ಎಸ್ ಸಿ ಎಸ್ ಟಿ ಸಮಾಲೋಚನೆ ಸಭೆ ಯಶಸ್ವಿ
ಕಲಬುರಗಿ:ಆ.10:ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಸರಕಾರಿ ನೌಕರರ ಕೇಂದ್ರ ಕಚೇರಿ ಬೆಂಗಳೂರು ಹಾಗೂ ಜಿಲ್ಲಾ ಘಟಕ ಕಲಬುರ್ಗಿ ಇವರ ಸಂಯುಕ್ತ ಆಶ್ರಯದಲ್ಲಿ ನೆನ್ನೆ ಅಥರ್ವ ಹೋಟೆಲನಲ್ಲಿ ಜರುಗಿದ ವಿಭಾಗಿಯ ಮಟ್ಟದ ಸಮಾವೇಶ ಅತ್ಯಂತ ಯಶಸ್ವಿಯಾಗಿ ಮತ್ತು ಅರ್ಥಪೂರ್ಣವಾಗಿ ಜರುಗಿತು.
ಸಂಘದ ರಾಜ್ಯಾಧ್ಯಕ್ಷರಾದ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಕಚೇರಿಯ ಜಂಟಿ ನಿರ್ದೇಶಕರಾಗಿರುವ ಶ್ರೀಯುತ ಡಾ. ದೇವರಾಜ್ ರವರು ಸದರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರಬುದ್ಧ ಭಾರತದ ಕನಸನ್ನು ನನಸು ಮಾಡುವ ಗುರುತರ ಜವಾಬ್ದಾರಿ ಸರ್ಕಾರಿ ನೌಕರರ ಮೇಲಿದೆ ಬಾಬಾ ಸಾಹೇಬರ ಕನಸನ್ನು ಮನಸು ಮಾಡುವ ಅತೀ ಹೆಚ್ಚು ಅವಕಾಶಗಳು ನಮ್ಮ ಇಲಾಖೆಗೆ ಇದೆ ದಮನಿತ ಸಮುದಾಯದ ಜನರಿಗೆ ಹಾಗೂ ಅವರ ಮಕ್ಕಳಿಗೆ ನೇರವಾಗಿ ಎಲ್ಲಾ ಹಂತದಲ್ಲಿ ಸಹಾಯ ಸಜೊತೆ ಅನ್ನ, ಅಕ್ಷರ, ಸೌಕರ್ಯಗಳು ಕಲ್ಪಿಸುತ್ತಾ ಸಮಾಜವನ್ನು ಹಾಗೂ ನಮ್ಮ ನೌಕರರ ವರ್ಗವನ್ನು ಮುಖ್ಯ ವಾಹಿನಿಗಿ ತಂದು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಪ್ರಬುದ್ಧ ಸಮಾಜವನ್ನು ನಿರ್ಮಾಣ ಮಾಡಿ ಬಾಬಾ ಸಾಹೇಬರ ಆಶ್ರಯದಂತೆ ಸ್ವಾಭಿಮಾನಿಯಾಗಿ ಸಾವಲಂಬಿಯಾಗಿ ಬದುಕುತ್ತಾ ಸಮಾಜದ ಋಣವನ್ನು ತೀರಿಸುವ ಕಾರ್ಯವನ್ನು ನಮ್ಮ ಸಂಘ ಪ್ರಮಾಣಿಕವಾಗಿ ಮಾಡಬೇಕೆಂದು ಎಲ್ಲರೂ ತಮ್ಮ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಎಲ್ಲ ವರ್ಗದವರಿಗೂ ಸೇರಿದಂತೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದಲ್ಲಿರುವ ಎಲ್ಲಾ ಉಪಜಾತಿಗಳನ್ನು ಒಗ್ಗೂಡಿಸಿ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ನಡೆದುಕೊಳ್ಳಬೇಕು
