ಸಾಧನೆಗೆ ದೊಡ್ಡ ಗುರಿ ಇರಲಿ;  ಡಾ. ವೆಂಕಟೇಶ್ ಬಾಬು
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧೧ನಗರದ ಆದಿ ಕೇಶವ ಅಕಾಡೆಮಿ ಅಸೋಸಿಯೇಟೆಡ್ ವಿತ್ ಎಂ ಈ ಎಸ್ ಪಿಯು ಕಾಲೇಜು ಮತ್ತು ಶಾಹಿದ್ ಫಾಲ್ಕಾನ್ ಪಿಯು ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ‘ ಆರಂಭ – 2024 ಫ್ರೆಷರ್ಸ್ ಡೇ’ ಎಂಬ ಶೈಕ್ಷಣಿಕ ವರ್ಷದ ಸ್ವಾಗತ ಕಾರ್ಯಕ್ರಮ ಜರುಗಿತ್ತು. ಈ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಿಕೊಂಡರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಆದಿ ಕೇಶವ ಅಕಾಡೆಮಿಯ ಕಾರ್ಯದರ್ಶಿಗಳಾದ  ಜ್ಯೋತಿ ಕುಮಾರ್  ನೆರವೇರಿಸಿ ಕೊಟ್ಟರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದಾವಣಗೆರೆ ನಗರ ಪಾಲಿಕೆಯ ಮಾಜಿ ಮೇಯರ್ ಮತ್ತು ಕಾರ್ಪೊರೇಟರ್   ಅಜಯ್ ಕುಮಾರ್ ಬಿ  ಜಿ ರವರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಂದೆ ತಾಯಿಗಳನ್ನು ಗೌರವಿಸಬೇಕು ಮತ್ತು ಅವರ ಕನಸುಗಳನ್ನು ನನಸಾಗಿಸಬೇಕು ಎಂದು ಮುಖ್ಯ ಅತಿಥಿಗಳ ಭಾಷಣವನ್ನಾಡಿದರು. ಕಾರ್ಯಕ್ರಮಕ್ಕೆ ಮತ್ತೊಬ್ಬ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಮೋಟಿವೇಷನಲ್ ಸ್ಪೀಕರ್ ಎಂದೇ ಖ್ಯಾತಿಯಾಗಿರುವ ಡಾ. ವೆಂಕಟೇಶ್ ಬಾಬು ಎಸ್  ವಿದ್ಯಾರ್ಥಿಗಳಿಗೆ ಸತತ ಪ್ರಯತ್ನ, ನಂಬಿಕೆ, ಗುರಿಯನ್ನು ಹೇಗೆ ಸಾಧಿಸಬೇಕು