ಯಕ್ಷಗಾನವು ಅತ್ಯಂತ ಪ್ರಮುಖ ಸಂಸ್ಕøತಿ
ಕಲಬುರಗಿ:ಆ.10: ಶರಣಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ ಪ್ರಸಂಗ : ಶಿವಶಕ್ತಿ ಗುಳಿಗ ಯಕ್ಷಗಾನ ಆಟವನ್ನು ಶರಣಬಸವೇಶ್ವರ ಸಂಸ್ಥಾನದ ಒಂಭತ್ತನೇಯ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಉದ್ಘಾಟಿಸಿದರು.
ಯಕ್ಷಗಾನ – ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಯಕ್ಷಗಾನ ಅತ್ಯಂತ ಪ್ರಮುಖವಾದದ್ದು ಎಂದು ಶರಣಬಸವೇಶ್ವರ ವಿದ್ಯಾವಧ9ಕ ಸಂಘದ ಕಾಯ9ದಶಿ9 ಬಸವರಾಜ ದೇಶಮುಖ ಹೇಳಿದರು.
ಶರಣಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಹವ್ಯಾಸಿ ಕಲಾ ಬಳಗ ಮತ್ತು ದಕ್ಷಿಣ ಕನ್ನಡ ಸಂಘ ಮತ್ತು ಕಲಬುರಗಿ ಹೋಟೆಲ್ ಲಾಡ್ಜ್ ಬೇಕರಿ ಅಸೋಸಿಯೇಷನ್ ಇವರ ನೇತೃತ್ವದಲ್ಲಿ ಕುಂದಾಪೂರದ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯವರು ಪ್ರಸಂಗ : ಶಿವಶಕ್ತಿ ಗುಳಿಗ ಯಕ್ಷಗಾನ ಆಟದ ಮುಖ್ಯಅತಿಥಿಗಳಾಗಿ ಮಾತನಾಡಿದರು. ನಮ್ಮ ಭಾಗದಲ್ಲಿ ಡೊಳ್ಳು ಕುಣಿತ, ನಾಟಕ, ಕೋಲಾಟಗಳು ಹೇಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಬಹಳ ಪ್ರಸಿದ್ದಿ ಪಡೆದಿದೆ ಎಂದರು. ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಹವ್ಯಾಸಿ ಕಲಾ ಬಳಗ ಮತ್ತು ದಕ್ಷಿಣ ಕನ್ನಡ ಸಂಘ ಮತ್ತು ಕಲಬುರಗಿ ಹೋಟೆಲ್ ಲಾಡ್ಜ್ ಬೇಕರಿ ಅಸೋಸಿಯೇಷನ್ ಪದಾಧಿಕಾರಿಗಳು ಇದ್ದರು.