ಪುರಸಭೆಯಿಂದ ಬೀದಿ ನಾಯಿಗಳಿಗೆ ಸಂತಾನ ತಡೆ ಚಿಕಿತ್ಸೆ
(ಸಂಜೆವಾಣಿ ಪ್ರತಿನಿಧಿಯಿಂದ)
ಮಾನವಿ, ಆ ೧೦,ಪಟ್ಟಣದ ನಾನಾ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿತ್ತು ಜನಸಾಮಾನ್ಯರು ಮತ್ತು ಮಕ್ಕಳು ಒಂಟಿಯಾಗಿ ಓಡಾಡಲು ಕಷ್ಟವಾಗಿತ್ತು.
ಬೀದಿ ನಾಯಿಗಳ ಹಿಂಡು ವಾಹನ ಸವಾರರ ಮೇಲೆ ದಾಳಿ ಮಾಡುತ್ತಿದ್ದವು ಹಾಗೂ ಬೈಕ್, ಕಾರುಗಳ ಹಿಂದೆ ನಾಯಿಗಳು ಓಡಿ ಬರುತ್ತಿದ್ದವು ಪಟ್ಟಣದಲ್ಲಿ ವಾಹನ ಸವಾರರು ಆತಂಕದಿಂದ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದರು. ಅನೇಕ ಭಾರಿ ಸಾರ್ವಜನಿಕರು ಪುರಸಭೆಗೆ ಮನವಿಯನ್ನು ನೀಡಿದ್ದರು.
ಇದನ್ನೂ ಮನಗಂಡು ಪುರಸಭೆಯ ಅಧಿಕಾರಿಗಳು ಹಾಗೂ ವೇಟರ್ನರಿ ವೈದ್ಯರು ಸೇರಿ ಇಂದು ಪಟ್ಟಣದಲ್ಲಿರುವ ಇಂದ್ರನಗರ್, ಇಸ್ಲಾಂ ನಗರ್, ಫರಾ ಕಾಲೋನಿ,ಸರಕಾರಿ ಆಸ್ಪತ್ರೆ, ವಾರ್ಡ್ ನಂಬರ್ ೧೫ ಹಾಗೂ ೧೬ ರಲ್ಲಿ ಇರುವಂತ ಬೀದಿ ನಾಯಿಗಳಿಗೆ ವೇಟರ್ನರಿ ವೈದ್ಯರಿಂದ ಸಂತಾನ ತಡೆ ಚಿಕಿತ್ಸೆ ಮಾಡಿಸಿದರು.