ಏತ ನೀರಾವರಿ ಅನುಷ್ಠಾನ ರೂವಾರಿ ಶಾಸಕ ಹಂಪನಗೌಡ ಬಾದರ್ಲಿ ರೈತರಿಂದ ಅಭಿನಂದನಾ ಕಾರ್ಯಕ್ರಮ
ಸಿಂಧನೂರು ಆ.೧೦-
ತಾಲೂಕಿನ ತಿಮ್ಮಾಪುರ ಏತ ನೀರಾವರಿ ಅನುಷ್ಠಾನ ಗೊಳಿಸಿ ನೀರಿನ ಸಮಸ್ಯೆ ಪರಿಹರಿಸಲು ಮುಂದಾದ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ರಾಗಲಪರ್ವಿ ,ಹೆಡಗಿನಾಳ,ಗೊನ್ವಾರ ,ರಾಮತ್ನಾಳ ,ಬಾದರ್ಲಿ ,ಒಳ ಬಳ್ಳಾರಿ ಗ್ರಾಮಗಳ ರೈತರಿಂದ ಸನ್ಮಾನಿಸಿ ಗೌರವಿಸಲಾಯಿತು.
ಇಂದು ತಿಮ್ಮಾಪುರ ಏತ ನೀರಾವರಿಗೆ ಶಾಸಕರು ಯದ್ದಲದೊಡ್ಡಿ ಮಠದ ಯಲ್ಲಾಲಿಂಗ ಮಹಾಸ್ವಾಮಿಗಳು ,ಒಳಬಳ್ಳಾರಿ ಶಿವಯೋಗಿ ಚನ್ನಬಸವ ಮಹಾಸ್ವಾಮಿಗಳು ,ಗೋನ್ವಾರ ಅಬ್ಬಾಸ ಅಲಿ ತಾತ ಮಠಾಧೀಶರು ಆಶಿರ್ವಾದದೊಂದಿಗೆ ಬಾಗಿನ ಅರ್ಪಿಸಿದರು.
ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಬಾಬುಗೌಡ ಬಾದರ್ಲಿ ,ಬಸವರಾಜ ಹಿರೇಗೌಡರ ,ಲಿಂಗಪ್ಪ ದಡೆಸ್ಗೂರು ರೈತರು ,ಅಧಿಕಾರಿಗಳ ಭಾಗವಹಿಸಿದ್ದರು.
ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಿದರು.