥವಾ ಅನಾದರವಾಗುವ ಕೃತ್ಯಗಳು ತಮ್ಮ ವಿದ್ಯಾಲಯದ ವಿದ್ಯಾರ್ಥಿಗಳಿಂದ ಆಗದಂತೆ, ವಿದ್ಯಾಲಯಗಳಲ್ಲಿ ತಿಳುವಳಿಕೆ ನೀಡಿರಿ. ಇಂದಿನ ವಿದ್ಯಾರ್ಥಿಗಳು ದೇಶದ ಮುಂಬರುವ ಪೀಳಿಗೆಯಾಗಿದ್ದಾರೆ ! ಈ ಭಾవి ಪೀಳಿಗೆ ರಾಷ್ಟ್ರಾಭಿಮಾನಿಗಳಾಗಲಿ, ಎಂಬ ಉಚ್ಚ ಉದ್ದೇಶದಿಂದ ಹಿಂದೂ ಜನ ಜಾಗೃತಿ ಸಮಿತಿಯು ಕಳೆದ 19 ವರ್ಷಗಳಿಂದ ‘ರಾಷ್ಟ್ರಧ್ವಜವನ್ನು ಗೌರವಿಸಿ ! ಎಂಬ ಉಪಕ್ರಮವನ್ನು ಜಾರಿಗೊಳಿಸುತ್ತಿದೆ. ಇದರ ಅಂತರ್ಗತ ರಾಷ್ಟ್ರಧ್ವಜವನ್ನು ಗೌರವಿಸಿ !’ ಈ ಬಗ್ಗೆ ವ್ಯಾಖ್ಯಾನವನ್ನು ಮತ್ತು ಪ್ರಶ್ನೋತ್ತರ ಸ್ಪರ್ದೆಯನ್ನು ಏರ್ಪಡಿಸುವುದು. ರಾಷ್ಟ್ರೀಯ ಚಿಹ್ನೆಗಳ ಮಹತ್ವವನ್ನು ಹೇಳುವ ಕರಪತ್ರಗಳ ವಿತರಣೆ, ರಸ್ತೆಯ ಮೇಲೆ ಬಿದ್ದ ರಾಷ್ಟ್ರಧ್ವಜಗಳನ್ನು ಒಟ್ಟಿಗೆ ಮಾಡುವುದು, ಪ್ಲಾಸ್ಟಿಕ್ ರಾಷ್ಟ್ರಧ್ವಜಗಳ ಮಾರಾಟವನ್ನು ತಡೆಗಟ್ಟಲು ಪ್ರಯತ್ನಿಸುವುದು ಮುಂತಾದ ಚಟುವಟಿಕೆಗಳನ್ನು ಮಾಡಲಾಗುತ್ತದೆ. ಅದಕ್ಕಾಗಿ ಅನುಮತಿಯನ್ನು ಪ್ರದಾನಿಸಬೇಕು  ಎಂದು ವಿನಂತಿಸುತ್ತೇವೆ. ಈ ಸಂದರ್ಭದಲ್ಲಿ  ಶಿಕಾರಿಪುರದ ತಹಶೀಲ್ದಾರರಿಗೆ ಮತ್ತು ಪೊಲೀಸ್ ವೃತ್ತ ನಿರೀಕ್ಷಕರಿಗೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತು ಪುರಸಭೆ ಮುಖ್ಯಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ  ಕ್ಷತ್ರಿಯ ಮರಾಠ ಪರಿಷತ್ತಿನ ಶಿವಮೊಗ್ಗ ನಗರ ಅಧ್ಯಕ್ಷರಾದ  ದಿನೇಶ್ ಚೌಹಾಣ್,  ಪರಿಸರ ರಮೇಶ್,ಶಕ್ತಿ ಸಂಗ್ರಾಮ ವೇದಿಕೆ ಅಧ್ಯಕ್ಷರಾದ .ಆನಂದ್, ಜೈ ಕರ್ನಾಟಕ ಜನಪರ ವೇಧಿಕೆ ಅಧ್ಯಕ್ಷರಾದ . ಶಿವಯ್ಯ ಶಾಸ್ತ್ರಿ, .ರವಿನಾಯ್ಕ, . ಕನ್ನಪ್ಪ, ವೀರಶೈವ ಜಂಗಮ ಪುರೋಹಿತ ಸಂಘದ ಅಧ್ಯಕ್ಷರಾದ . ಪ್ರಭುಸ್ವಾಮಿ, ತೀರ್ಥಹಳ್ಳಿಯ ಬಾಲ ಗೋಕುಲ ಜಿಲ್ಲಾ ಸಂಯೋಜಕರಾದ ಸೌ ಸಾವಿತ್ರಿ ಷಣ್ಮುಖ, ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಗದ ಸದಸ್ಯರಾದ ಶ್ರೀ.ಮೋಹನ್ ಕೆರೋಡಿ, ನಿವೃತ್ತ ದೈಹಿಕ ಶಿಕ್ಷಕರಾದ ಶ್ರೀ.ಕಿರಣ್ ಕುಮರ್,ಶ್ರೀರಾಮ ದೇವಸ್ಥಾನ ಬಿದರಗೋಡಿನ ಅಧ್ಯಕ್ಷರಾದ ಶ್ರೀ.ಸುಧಾಕರ್, ಹಿಂದೂ ಜನಜಾಗೃತಿ ಸಮಿತಿಯ 20 ಕ್ಕೂ ಹೆಚ್ಚು ಕಾರ್ಯ ಕರ್ತರು, 20 ಕ್ಕೂ ಹೆಚ್ಚು  ರಾಷ್ಟ್ರ ಪ್ರೇಮಿಗಳು  ಉಪಸ್ಥಿತರಿದ್ದರು.