ಜಾತಿ ಜಾತಿಗಳ ಮಧ್ಯ ಜಾತಿ ಉಪಜಾತಿಗಳ ಮಧ್ಯೆ ಯಾವುದೇ ಕಾರಣಕ್ಕೂ ವೈ ಮನಸ್ಸು ಮಾಡುತ್ತಾ ಇನ್ನೂ ಬಲಿಷ್ಠವಾಗುತ್ತಾ ಸಾಗಬೇಕೆಂದು ಆಶಯ ನುಡಿಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಂತೋಷ್ ಸಿಂದೆ (ಕಾರ್ಯಾಧ್ಯಕ್ಷರು) ವಹಿಸಿದ್ದರು ಇದೇ ಸಂದರ್ಭದಲ್ಲಿ ಪೂರ್ವ ರಾಜ್ಯ ಅಧ್ಯಕ್ಷರಾಗಿರುವ ಶ್ರೀಮತಿ ಸಿಂಧು ಮೇಡಂ ಹಾಗೂ ನಿಕಟ ಪೂರ್ವ ಅಧ್ಯಕ್ಷರಾಗಿರುವ ರಾಜೇಂದ್ರ ಜಲ್ದಾರ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಪ್ರಸನ್ನ ಕುಮಾರ್ ಸೇರಿದಂತೆ ಹಲವರು ಸಂಘಕ್ಕೆ ಅತ್ಯುತ್ತಮ ಸಲಹೆ ಸೂಚನೆಗಳನ್ನು ನೀಡಿ ಮಾರ್ಗದರ್ಶನ ಮಾಡಿದರು ಸದರಿ ಸಮಾವೇಶಕ್ಕೆ ಯಾದಗಿರಿ ಕೊಪ್ಪಳ ಬಳ್ಳಾರಿ ರಾಯಚೂರು ಬೀದರ್ ಕಲಬುರ್ಗಿ ವಿಜಯಪುರ ಹೀಗೆ ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರುಗಳು ಪದಾಧಿಕಾರಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಸಮಾಜದ ಬಗ್ಗೆ ಅಷ್ಟೇ ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ನೌಕರರ ಕುಂದು ಕೊರತೆ ಸಮಸ್ಯೆ ಸವಾಲುಗಳ ಬಗ್ಗೆ ಸಂಘದ ಮೂಲಕ ಮುಂಬರುವ ದಿನಗಳಲ್ಲಿ ಮಾಡಬೇಕಾಗಿರುವ ಕಾರ್ಯಗಳ ಬಗ್ಗೆ ಸಾಮಾಜಮುಖಿಯಾಗಿ ಹಮ್ಮಿಕೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಸಮೋಲೋಚನಾ ಸಭೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಅರ್ಥಪೂರ್ಣವಾಗಿ ಸಂಪನಗೊಳಿಸಲಾಯಿತು.
ಸಂತೋಷ್ ಆರ್ ಕೆ ಎಲ್ಲರನ್ನು ಸ್ವಾಗತಿಸಿದರೆ ಶ್ರೀ ಪ್ರಭುಲಿಂಗ ವಾಲಿರವರು ವಂಧನಾರ್ಪಣ ಸಲ್ಲಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾಧರ್ ಕಾಂಬಳೆ ನೆರವೇರಿಸಿದರು ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಶ್ರೀ ಚೇತನ್ ಗುರಿಕಾರ್ (ಜಿಲ್ಲಾಧ್ಯಕ್ಷರು ಕಲಬುರ್ಗಿ) ,ವಿಜಯಲಕ್ಷ್ಮಿ ಕೊಬಾಳ್ಕರ್ (ರಾಯಚೂರು), ಶೃತಿ ಸುರಪುರ , ದೇವೇಂದ್ರ ರುದ್ರವರ, ಅಶೋಕ್ ನಾಯಕ್, ರಾಜು ದೇವದುರ್ಗ, ಲಿಂಗರಾಜ್ ಸತೀಶ್ ಸಂಗನ, ವಿಜಯಲಕ್ಷ್ಮಿ ಹೋಲ್ಕರ್, ರಾಜಕುಮಾರ್ ಹುಲೆಕಾರ್ ಉಪಸ್ಥಿರಿದ್ದರು.